ಸಣ್ಣ ಕಾರಲ್ಲಿ ಓಡಾಡಿದ್ದಕ್ಕೆ ಶೆಹನಾಜ್ ಬಗ್ಗೆ ಟೀಕೆ; ಖಡಕ್ ಉತ್ತರ ಕೊಟ್ಟ ನಟಿ

ಶೆಹನಾಜ್ ಗಿಲ್ ಅವರು ಸರಳ ಕಾರಿನಲ್ಲಿ ಪ್ರಯಾಣಿಸಿದ್ದಕ್ಕೆ ಕೆಲವರು ಟೀಕಿಸಿದ್ದಾರೆ. ಆದರೆ, ಅವರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಐಷಾರಾಮಿ ಕಾರುಗಳಿಗೆ ಹೋಲಿಸಿದರೆ ಸರಳ ಜೀವನವನ್ನು ಆದ್ಯತೆ ನೀಡುವುದು ಅವರ ಸ್ವಭಾವ ಎಂದು ಹೇಳಿದ್ದಾರೆ. ಅವರ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

ಸಣ್ಣ ಕಾರಲ್ಲಿ ಓಡಾಡಿದ್ದಕ್ಕೆ ಶೆಹನಾಜ್ ಬಗ್ಗೆ ಟೀಕೆ; ಖಡಕ್ ಉತ್ತರ ಕೊಟ್ಟ ನಟಿ
ಶೆಹನಾಜ್
Edited By:

Updated on: Jun 24, 2025 | 8:06 AM

ಸೆಲೆಬ್ರಿಟಿಗಳು ಎಂದಾಗ ಐಷಾರಾಮಿ ಕಾರಲ್ಲೇ ಬರಬೇಕು ಎಂಬ ತಪ್ಪು ಮನಸ್ಥಿತಿ ಇದೆ. ಆದರೆ, ಎಲ್ಲಾ ಸಂದರ್ಭದಲ್ಲೂ ಸೆಲೆಬ್ರಿಟಿಗಳು ಕೂಡ ಹಾಗೆಯೇ ಯೋಚಿಸಬೇಕು ಎಂದೇನು ಇಲ್ಲ. ಸೆಲೆಬ್ರಿಟಿಗಳು ಕೆಲವೊಮ್ಮೆ ಸರಳವಾಗಿ ನಡೆದುಕೊಳ್ಳಲು ಇಷ್ಟಪಡುತ್ತಾರೆ. ಈಗ ಬಿಗ್ ಬಾಸ್ (Bigg Boss) ಹಾಗೂ ಹಿಂದಿ ನಟಿ ಶೆಹನಾಜ್ ಗಿಲ್ ಅವರು ಸಿಂಪಲ್ ಕಾರ್​ನಲ್ಲಿ ಬಂದಿದ್ದಾರೆ. ಇದಕ್ಕೆ ಕೆಲವರು ನಕ್ಕಿದ್ದಾರೆ. ಇದಕ್ಕೆ ನಟಿ ನಗುತ್ತಲೇ ಖಡಕ್ ಉತ್ತರ ಕೊಟ್ಟಿದ್ದಾರೆ.

ಶೆಹನಾಜ್ ಗಿಲ್ ಅವರು ಯಾವಾಗಲೂ ಸಿಂಪಲ್ ಆಗಿ ಇರೋಕೆ ಬಯಸುತ್ತಾರೆ. ಹಾಂಗಂತ ಅವರ ಬಳಿ ಶ್ರೀಮಂತಿಕೆ ಇಲ್ಲ ಎಂದೇನೂ ಅಲ್ಲ. ಏಪ್ರಿಲ್ ತಿಂಗಳಲ್ಲಿ ಅವರು ಮರ್ಸಿಡಿಸ್ ಬೆಂಜ್ ಜಿಎಲ್​ಎಸ್ ಕಾರನ್ನು ಖರೀದಿ ಮಾಡಿದ್ದರು. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಇದಾದ ಬಳಿಕ ಶೆಹನಾಜ್ ಅವರು ಅನೇಕ ಬಾರಿ ಇದೇ ಕಾರಿನಲ್ಲಿ ಕಾಣಿಸಿಕೊಂಡಿದ್ದು ಇದೆ. ಇದರ ಜೊತೆಗೆ ಅವರು ಸಣ್ಣ ಕಾರೊಂದರಲ್ಲಿ ಓಡಾಡಿದ್ದರು.

ಇದನ್ನೂ ಓದಿ
ಫಸ್ಟ್​ ಲವ್, ಫಸ್ಟ್ ಕಾರ್; ಎಲ್ಲಾ ಮೊದಲುಗಳ ಬಗ್ಗೆ ಮಾತನಾಡಿದ ರಶ್ಮಿಕಾ
ಸೋಮವಾರದ ಪರೀಕ್ಷೆಯಲ್ಲಿ ‘ಕುಬೇರ’, ‘ಸಿತಾರೇ ಜಮೀನ್ ಪರ್’ ಪಾಸ್
ವಿಷ್ಣು ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಣೆ
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

ಹೌದು, ಶೆಹನಾಜ್ ಅವರು ಇತ್ತೀಚೆಗೆ ಸಣ್ಣದಾದ ಕಾರೊಂದನ್ನು ಏರಲು ಹೋದರು. ಈ ವೇಳೆ ಪಾಪರಾಜಿಗಳು ನಕ್ಕೇ ಬಿಟ್ಟರು. ‘ಈ ಕಾರಲ್ಲಿ ಬಂದಿದ್ದೀರಾ’ ಎಂದು ಹೀಯಾಳಿಸುವಂತೆ ಮಾತನಾಡಿದರು. ಆದರೆ, ಶೆಹನಾಜ್ ಅವರು ‘ಇದು ಕೂಡ ಕಾರೇ ಅಲ್ಲವಾ’ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಅವರು ಸೈಲೆಂಟ್ ಆದರು.


ಶೆಹನಾಜ್ ಅವರ ಸರಳತೆಯನ್ನು ಒಂದು ಕಡೆಯಲ್ಲಿ ಎಲ್ಲರೂ ಹೊಗಳಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳು ಇದೇ ರೀತಿ ಇರಬೇಕು ಎಂದು ಅನೇಕರು ಹೇಳಿದ್ದಾರೆ. ಆದರೆ, ತಮ್ಮ ಸ್ಟೇಟಸ್​ಗೆ ಧಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಅನೇಕರು ದೊಡ್ಡ ಕಾರಿನಲ್ಲೇ ಓಡಾಟ ಮಾಡಲು ಬಯಸುತ್ತಾರೆ.

ಇದನ್ನೂ ಓದಿ: ಆರೇ ತಿಂಗಳಲ್ಲಿ ಬರೋಬ್ಬರಿ 55 ಕೆಜಿ ತೂಕ ಇಳಿಸಿಕೊಂಡ ಶೆಹನಾಜ್ ಗಿಲ್; ಹೇಗೆ ಸಾಧ್ಯವಾಯ್ತು?

ಶೆಹನಾಜ್ ಅವರು 2019ರಲ್ಲಿ ‘ಬಿಗ್ ಬಾಸ್ ಹಿಂದಿ ಸೀಸನ್ 13’ರಲ್ಲಿ ಭಾಗಿ ಆದರು. ಇದರಲ್ಲಿ ಅವರು ಎರಡನೇ ರನ್ನರ್ ಅಪ್ ಆದರು. ಸಿದ್ದಾರ್ಥ್ ಶುಕ್ಲಾ ಜೊತೆ ಅವರಿಗೆ ಪ್ರೀತಿ ಮೂಡಿತು. ಹೊರ ಬಂದ ಮೇಲೆ ಪ್ರೀತಿ ಮುಂದುವರಿಯಿತು. ಆದರೆ, ಸಿದ್ದಾರ್ಥ್ ಅವರು ನಿಧನ ಹೊಂದಿದರು ಅನ್ನೋದು ಬೇಸರದ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.