ಉದ್ಯಮಿ ರಾಜ್ ಕುಂದ್ರಾ ನೀಲಿ ಚಿತ್ರಗಳ ಹಗರಣದಲ್ಲಿ ಜೈಲು ಪಾಲಾಗಿದ್ದು, ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ತಮ್ಮ ಅಶ್ಲೀಲ ಸಿನಿಮಾ ದಂಧೆಯಲ್ಲಿ ಯುವತಿಯರನ್ನು ಯಾಮಾರಿಸಲು ಪತ್ನಿ ಶಿಲ್ಪಾ ಶೆಟ್ಟಿ (Shilpa Shetty) ಹೆಸರನ್ನೂ ಕೂಡ ರಾಜ್ ಕುಂದ್ರಾ (Raj Kundra) ಉಪಯೋಗಿಸಿಕೊಳ್ಳುತ್ತಿದ್ದರು ಎಂಬ ಸತ್ಯ ಈಗ ಬಯಲಾಗಿದೆ. ರಾಜ್ ಕುಂದ್ರಾ ಜೊತೆ ನಟಿ ಶೆರ್ಲಿನ್ ಚೋಪ್ರಾ ಕೂಡ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶೆರ್ಲಿನ್ (Sherlyn Chopra) ಹಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ. ಅಶ್ಲೀಲ ಸಿನಿಮಾ ದಂಧೆಯ ಪ್ರಮುಖ ಆರೋಪಿ ಆಗಿರುವ ರಾಜ್ ಕುಂದ್ರಾ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ಅವರು ನೀಡಿದ್ದಾರೆ.
ಇಂಥ ದಂಧೆಗೆ ಬರುವುವಂತೆ ತಮ್ಮನ್ನು ಮನವೊಲಿಸಿದ್ದೇ ರಾಜ್ ಕುಂದ್ರಾ ಎಂದ್ರ ಶೆರ್ಲಿನ್ ಚೋಪ್ರಾ ಆರೋಪ ಹೊರಿಸಿದ್ದಾರೆ. ಆ ಬಗ್ಗೆ ಅವರು ವಿವರವಾಗಿ ಮಾತನಾಡಿದ್ದಾರೆ. ‘ರಾಜ್ ಕುಂದ್ರಾ ಅವರೇ ನನ್ನ ಗುರು. ಬರೀ ಗ್ಲಾಮರ್ಗಾಗಿ ಶೂಟಿಂಗ್ ಮಾಡುತ್ತಿದ್ದೇವೆ ಎಂದು ಅವರು ನನ್ನ ದಾರಿ ತಪ್ಪಿಸಿದರು. ನನ್ನ ಫೋಟೋ ಮತ್ತು ವಿಡಿಯೋಗಳನ್ನು ಶಿಲ್ಪಾ ಶೆಟ್ಟಿ ಕೂಡ ಇಷ್ಟಪಟ್ಟಿದ್ದಾರೆ ಅಂತ ರಾಜ್ ಕುಂದ್ರಾ ನನಗೆ ಹೇಳಿದ್ದರು. ಅರೆ ನಗ್ನ ಮತ್ತು ನೀಲಿ ಸಿನಿಮಾಗಳು ತುಂಬ ಕಾಮನ್. ಅದನ್ನು ಎಲ್ಲರೂ ಮಾಡುತ್ತಾರೆ ಅಂತ ನನ್ನನ್ನು ಅವರು ನಂಬಿಸಿದರು’ ಎಂದು ಶೆರ್ಲಿನ್ ಹೇಳಿದ್ದಾರೆ.
‘ಇದೆಲ್ಲ ಹೇಗೆ ಶುರುವಾಯಿತು ಎಂಬುದೇ ನನಗೆ ಗೊತ್ತಿಲ್ಲ. ಒಂದು ದಿನ ಇಂಥ ಹಗರಣದಲ್ಲಿ ನಾನು ಸಿಕ್ಕಿಕೊಳ್ಳುತ್ತೇನೆ ಮತ್ತು ಪೊಲೀಸರ ಎದುರಿನಲ್ಲಿ ಹೇಳಿಕೆ ನೀಡಬೇಕಾಗುತ್ತದೆ ಎಂಬ ಅರಿವೇ ನನಗೆ ಇರಲಿಲ್ಲ. ಮೊದಲ ಬಾರಿಗೆ ನಾನು ರಾಜ್ ಕುಂದ್ರಾ ಅವರನ್ನು ಭೇಟಿ ಆದಾಗ ನನ್ನ ಬದುಕೇ ಬದಲಾಗುತ್ತದೆ ಎಂದುಕೊಂಡಿದ್ದೆ. ನನಗೆ ದೊಡ್ಡ ಯಶಸ್ಸು ಸಿಗುತ್ತೆ ಅಂತ ಭಾವಿಸಿದ್ದೆ. ಶಿಲ್ಪಾ ಶೆಟ್ಟಿ ಗಂಡ ನನ್ನಿಂದ ಕೆಟ್ಟ ಕೆಲಸ ಮಾಡಿಸುತ್ತಾರೆ ಎಂಬುದನ್ನು ನಾನು ಊಹಿಸಿಯೇ ಇರಲಿಲ್ಲ’ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.
‘ಮೊದಲಿಗೆ ನಾನು ಅವರ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ನಟಿಸಲು ಶುರುಮಾಡಿದೆ. ಆರಂಭದಲ್ಲಿ ಗ್ಲಾಮರಸ್ ವಿಡಿಯೋ, ನಂತರ ಬೋಲ್ಡ್ ವಿಡಿಯೋ, ಬಳಿಕ ಅರೆ ನಗ್ನ ವಿಡಿಯೋ ಮಾಡಿದೆ. ಕೊನೆಗೆ ಸಂಪೂರ್ಣ ನಗ್ನವಾಗಿ ನಟಿಸಬೇಕಾಯಿತು. ಇದನ್ನು ಎಲ್ಲರೂ ಮಾಡುತ್ತಾರೆ. ಹಾಗಾಗಿ ಇದರಲ್ಲಿ ತಪ್ಪೇನೂ ಇಲ್ಲ ಅಂತ ನನ್ನನ್ನು ನಂಬಿಸಲಾಗಿತ್ತು’ ಎಂದು ರಾಜ್ ಕುಂದ್ರಾ ಮೇಲೆ ಶೆರ್ಲಿನ್ ಚೋಪ್ರಾ ಗೂಬೆ ಕೂರಿಸಿದ್ದಾರೆ.
ಇದನ್ನೂ ಓದಿ:
ಪೊಲೀಸರು ನನ್ನಿಂದ ಬಲವಂತವಾಗಿ ರಾಜ್ ಕುಂದ್ರಾ ಹೆಸರು ಹೇಳಿಸಲು ಪ್ರಯತ್ನಿಸಿದ್ರು; ನಟಿ ಗೆಹನಾ ಸ್ಫೋಟಕ ಆರೋಪ
ಪತಿ ರಾಜ್ ಕುಂದ್ರಾ ನೀಲಿ ಚಿತ್ರ ಕರ್ಮಕಾಂಡದಿಂದ ಶಿಲ್ಪಾ ಶೆಟ್ಟಿಗೆ ಆಗುತ್ತಿದೆ ಕೋಟಿ ಕೋಟಿ ನಷ್ಟ
Published On - 3:11 pm, Sat, 7 August 21