ಹಿಂದಿ ಚಿತ್ರಗಳಿಗೆ ನೀಡಲಾಗುವ ಪ್ರತಿಷ್ಠಿತ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿಯ 22 ನೇ ವರ್ಷದ ಪ್ರಶಸ್ತಿಗಳನ್ನು (IIFA Awards 2022) ಘೋಷಿಸಲಾಗಿದೆ. ಶುಕ್ರವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ತಾಂತ್ರಿಕ ವಿಭಾಗದ ಪ್ರಶಸ್ತಿಗಳನ್ನು ಘೋಷಿಸಲಾಗಿತ್ತು. ಶನಿವಾರ ರಾತ್ರಿ ಇತರ ವಿಭಾಗಗಳ ವಿಜೇತರನ್ನು ಘೋಷಿಸಲಾಗಿದೆ. ಅಬುಧಾಬಿಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ನ ಪ್ರತಿಷ್ಠಿತ ತಾರೆಗಳು ಭಾಗವಹಿಸಿದ್ದರು. ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷ ಸಮಾರಂಭ ನಡೆದಿರಲಿಲ್ಲ. ಈ ವರ್ಷ ಮೇ 19-21ರವರೆಗೆ ಸಮಾರಂಭ ನಡೆಯಬೇಕಿತ್ತು. ಆದರೆ ಯುಎಇ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಯೇದ್ ಅಲ್ ನ್ಹ್ಯಾನ್ ನಿಧನ ಹೊಂದಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿತ್ತು. ಪ್ರಸ್ತುತ ನಡೆದ ಸಮಾರಂಭದಲ್ಲಿ ಸಲ್ಮಾನ್ ಖಾನ್, ವಿಕ್ಕಿ ಕೌಶಲ್, ಶಾಹಿದ್ ಕಪೂರ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಕೃತಿ ಸನೋನ್, ಅನನ್ಯಾ ಪಾಂಡೆ, ಎಆರ್ ರೆಹಮಾನ್, ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ಯೋ ಯೋ ಹನಿ ಸಿಂಗ್ ಮೊದಲಾದವರು ಭಾಗವಹಿಸಿದ್ದರು. ಸಲ್ಮಾನ್ ಖಾನ್, ಮನೀಷ್ ಪೌಲ್ ಹಾಗೂ ರಿತೇಶ್ ದೇಶ್ಮುಖ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಶಸ್ತಿ ವಿಜೇತರು ಯಾರೆಲ್ಲಾ?:
ಕ್ಯಾಪ್ಟನ್ ವಿಕ್ರಮ್ ಬಾತ್ರಾರ ಜೀವನ ಆಧರಿಸಿದ ‘ಶೇರ್ಷಾ’ ಚಿತ್ರ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಗೆದ್ದುಕೊಂಡಿತು. ಈ ಚಿತ್ರಕ್ಕಾಗಿ ವಿಷ್ಣು ವರ್ಧನ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದರು. ವಿಕ್ಕಿ ಕೌಶಲ್ ‘ಸರ್ದಾರ್ ಉಧಮ್ ಸಿಂಗ್’ ಚಿತ್ರಕ್ಕಾಗಿ ಪ್ರಶಸ್ತಿ ಗೆದ್ದರೆ, ‘ಮಿಮಿ’ ಚಿತ್ರಕ್ಕಾಗಿ ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಇತರ ಪ್ರಶಸ್ತಿಗಳ ವಿಜೇತರ ವಿವರ ಇಲ್ಲಿದೆ:
– ಅತ್ಯುತ್ತಮ ಪೋಷಕ ಪಾತ್ರ (ಮಹಿಳೆ): ಸಾಯಿ ತಮ್ಹಂಕರ್ (ಮಿಮಿ)
– ಅತ್ಯುತ್ತಮ ಪೋಷಕ ಪಾತ್ರ (ಪುರುಷ): ಪಂಕಜ್ ತ್ರಿಪಾಠಿ (ಲುಡೋ)
– ಸಂಗೀತ ನಿರ್ದೇಶನ: ‘ಅತರಂಗಿ ರೇ’ ಚಿತ್ರಕ್ಕಾಗಿ ಎ.ಆರ್. ರೆಹಮಾನ್ ಹಾಗೂ ‘ಶೇರ್ಷಾ’ ಚಿತ್ರಕ್ಕಾಗಿ ತನಿಷ್ಕ್ ಬಾಗ್ಚಿ, ಜಸ್ಲೀನ್ ರಾಯಲ್, ಜಾವೇದ್-ಮೊಹ್ಸಿನ್, ವಿಕ್ರಮ್ ಮಾಂಟ್ರೋಸ್, ಬಿ ಪ್ರಾಕ್, ಜಾನಿ ಪ್ರಶಸ್ತಿ ಹಂಚಿಕೊಂಡಿದ್ದಾರೆ.
– ಹಿನ್ನೆಲೆ ಗಾಯಕಿ (ಮಹಿಳೆ): ಅಸೀಸ್ ಕೌರ್; ‘ಶೇರ್ಷಾ’ದ ರಾತನ್ ಲಂಬಿಯಾನ್ ಹಾಡಿಗಾಗಿ
– ಹಿನ್ನೆಲೆ ಗಾಯಕ (ಪುರುಷ): ಜುಬಿನ್ ನೌಟಿಯಲ್; ‘ಶೇರ್ಷಾ’ದ ರಾತನ್ ಲಂಬಿಯಾನ್ ಹಾಡಿಗಾಗಿ
– ಅತ್ಯುತ್ತಮ ಕಥೆ (ಮೂಲ): ಅನುರಾಗ್ ಬಸು (ಲುಡೋ)
– ಅತ್ಯುತ್ತಮ ಕಥೆ (ಅಳವಡಿಕೆ): ಕಬೀರ್ ಖಾನ್, ಸಂಜಯ್ ಪುರಾನ್ ಸಿಂಗ್ ಚೌಹಾಣ್ (83 ಚಿತ್ರ)
– ಸಾಹಿತ್ಯ: ಲೆಹ್ರಾ ದೋಗಾಗಿ ಕೌಸರ್ ಮುನೀರ್ (83)
– ಸಾಹಿತ್ಯ: 83 ಚಿತ್ರದ ‘ಲೆಹ್ರಾ ದೋ’ಗಾಗಿ ಕೌಸರ್ ಮುನೀರ್
– ಪದಾರ್ಪಣೆ ಚಿತ್ರದಲ್ಲಿ ಅತ್ಯುತ್ತಮ ಅಭಿನಯ (ಮಹಿಳೆ): ಶಾರ್ವರಿ ವಾಘ್ (ಬಂಟಿ ಔರ್ ಬಬ್ಲಿ 2)
– ಪದಾರ್ಪಣೆ ಚಿತ್ರದಲ್ಲಿ ಅತ್ಯುತ್ತಮ ಅಭಿನಯ (ಪುರುಷ): ಅಹಾನ್ ಶೆಟ್ಟಿ (ತಡಪ್ 2)
ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ