ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ವಿಕ್ರಮ್’; ಎಲ್ಲೆಲ್ಲೂ ಕಮಲ್ ಹಾಸನ್ ಅಬ್ಬರ

‘ವಿಕ್ರಮ್’ ಸಿನಿಮಾಗೂ ದೊಡ್ಡ ಪ್ರಚಾರ ಸಿಗುತ್ತಿದೆ. ವೀಕೆಂಡ್​ನಲ್ಲಿ ಚಿತ್ರವನ್ನು ಮುಗಿಬಿದ್ದು ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ.

ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ವಿಕ್ರಮ್’; ಎಲ್ಲೆಲ್ಲೂ ಕಮಲ್ ಹಾಸನ್ ಅಬ್ಬರ
ವಿಕ್ರಮ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 05, 2022 | 2:53 PM

‘ವಿಕ್ರಮ್​’ ಸಿನಿಮಾ (Vikram Movie) ಕಮಲ್​ ಹಾಸನ್​ ಪಾಲಿಗೆ ಒಂದೊಳ್ಳೆಯ ಕಂಬ್ಯಾಕ್ ಸಿನಿಮಾ ಆಗಿದೆ. ಸ್ಟಾರ್​ಗಳು ಯಾವ ರೀತಿ ಕಂಬ್ಯಾಕ್ ಮಾಡಬೇಕು ಎಂದುಕೊಂಡಿರುತ್ತಾರೋ ಅದಕ್ಕಿಂತ ಹೆಚ್ಚಿನದ್ದನ್ನೇ ‘ವಿಕ್ರಮ್​’ ಸಿನಿಮಾ ನೀಡಿದೆ. ನಿರ್ದೇಶಕ ಲೋಕೇಶ್ ಕನಗರಾಜ್ ಜತೆ ಕಮಲ್​ ಹಾಸನ್ (Kamal Haasan) ಕೈ ಜೋಡಿಸಿದಾಗಲೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಈ ನಿರೀಕ್ಷೆಯನ್ನು ಸಿನಿಮಾ ನಿಜ ಮಾಡಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಎರಡೇ ದಿನಕ್ಕೆ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ಚಿತ್ರ ಹಲವು ದಾಖಲೆಗಳನ್ನು ಬರೆಯುತ್ತಿದೆ. ಇದು ತಂಡದ ಖುಷಿಯನ್ನು ಹೆಚ್ಚಿಸಿದೆ.

ಜೂನ್​ 3ರಂದು ‘ವಿಕ್ರಮ್’ ಸಿನಿಮಾ ರಿಲೀಸ್ ಆಯಿತು. ಮೊದಲ ದಿನ ಚಿತ್ರಕ್ಕೆ ಯಾವ ರೀತಿ ವಿಮರ್ಶೆ ಸಿಗುತ್ತದೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಸಿನಿಮಾ ಉತ್ತಮವಾಗಿದ್ದರೆ ಬಾಯಿ ಮಾತಿನಿಂದ ಪ್ರಚಾರ ಸಿಗುತ್ತದೆ. ಈಗ ‘ವಿಕ್ರಮ್’ ಸಿನಿಮಾಗೂ ದೊಡ್ಡ ಪ್ರಚಾರ ಸಿಗುತ್ತಿದೆ. ವೀಕೆಂಡ್​ನಲ್ಲಿ ಚಿತ್ರವನ್ನು ಮುಗಿಬಿದ್ದು ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ
Image
ಕಮಲ್ ಹಾಸನ್ ‘ವಿಕ್ರಮ್​’ಗೆ ಕರ್ನಾಟಕದಲ್ಲಿ ವಿರೋಧ, ಸಿನಿಮಾ ನಿಷೇಧಿಸಲು ಆಗ್ರಹ; ಚಿತ್ರತಂಡ ಮಾಡಿದ ತಪ್ಪೇನು?
Image
Vikram Twitter Review: ಮುಂಜಾನೆಯೇ ‘ವಿಕ್ರಮ್​’ ಚಿತ್ರ ನೋಡಿ ‘ಮ್ಯಾಜಿಕ್​’ ಅಂತ ಹೊಗಳಿದ ಪ್ರೇಕ್ಷಕರು
Image
Vikram Movie on Burj Khalifa: ಕಿಚ್ಚ ಸುದೀಪ್​ ಹಾದಿಯಲ್ಲಿ ಸಾಗ್ತಿದ್ದಾರೆ ಕಮಲ್​ ಹಾಸನ್​; ಕನ್ನಡದ ಟ್ರೆಂಡ್​ ಫಾಲೋ ಮಾಡ್ತಿದೆ ‘ವಿಕ್ರಮ್​’ ಚಿತ್ರ
Image
ಕಮಲ್​ ಹಾಸನ್​ ನಟನೆಯ ‘ವಿಕ್ರಮ್​’ ಚಿತ್ರಕ್ಕೆ 13 ಕಡೆ ಕತ್ತರಿ ಹಾಕಿದ ಸೆನ್ಸಾರ್​ ಮಂಡಳಿ; ಸಿಕ್ಕ ಪ್ರಮಾಣಪತ್ರ ಯಾವುದು?

ಲೋಕೇಶ್ ಕನಗರಾಜ್ ಅವರು ಒಂದು ರಿವೇಂಜ್ ಸ್ಟೋರಿ ಹೇಳಿದ್ದಾರೆ. ಈ ಕಥೆಗೆ ಕಮಲ್ ಹಾಸನ್​, ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಜೀವ ತುಂಬಿದ್ದಾರೆ. ಈ ಕಲಾವಿದರ ಅಬ್ಬರದಿಂದ ಮೊದಲ ದಿನ ತಮಿಳುನಾಡಿನಲ್ಲಿ ಈ ಸಿನಿಮಾ 20.61 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ (ಜೂನ್ 4) 14.47 ಕೋಟಿ ರೂಪಾಯಿ ಬಾಚಿಕೊಂಡಿದೆ ಈ ಸಿನಿಮಾ. ಒಟ್ಟಾರೆ ತಮಿಳುನಾಡು ಕಲೆಕ್ಷನ್ 35 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?

ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಮೊದಲ ದಿನ 62 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಶನಿವಾರದ ಕಲೆಕ್ಷನ್ ಸೇರಿ ಸಿನಿಮಾದ ಗಳಿಕೆ 100 ಕೋಟಿ ರೂಪಾಯಿ ದಾಟಿದೆ. ಇದು ಕಮಲ್ ಹಾಸನ್ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಇಂದು (ಜೂನ್​ 5) ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಸೋಮವಾರದ (ಜೂನ್ 6) ಪರೀಕ್ಷೆಯಲ್ಲಿ ಸಿನಿಮಾ ಯಾವ ರೀತಿಯ ಕಲೆಕ್ಷನ್ ಮಾಡಲಿದೆ ಅನ್ನೋದು ಸದ್ಯದ ಕುತೂಹಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ