AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಸ್ಟೊರೆಂಟ್ ಬಾಗಿಲು ಹಾಕಿದರೂ ಯಶಸ್ವಿ ಉದ್ಯಮಿ ಎನಿಸಿಕೊಂಡ ಶಿಲ್ಪಾ ಶೆಟ್ಟಿ: ಹೇಗೆ?

Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಟನೆ ಮಾತ್ರವೇ ಅಲ್ಲದೆ ಹಲವು ಉದ್ಯಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದಲೂ ಬಾಸ್ಟಿಯನ್ ಹೆಸರಿನ ಹೋಟೆಲ್​​ನ ಸಹ ಮಾಲಕಿ ಆಗಿದ್ದಾರೆ. ಆದರೆ ಇದೀಗ ಮುಂಬೈನಲ್ಲಿರುವ ಬಾಸ್ಟಿಯನ್ ಹೋಟೆಲ್ ಅನ್ನು ಬಾಗಿಲು ಹಾಕಿದ್ದಾರೆ. ಆದರೂ ಅತಿ ದೊಡ್ಡ ಹೋಟೆಲಿಯರ್ ಎನಿಸಿಕೊಂಡಿದ್ದಾರೆ ಶಿಲ್ಪಾ. ಹೇಗೆ?

ರೆಸ್ಟೊರೆಂಟ್ ಬಾಗಿಲು ಹಾಕಿದರೂ ಯಶಸ್ವಿ ಉದ್ಯಮಿ ಎನಿಸಿಕೊಂಡ ಶಿಲ್ಪಾ ಶೆಟ್ಟಿ: ಹೇಗೆ?
Shilpa Shetty
ಮಂಜುನಾಥ ಸಿ.
|

Updated on:Sep 03, 2025 | 5:37 PM

Share

ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ (Shilpa Shetty) ದಶಕಗಳಿಂದಲೂ ಬಾಲಿವುಡ್​​ನಲ್ಲಿ ಬೇಡಿಕೆಯಲ್ಲಿರುವ ನಟಿ. ಬಾಲಿವುಡ್ ಮಾತ್ರವೇ ಅಲ್ಲದೆ, ಕನ್ನಡ, ತೆಲುಗು, ತಮಿಳು ಭಾಷೆಗಳ ಸಿನಿಮಾಗಳಲ್ಲಿಯೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಅಂದಹಾಗೆ ಶಿಲ್ಪಾ ಶೆಟ್ಟಿ ಕೇವಲ ನಟಿ ಮಾತ್ರವೇ ಅಲ್ಲ, ಶಿಲ್ಪಾ ಶೆಟ್ಟಿ ಉದ್ಯಮಿಯೂ ಹೌದು. ಉದ್ಯಮದ ಕಾರಣಕ್ಕೆ ಈ ಹಿಂದೆ ಕೆಲ ಬಾರಿ ಸುದ್ದಿಯಲ್ಲೂ ಇದ್ದರು ನಟಿ. ಇತ್ತೀಚೆಗೆ ಸಹ ಶಿಲ್ಪಾ ಮೇಲೆ 60 ಕೋಟಿ ವಂಚನೆ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಶಿಲ್ಪಾ ಶೆಟ್ಟಿ ತಮ್ಮ ರೆಸ್ಟೊರೆಂಟ್ ಗೆ ಬಾಗಿಲು ಹಾಕಿದ್ದಾರೆ. ಹಾಗೆಂದು ಶಿಲ್ಪಾ, ಹೋಟೆಲ್ ಉದ್ಯಮದಲ್ಲಿ ನಷ್ಟ ಅನುಭವಿಸಿಲ್ಲ. ಬದಲಿಗೆ ಹೆಚ್ಚು ಲಾಭ ಗಳಿಸಿದ್ದಾರೆ.

ಶಿಲ್ಪಾ ಶೆಟ್ಟಿ, ಮುಂಬೈನ ಪ್ರತಿಷ್ಠಿತ ಏರಿಯಾ ಬಾಂಡ್ರಾನಲ್ಲಿ ಬಾಸ್ಟಿಯನ್ ಹೆಸರಿನ ರೆಸ್ಟೊರೆಂಟ್ ತೆರೆದಿದ್ದರು. ಬಾಂಡ್ರಾದ ಜನಪ್ರಿಯ ರೆಸ್ಟೋರೆಂಟ್​ಗಳಲ್ಲಿ ಇದು ಸಹ ಒಂದಾಗಿತ್ತು. ಆದರೆ ಇದೀಗ ಹಠಾತ್ತನೆ ರೆಸ್ಟೊರೆಂಟ್ ಅನ್ನು ಬಂದ್ ಮಾಡುತ್ತಿದ್ದಾರೆ ಶಿಲ್ಪಾ ಶೆಟ್ಟಿ. ಗುರುವಾರ ರೆಸ್ಟೊರೆಂಟ್ ಬಂದ್ ಆಗಲಿದ್ದು, ಗುರುವಾರದ ದಿನದಂದು ರೆಸ್ಟೊರೆಂಟ್​​ನಲ್ಲಿ ಕೊನೆಯ ಆತಿಥ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ‘ಈ ಗುರುವಾರ ಮುಂಬೈನ ಅತ್ಯಂತ ಪ್ರಸಿದ್ಧ ತಾಣಗಳಲ್ಲಿ ಒಂದಾದ ಬ್ಯಾಸ್ಟಿಯನ್ ಬಾಂದ್ರಾಕ್ಕೆ ನಾವು ವಿದಾಯ ಹೇಳುತ್ತಿದ್ದು, ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ನಮಗೆ ಲೆಕ್ಕವಿಲ್ಲದಷ್ಟು ನೆನಪುಗಳು, ಮರೆಯಲಾಗದ ಸ್ಮರಣೆಗಳನ್ನು ಮತ್ತು ನಗರದ ರಾತ್ರಿಜೀವನವನ್ನು ಭಿನ್ನವಾಗಿ ರೂಪಿಸಿದ ಹೆಮ್ಮೆಯ ಕ್ಷಣಗಳನ್ನು ನೀಡಿದ ಸ್ಥಳವು ಈಗ ತನ್ನ ಅಂತಿಮ ಬಿಲ್ಲನ್ನು ಪಡೆಯುತ್ತಿದೆ’ ಎಂದಿದ್ದಾರೆ.

ಮುಂದುವರೆದು, ‘ಹಲವಾರು ನೆನಪುಗಳನ್ನು ನೀಡಿರುವ ಈ ಸ್ಥಳವನ್ನು ಗೌರವಿಸಲು, ನಾವು ನಮ್ಮ ಹತ್ತಿರದ ಗ್ರಾಹಕರು, ನಮ್ಮ ಏಳ್ಗೆಯಲ್ಲಿ ಸಹಾಯ ಮಾಡಿದ ಪೋಷಕರಿಗಾಗಿ ಒಂದು ವಿಶೇಷ ಪಾರ್ಟಿಯನ್ನು ಆಯೋಜಿಸುತ್ತಿದ್ದೇವೆ. ಹಳೆಯ ನೆನಪುಗಳು ಮತ್ತು ಮಾಂತ್ರಿಕತೆಯಿಂದ ತುಂಬಿರುವ ಪಾರ್ಟಿ ಅದಾಗಲಿದೆ’ ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಗುರುವಾರ ರಾತ್ರಿ ಈ ವಿಶೇಷ ಪಾರ್ಟಿಯನ್ನು ಬಾಸ್ಟನ್​​​ನಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ:ಶಿಲ್ಪಾ ಶೆಟ್ಟಿಗೆ ಗಣೇಶ ಹಬ್ಬ ಎಂದ್ರೆ ಸಖತ್ ಸ್ಪೆಷಲ್

ಬಾಸ್ಟಿಯನ್ ಬಾಂದ್ರಾ ಬಂದ್ ಆಗಿದೆಯಾದರೂ ಬಾಸ್ಟಿಯನ್ ಹೋಟೆಲ್​ ಚೈನ್ ಭಾರತದ ಅತಿ ದೊಡ್ಡ ಫೈನ್ ಡೈನ್ ಹೋಟೆಲ್ ಚೈನ್​​ಗಳಲ್ಲಿ ಒಂದಾಗಿದೆ. ಬೆಂಗಳೂರು, ಪುಣೆ, ಮುಂಬೈ, ಹೊರದೇಶಗಳಲ್ಲಿ ಸಹ ಬಾಸ್ಟಿಯನ್ ಹೋಟೆಲ್​ಗಳು ಇವೆ. ಬಾಸ್ಟಿಯನ್ ಬಾಂದ್ರಾ ಬಂದ್ ಆಗಿದ್ದರೂ ಸಹ ಶಿಲ್ಪಾ ಶೆಟ್ಟಿ ಭಾರತದ ಅತಿ ದೊಡ್ಡ ಹೋಟೆಲಿಯರ್ ಎನಿಸಿಕೊಂಡಿದ್ದಾರೆ. 2024ರಲ್ಲಿ ಅವರ ಸಹ ಮಾಲೀಕತ್ವದ ಬಾಸ್ಟಿಯನ್ ಅತಿ ಹೆಚ್ಚು ತೆರಿಗೆ ತುಂಬಿದ ಹೋಟೆಲ್ ಸಂಸ್ಥೆಯಾಗಿದೆ. ಈಗಲೂ ಸಹ ಬಾಸ್ಟಿಯನ್ ಬಾಂದ್ರಾ ಬಂದ್ ಆಗಿದ್ದರೂ ಸಹ ಮುಂಬೈನ ದಾದರ್ ವೆಸ್ಟ್​​ನಲ್ಲಿ ಬಾಸ್ಟಿಯನ್ ರೂಫ್ ಟಾಪ್ ಕಾರ್ಯ ನಿರ್ವಹಿಸುತ್ತಲೇ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Wed, 3 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ