ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಪತಿ ರಾಜ್ ​ಕುಂದ್ರಾ ಬಗ್ಗೆ ಶಿಲ್ಪಾ ಶೆಟ್ಟಿಗೆ ಇರುವ ಅಭಿಪ್ರಾಯವೇ ಬೇರೆ

| Updated By: ರಾಜೇಶ್ ದುಗ್ಗುಮನೆ

Updated on: Sep 09, 2022 | 3:32 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ ನಂತರದಲ್ಲಿ ರಾಜ್​ ಕುಂದ್ರಾಗೆ ಧೈರ್ಯದಿಂದ ಮುಖ ಎತ್ತಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮುಖಕ್ಕೆ ಬಟ್ಟೆ ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ.

ಮುಖ ಮುಚ್ಚಿಕೊಂಡು ಓಡಾಡುತ್ತಿರುವ ಪತಿ ರಾಜ್ ​ಕುಂದ್ರಾ ಬಗ್ಗೆ ಶಿಲ್ಪಾ ಶೆಟ್ಟಿಗೆ ಇರುವ ಅಭಿಪ್ರಾಯವೇ ಬೇರೆ
ರಾಜ್​ ಕುಂದ್ರಾ-ಶಿಲ್ಪಾ
Follow us on

ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್​ ಕುಂದ್ರಾ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಹಲವು ವಾರಗಳ ಕಾಲ ಅವರು ಜೈಲಿನಲ್ಲೇ ಇರಬೇಕಾಯಿತು. ಆ ದಿನಗಳು ಶಿಲ್ಪಾ ಶೆಟ್ಟಿಗೆ ಸಾಕಷ್ಟು ಚಾಲೆಂಜಿಂಗ್ ಆಗಿತ್ತು. ಸಾರ್ವಜನಿಕ ಬದುಕಿನಲ್ಲಿದ್ದಾಗ ಈ ರೀತಿ ಆದರೆ ಧೈರ್ಯದಿಂದ ಮುಖ ಎತ್ತಿಕೊಂಡು ಓಡಾಡುವುದು ಕಷ್ಟ. ಆದರೆ, ಶಿಲ್ಪಾ ಶೆಟ್ಟಿ ಇವೆಲ್ಲವನ್ನೂ ಎದುರಿಸಿ ಮುಂದೆ ಬಂದಿದ್ದಾರೆ. ಆದರೆ, ರಾಜ್​ ಕುಂದ್ರಾ (Raj Kundra) ಅವರು ಈಗಲೂ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಪತಿ ಬಗ್ಗೆ ಇರುವ ಅಭಿಪ್ರಾಯ ಏನು ಎಂಬುದನ್ನು ಶಿಲ್ಪಾ ರಿವೀಲ್ ಮಾಡಿದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ ನಂತರದಲ್ಲಿ ರಾಜ್​ ಕುಂದ್ರಾಗೆ ಧೈರ್ಯದಿಂದ ಮುಖ ಎತ್ತಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮುಖಕ್ಕೆ ಬಟ್ಟೆ ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಅವರಿಗೆ ಜನರನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಶಿಲ್ಪಾ ಶೆಟ್ಟಿ ಆ ರೀತಿ ಅಲ್ಲ. ಪತಿಯ ತಪ್ಪನ್ನು ಮನ್ನಿಸಿ ಅವರ ಜತೆ ಜೀವನ ನಡೆಸುತ್ತಿದ್ದಾರೆ. ರಾಜ್​ ಕುಂದ್ರಾ ಬರ್ತ್​​ಡೇ ಅಂಗವಾಗಿ ಅವರು ಭಾವನಾತ್ಮಕ ಪತ್ರ ಬರೆದಿದ್ದಾರೆ.

ಪತಿ ಹಾಗೂ ಮಕ್ಕಳ ಜತೆ ಇರುವ ಫೋಟೋವನ್ನು ಶಿಲ್ಪಾ ಪೋಸ್ಟ್ ಮಾಡಿದ್ದಾರೆ. ‘ನೀವು ನನ್ನ ಬೆಸ್ಟ್ ಫ್ರೆಂಡ್​ ಆಗಿದ್ದಕ್ಕೆ, ನನ್ನ ಮಕ್ಕಳಿಗೆ ತಂದೆ ಆಗಿದ್ದಕ್ಕೆ, ನನ್ನ ಪ್ರೀತಿ ಆಗಿದ್ದಕ್ಕೆ, ನನ್ನ ಶಕ್ತಿ ಆಗಿರುವುದಕ್ಕೆ ಧನ್ಯವಾದಗಳು. ಹ್ಯಾಪಿ ಬರ್ತ್​​ಡೇ. ನಿಮಗೆ ದೇವರು ಮತ್ತಷ್ಟು ಶಕ್ತಿ, ಆರೋಗ್ಯ, ರಕ್ಷಣೆ ನೀಡಲಿ’ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
‘ನಾನು ಅಶ್ಲೀಲ ಸಿನಿಮಾ ಮಾಡಿಲ್ಲ, ಮುಖ ಮುಚ್ಕೊಂಡು ಓಡಾಡಲ್ಲ’; ಮೌನ ಮುರಿದ ರಾಜ್​ ಕುಂದ್ರಾ
‘ರಾಜ್​ ಕುಂದ್ರಾ ದಾರಿ ತಪ್ಪಲು ಕಾರಣವಾದ ಈಕೆಗೆ ಬಟ್ಟೆ ಬಿಚ್ಚೋದು ಬಿಟ್ಟು ಬೇರೇನೂ ಗೊತ್ತಿಲ್ಲ’: ಗೆಹನಾ ಆರೋಪ
Shilpa Shetty: ರಾಜ್​ ಕುಂದ್ರಾ ಪೋರ್ನ್​ ದಂಧೆಯಲ್ಲಿ ಶಿಲ್ಪಾ ಶೆಟ್ಟಿ ತಪ್ಪು ಒಪ್ಪಿಕೊಳ್ಳಲಿ ಎಂದು ಹಠ ಹಿಡಿದ ಶೆರ್ಲಿನ್​ ಚೋಪ್ರಾ
Shilpa Shetty: ರಾಜ್​ ಕುಂದ್ರಾ ಜೈಲಿನಲ್ಲಿರುವಾಗಲೇ ಗುಡ್​ ನ್ಯೂಸ್​ ನೀಡಿದ ಶಿಲ್ಪಾ ಶೆಟ್ಟಿ

ಇದನ್ನೂ ಓದಿ: Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ ಅವರು ಜೈಲಿನಿಂದ ಹೊರ ಬಂದ ನಂತರದಲ್ಲಿ ಶಿಲ್ಪಾ ವಿಚ್ಛೇದನ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ಸುದ್ದಿ ಸುಳ್ಳಾಗಿದೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇತ್ತೀಚೆಗೆ ಶೂಟಿಂಗ್ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಕಾಲಿಗೆ ಪೆಟ್ಟಾಗಿದೆ. ಹೀಗಾಗಿ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.