ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಇಂದು ಪರಿಚಯ ಅಗತ್ಯವಿಲ್ಲ. ಹಲವು ಸಿನಿಮಾಗಳಲ್ಲಿ ಸ್ಟ್ರಾಂಗ್ ರೋಲ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ ಶಿಲ್ಪಾ. ಇಂದು ಬಾಲಿವುಡ್ನಿಂದ ದೂರವಾಗಿದ್ದರೂ ಅವರ ವೈಯಕ್ತಿಕ ಜೀವನ ಸದಾ ಸುದ್ದಿಯಲ್ಲಿರುತ್ತದೆ. ಶಿಲ್ಪಾ ಅವರ ವೃತ್ತಿಪರ ಜೀವನವಲ್ಲದೆ, ಅವರ ವೈಯಕ್ತಿಕ ಜೀವನವೂ ಹೆಚ್ಚು ಚರ್ಚೆಯಲ್ಲಿದೆ. ಶಿಲ್ಪಾ ಈಗ ಪತಿ ರಾಜ್ ಕುಂದ್ರಾ ಮತ್ತು ಇಬ್ಬರು ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಶಿಲ್ಪಾ ಹೆಸರು ಹಲವರಿಗೆ ತಳುಕು ಹಾಕಿಕೊಂಡ ಕಾಲವೂ ಇತ್ತು.
ಬಾಲಿವುಡ್‌ನಲ್ಲಿ ಕೆಲಸ ಮಾಡುವಾಗ, ಶಿಲ್ಪಾ ಶೆಟ್ಟಿ ಮತ್ತು ನಟ ಅಕ್ಷಯ್ ಕುಮಾರ್ ಅವರ ಸಂಬಂಧವು ಹಾಟ್ ಟಾಪಿಕ್ ಆಗಿತ್ತು. ಆದರೆ ಅಕ್ಷಯ್ ಜೊತೆಗಿನ ಬ್ರೇಕ್ ಅಪ್ ಆದ ನಂತರ ಶಿಲ್ಪಾ ಸಂಪೂರ್ಣ ನಲುಗಿ ಹೋಗಿದ್ದರು. ಸಂದರ್ಶನವೊಂದರಲ್ಲಿ ಶಿಲ್ಪಾ ಈ ಬಗ್ಗೆ ದೊಡ್ಡ ಬಹಿರಂಗಪಡಿಸಿದ್ದರು.
‘ಅಕ್ಷಯ್ ನನ್ನನ್ನು ಬಳಸಿಕೊಂಡಿದ್ದಾನೆ. ಇನ್ನೊಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಬಂದ ನಂತರ ಅವನು ನನ್ನನ್ನು ತೊರೆದನು. ಅಕ್ಷಯ್ ಯಾವಾಗಲೂ ನನಗೆ ವಿಶೇಷ, ಆದರೆ ಈ ರೀತಿಯಾಗಬಹುದು ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ’ ಎಂದು ಶಿಲ್ಪಾ ಹೇಳಿದ್ದರು. ಅಕ್ಷಯ್ ಜೊತೆ ಸಂಬಂಧ ಮುರಿದ ನಂತರ ಶಿಲ್ಪಾ ಅನೇಕ ಕಷ್ಟಗಳನ್ನು ಎದುರಿಸಿದರು.
ಅಕ್ಷಯ್ ಜೊತೆ ಸಂಬಂಧ ಮುರಿದುಬಿದ್ದ ನಂತರ ನಿರ್ದೇಶಕ ಅನುಭವ್ ಸಿನ್ಹಾ ಜೊತೆ ಶಿಲ್ಪಾ ನಂಟು ಬೆಳೆಸಿಕೊಂಡರು. ‘ದಾಸ್’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಅನುಭವ್ ಮತ್ತು ಶಿಲ್ಪಾ ಸಂಬಂಧ ಗಟ್ಟಿಯಾಯಿತು. ಆದರೆ ನಂತರ ಅನುಭವ್ ಮದುವೆಯಾಗಿದ್ದರು ಮತ್ತು ಮಗು ಕೂಡ ಇತ್ತು.
ಇದನ್ನೂ ಓದಿ: ‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ ಶೆಟ್ಟಿ
‘ಚರ್ಚೆಯಲ್ಲಿ ಸತ್ಯಾಂಶವಿಲ್ಲ. ಅನುಭವ್ ಮತ್ತು ನನ್ನ ಸ್ನೇಹ ಚೆನ್ನಾಗಿದೆ’ ಎಂದು ಶಿಲ್ಪಾ ಹೇಳಿದ್ದರು. ಆದರೆ ನಟಿ ಯಶಸ್ಸಿನ ಶಿಖರವನ್ನು ತಲುಪಿದಾಗ ಶಿಲ್ಪಾ ಜೀವನದಲ್ಲಿ ಒಂದು ತಿರುವು ಸಂಭವಿಸಿತು. 2007ರಲ್ಲಿ, ಶಿಲ್ಪಾ ‘ಬಿಗ್ ಬ್ರದರ್’ ನಲ್ಲಿ ಭಾಗವಹಿಸಿ ಶೋ ಗೆದ್ದರು. ಶೋ ಗೆದ್ದ ನಂತರ ಶಿಲ್ಪಾ ಹಿಂತಿರುಗಿ ನೋಡಲೇ ಇಲ್ಲ.
ರಾಜ್ ಕುಂದ್ರಾ ಅವರ ಎರಡನೇ ಪತ್ನಿ ಶಿಲ್ಪಾ ಶೆಟ್ಟಿ. ರಾಜ್ ಕುಂದ್ರಾ ಅವರ ಮೊದಲ ಹೆಂಡತಿಯ ಹೆಸರು ಕವಿತಾ. ರಾಜ್ ಕುಂದ್ರಾ ಹಾಗೂ ಕವಿತಾ ದಂಪತಿಗೆ ಒಬ್ಬ ಮಗಳೂ ಇದ್ದಾಳೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಶಿಲ್ಪಾ ಯಾವಾಗಲೂ ತನ್ನ ಮಕ್ಕಳ ಜೊತೆ ಫೋಟೋ ಹಂಚಿಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.