ಗಣಪತಿ ಪೂಜೆಯಲ್ಲಿ ರಶ್ಮಿಕಾ ಮಂದಣ್ಣ ಕಂಡರೂ ಕಾಣದಂತೆ ಮುಖ ತಿರುಗಿಸಿಕೊಂಡು ಹೋದ ಶ್ರದ್ಧಾ ಕಪೂರ್
ರಶ್ಮಿಕಾ ಮಂದಣ್ಣ ಅವರನ್ನು ನೋಡಿ ಶ್ರದ್ಧಾ ಕಪೂರ್ ನಡೆದುಕೊಂಡ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಶ್ಮಿಕಾ ಮಂದಣ್ಣ ಎದುರಲ್ಲೇ ಇದ್ದರೂ ಕೂಡ ಶ್ರದ್ಧಾ ಕಪೂರ್ ಅವರು ಮುಖ ತಿರುಗಿಸಿಕೊಂಡು ಹೋಗಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇವರಿಬ್ಬರ ನಡುವೆ ಕಿರಿಕ್ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಫೇಮಸ್ ಆಗಿದ್ದಾರೆ. ‘ಗುಡ್ ಬೈ’, ‘ಮಿಷನ್ ಮಜ್ನು’ ಚಿತ್ರಗಳಿಂದ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಈಗ ರಣಬೀರ್ ಕಪೂರ್ ಜೊತೆ ಅವರು ನಟಿಸಿರುವ ‘ಅನಿಮಲ್’ ಸಿನಿಮಾ ರಿಲೀಸ್ಗೆ ಸಜ್ಜಾಗಿದೆ. ಚಿತ್ರರಂಗದಲ್ಲಿ ನಟಿಯರ ನಡುವೆ ಜಗಳ ನಡೆಯೋದು ಕಾಮನ್. ಈಗ ರಶ್ಮಿಕಾ ಮಂದಣ್ಣ ಮತ್ತು ಶ್ರದ್ಧಾ ಕಪೂರ್ (Shraddha Kapoor) ನಡುವೆ ಮನಸ್ತಾಪ ಉಂಟಾಗಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ವೈರಲ್ ವಿಡಿಯೋ (Rashmika Mandanna Viral Video). ರಶ್ಮಿಕಾ ಮತ್ತು ಶ್ರದ್ಧಾ ಕಪೂರ್ ಅವರು ಮುಖಾಮುಖಿ ಆಗಿದ್ದರೂ ಕೂಡ ಒಬ್ಬರನ್ನೊಬ್ಬರು ಮಾತನಾಡಿಸಿಲ್ಲ. ಇದನ್ನು ನೋಡಿ ಅಭಿಮಾನಿಗಳಿಗೆ ಹಲವು ಪ್ರಶ್ನೆ ಮೂಡಿದೆ.
ಮುಂಬೈನಲ್ಲಿ ಅಂಬಾನಿ ಕುಟುಂಬದವರು ಗಣಪತಿ ಪೂಜೆ ಆಯೋಜನೆ ಮಾಡಿದ್ದರು. ಮಂಗಳವಾರ ನಡೆದ ಈ ಸಮಾರಂಭದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಗೌರಿ ಖಾನ್, ಸುಹಾನಾ ಖಾನ್, ಆಲಿಯಾ ಭಟ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಸೇರಿದಂತೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಈ ವೇಳೆ ರಶ್ಮಿಕಾ ಮಂದಣ್ಣ ಅವರನ್ನು ನೋಡಿ ಶ್ರದ್ಧಾ ಕಪೂರ್ ನಡೆದುಕೊಂಡ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಶ್ಮಿಕಾ ಮಂದಣ್ಣ ಎದುರಲ್ಲೇ ಇದ್ದರೂ ಕೂಡ ಶ್ರದ್ಧಾ ಕಪೂರ್ ಅವರು ಮುಖ ತಿರುಗಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಪರಸ್ಪರ ಹಾಯ್ ಹೇಳಿಲ್ಲ, ಸ್ಮೈಲ್ ಕೂಡ ಮಾಡಿಲ್ಲ. ಇವರಿಬ್ಬರ ನಡುವೆ ಕಿರಿಕ್ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
View this post on Instagram
ಶ್ರದ್ಧಾ ಕಪೂರ್ ಅವರು ಬಾಲಿವುಡ್ನಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ರಶ್ಮಿಕಾ ಮಂದಣ್ಣ ಜೊತೆ ಶ್ರದ್ಧಾ ಕಪೂರ್ ಕಿರಿಕ್ ಮಾಡಿಕೊಳ್ಳುವಂಥದ್ದು ಏನಾಗಿದೆಯೋ ತಿಳಿದಿಲ್ಲ. ಬೇಕಂತಲೇ ಶ್ರದ್ಧಾ ಕಪೂರ್ ಅವರು ಮುಖ ತಿರುಗಿಸಿಕೊಂಡು ಹೋಗಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ರಶ್ಮಿಕಾ ಮಂದಣ್ಣ ಅಥವಾ ಶ್ರದ್ಧಾ ಕಪೂರ್ ಅವರೇ ಸ್ಪಷನೆ ನೀಡಿದರೆ ಎಲ್ಲ ಅನುಮಾನಗಳು ಪರಿಹಾರ ಆಗುತ್ತವೆ.
ಇದನ್ನೂ ಓದಿ: ‘ಹೋದ ಜೀವ ಬಂತು’; ಕಷ್ಟದಲ್ಲೂ ಖುಷಿಪಡುತ್ತಿದ್ದಾರೆ ರಶ್ಮಿಕಾ ಮಂದಣ್ಣ
ಕೆಲವು ನೆಟ್ಟಿಗರು ಬೇರೆಯದೇ ವಾದ ಮುಂದಿಟ್ಟಿದ್ದಾರೆ. ‘ಈ ನಟಿಯರು ಫೇಮಸ್ ಆಗಿದ್ದರೂ ಕೂಡ ವೈಯಕ್ತಿಕವಾಗಿ ಪರಸ್ಪರ ಪರಿಚಯ ಇಲ್ಲದೇ ಇರಬಹುದು. ಆ ಕಾರಣದಿಂದಲೇ ಅವರು ಎದುರುಬದರು ಸಿಕ್ಕರೂ ಮಾತನಾಡಿಕೊಂಡಿಲ್ಲ. ಅದನ್ನೆಲ್ಲ ಇಷ್ಟು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ’ ಎಂದು ಒಂದು ವರ್ಗದ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಒಂದಷ್ಟು ಪ್ರಶ್ನೆಗಳನ್ನಂತೂ ಹುಟ್ಟುಹಾಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.