ರಶ್ಮಿಕಾಗೂ ಶ್ರದ್ಧಾಗೂ ಅದೆಷ್ಟು ವ್ಯತ್ಯಾಸ; ಸರಳತೆಯಲ್ಲಿ ಈ ನಟಿಗೆ ಹೆಚ್ಚು ಅಂಕ

ಶ್ರದ್ಧಾ ಕಪೂರ್ ಅವರ ಸರಳತೆ ಮತ್ತು ಸೌಮ್ಯತೆ ಮತ್ತೊಮ್ಮೆ ಗಮನ ಸೆಳೆದಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಅವರ ಸರಳ ಉಡುಗೆ ತೊಡುಗೆ ಅಭಿಮಾನಿಗಳನ್ನು ಆಕರ್ಷಿಸಿದೆ. "ಸ್ತ್ರೀ 2" ಚಿತ್ರದ ಯಶಸ್ಸಿನ ನಂತರ, ಅವರ ಮುಂದಿನ ಚಿತ್ರ "ಸ್ತ್ರೀ 3" ಕುರಿತು ಚರ್ಚೆಗಳು ನಡೆಯುತ್ತಿವೆ.

ರಶ್ಮಿಕಾಗೂ ಶ್ರದ್ಧಾಗೂ ಅದೆಷ್ಟು ವ್ಯತ್ಯಾಸ; ಸರಳತೆಯಲ್ಲಿ ಈ ನಟಿಗೆ ಹೆಚ್ಚು ಅಂಕ
ರಶ್ಮಿಕಾ-ಶ್ರದ್ಧಾ (Credit: Anubhav Tiwari)
Updated By: ರಾಜೇಶ್ ದುಗ್ಗುಮನೆ

Updated on: Apr 14, 2025 | 8:24 AM

ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಅವರು ತಮ್ಮ ಸರಳತೆಯ ಕಾರಣಕ್ಕೆ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಲ್ಯಾಂಬೊರ್ಗಿನಿ ಕಾರಿನಲ್ಲಿ ಎಂಟ್ರಿ ಕೊಟ್ಟರೂ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಈಗ ಶ್ರದ್ಧಾ ಕಪೂರ್ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಎಲ್ಲರೂ ಕಣ್ಣು ಕುಕ್ಕೋ ಗ್ಲಾಮರ್ ಲುಕ್​ನಲ್ಲಿ ಬಂದರೆ ಶ್ರದ್ಧಾ ಕಪೂರ್ ಮಾತ್ರ ಸಿಂಪಲ್ ಡ್ರೆಸ್​ನಲ್ಲಿ ಕಂಗೊಳಿಸಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಗಮನ ಸೆಳೆದಿವೆ.

ಶ್ರದ್ಧಾ ಕಪೂರ್ ಅವರು ಬೋಲ್ಡ್ ಪಾತ್ರಗಳನ್ನು ಮಾಡಿದ್ದು ಕಡಿಮೆ. ಅವರು ಒಪ್ಪಿಕೊಳ್ಳೋದು ಸರಳ ಪಾತ್ರಗಳೇ ಹೆಚ್ಚು. ಕೆಲವೇ ಕೆಲವು ಸಿನಿಮಾಗಳಲ್ಲಿ ಅವರು ಈ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಅವಾರ್ಡ್ ಕಾರ್ಯಕ್ರಮಗಳಿಗೂ ಶ್ರದ್ಧಾ ಕಪೂರ್ ಅವರು ಸಿಂಪಲ್ ಲುಕ್​ನಲ್ಲಿ ಬಂದು ಮಿಂಚುತ್ತಾರೆ. ಇತ್ತೀಚೆಗೆ ಅದೇ ರೀತಿ ಆಗಿದೆ. ರಶ್ಮಿಕಾ ಮಂದಣ್ಣ ಮೊದಲಾದ ನಟಿಯರು ಗ್ಲಾಮರಸ್ ಆಗಿ ಮಿಂಚಿದ್ದಾರೆ. ಶ್ರದ್ಧಾ ಕಪೂರ್ ಎಂಟ್ರಿ ಗಮನ ಸೆಳೆದಿದೆ.

ಶ್ರದ್ಧಾ ಕಪೂರ್ ಅವರು ‘ಮ್ಯಾಡಾಕ್ ಫಿಲ್ಮ್ಸ್ ಪಾರ್ಟಿ’ ಕಾರ್ಯಕ್ರಮ ಒಂದಕ್ಕೆ ಜೀನ್ಸ್ ಹಾಗೂ ಟಿ-ಶರ್ಟ್ ಹಾಕಿ ಬಂದಿದ್ದಾರೆ. ಅವರ ಲುಕ್ ನೋಡಿ ಫಿದಾ ಆಗಿದ್ದಾರೆ. ಅವರ ಸರಳತೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ‘ಶ್ರದ್ಧಾ ಕಪೂರ್ ಈ ಕಾರಣಕ್ಕೆ ಸಾಕಷ್ಟು ಇಷ್ಟ ಆಗುತ್ತಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಬಾಲಿವುಡ್ ಮಾಫಿಯಾದಿಂದ ಶ್ರದ್ಧಾ ಕಪೂರ್ ದೂರ ಇದ್ದಿದ್ದು ಸರಿಯಾಗಿ ಇದೆ’ ಎಂಬ ಮಾತುಗಳನ್ನು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ
‘ಇನ್ನೂ ಯಾರ್​ ಯಾರನ್ನು ವಶ ಮಾಡಿಕೊಳ್ತೀರಿ’ ಎಂಬ ಪ್ರಶ್ನೆಗೆ ತಮನ್ನಾ ಉತ್ತರ
ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಆಗಿದೆ; ಮಗನ ಆರೋಗ್ಯದ ಅಪ್​ಡೇಟ್ ಕೊಟ್ಟ ಪವನ್
ಅಲ್ಲು ಅರ್ಜುನ್ ಮನೆ ಎದುರು ಅಭಿಮಾನಿಗಳ ದಂಡು; ಎಚ್ಚರಿಕೆಯಿಂದ ನಡೆದುಕೊಂಡ ನಟ
ಕೇರೆ ಹಾವು ರಕ್ಷಿಸಿ ಅದರ ಮಹತ್ವ ತಿಳಿಸಿದ ದುನಿಯಾ ವಿಜಯ್

ಇದನ್ನೂ ಓದಿ: ನಟಿ ಶ್ರದ್ಧಾ ಕಪೂರ್ ಕೊಟ್ಟ ಉಡುಗೊರೆಯನ್ನು ಮಾರಿಬಿಟ್ಟ ತಂದೆ ಶಕ್ತಿ ಕಪೂರ್

ಶ್ರದ್ಧಾ ಕಪೂರ್ ಅವರು ಕಳೆದ ವರ್ಷ ‘ಸ್ತ್ರೀ 2’ ಚಿತ್ರದಿಂದ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಕಳೆದ ವರ್ಷ ರಿಲೀಸ್ ಆಗಿ ಗಮನ ಸೆಳೆದಿದೆ. ಇದಾದ ಬಳಿಕ ಶ್ರದ್ಧಾ ಕಪೂರ್ ನಟನೆಯ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ. ‘ಸ್ತ್ರೀ 3’ ಸಿನಿಮಾ ಕೂಡ ಬರಲಿದೆ ಎನ್ನಲಾಗಿದೆ. ಇದಕ್ಕೆ ಅಕ್ಷಯ್ ಕುಮಾರ್ ಅವರು ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:53 am, Wed, 9 April 25