‘ಟಾಕ್ಸಿಕ್’ ಎದುರು ಸ್ಪರ್ಧೆ ತಪ್ಪಿಸಿಕೊಂಡ ಮತ್ತೊಂದು ಸಿನಿಮಾ

‘ಟಾಕ್ಸಿಕ್’ ಸಿನಿಮಾ ಆಗಸ್ಟ್ 24ಕ್ಕೆ ಬಿಡುಗಡೆ ಆಗಲಿದೆ. ಭಾರಿ ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರೇಕ್ಷಕರು ಸಹ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಬೇರೆ ಕೆಲವು ಸಿನಿಮಾಗಳು ಬಿಡುಗಡೆ ಆಗುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದವು. ಆದರೆ ಇದೀಗ ಒಂದೊಂದೆ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕ ಬದಲಾಯಿಸುವ ಮೂಲಕ ‘ಟಾಕ್ಸಿಕ್’ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಳ್ಳುತ್ತಿವೆ. ಇದು ಜಾಣತನದ ನಿರ್ಣಯವೂ ಸಹ ಆಗಿದೆ.

‘ಟಾಕ್ಸಿಕ್’ ಎದುರು ಸ್ಪರ್ಧೆ ತಪ್ಪಿಸಿಕೊಂಡ ಮತ್ತೊಂದು ಸಿನಿಮಾ
Toxic Eeta

Updated on: Jul 16, 2026 | 11:51 AM

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 24ಕ್ಕೆ ಬಿಡುಗಡೆ ಆಗಲಿದೆ. ಭಾರಿ ಅದ್ಧೂರಿಯಾಗಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರೇಕ್ಷಕರು ಸಹ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಬೇರೆ ಕೆಲವು ಸಿನಿಮಾಗಳು ಬಿಡುಗಡೆ ಆಗುವುದಾಗಿ ಈ ಹಿಂದೆ ಘೋಷಣೆ ಮಾಡಿದ್ದವು. ಆದರೆ ಇದೀಗ ಒಂದೊಂದೆ ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕ ಬದಲಾಯಿಸುವ ಮೂಲಕ ‘ಟಾಕ್ಸಿಕ್’ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಳ್ಳುತ್ತಿವೆ. ಇದು ಜಾಣತನದ ನಿರ್ಣಯವೂ ಸಹ ಆಗಿದೆ.

ಈಗಾಗಲೇ ತೆಲುಗಿನ ಸ್ಟಾರ್ ನಟ ನಾನಿ ಅವರ ‘ಪ್ಯಾರಡೈಸ್’ ಸಿನಿಮಾದ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆ. ‘ಪ್ಯಾರಡೈಸ್’ ಸಿನಿಮಾ ಆಗಸ್ಟ್ 22 ಕ್ಕೆ ಬಿಡುಗಡೆ ಆಗುವುದಕ್ಕಿತ್ತು, ಆದರೆ ‘ಟಾಕ್ಸಿಕ್’ ಸಿನಿಮಾ ಬಹುತೇಕ ಅದೇ ಸಮಯದಲ್ಲಿ ಬಿಡುಗಡೆ ಆಗುತ್ತಿರುವ ಕಾರಣ, ಇದೀಗ ಸಿನಿಮಾದ ಬಿಡುಗಡೆ ದಿನಾಂಕವನ್ನು ಬದಲಾವಣೆ ಮಾಡಲಾಗಿದ್ದು, ಸಿನಿಮಾ ಈಗ ಸೆಪ್ಟೆಂಬರ್ 24 ರಂದು ಅಂದರೆ ‘ಟಾಕ್ಸಿಕ್’ ರಿಲೀಸ್ ಆದ ಒಂದು ತಿಂಗಳ ಬಳಿಕವಷ್ಟೆ ರಿಲೀಸ್ ಆಗಲಿದೆ.

ಇದೀಗ ಮತ್ತೊಂದು ಸಿನಿಮಾ ‘ಟಾಕ್ಸಿಕ್’ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಂಡಿದೆ. ಅದುವೇ ಹಿಂದಿಯ ‘ಇಠ’. ಶ್ರದ್ಧಾ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಯೋಗ್ರಫಿ ಸಿನಿಮಾ ‘ಇಠ’ದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಮರಾಠಿ ನೃತ್ಯಗಾರ್ತಿ, ನಟಿಯೊಬ್ಬರ ಜೀವನ ಆಧರಿಸಿದ ಸಿನಿಮಾ ಇದಾಗಿದೆ. ಈ ಸಿನಿಮಾ ಆಗಸ್ಟ್ 28ರಂದು ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಸಿನಿಮಾದ ದಿನಾಂಕ ಬದಲಾವಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಉತ್ತರ ಭಾರತದಲ್ಲಿ ಯಶ್ ಒಂದು ಮಿನಿ ಕರ್ನಾಟಕ ಕಟ್ಟಿದ್ದಾನೆ: ಯೋಗರಾಜ್ ಭಟ್

ಮೂಲಗಳ ಪ್ರಕಾರ, ‘ಇಠ’ ಸಿನಿಮಾದ ಬಿಡುಗಡೆಯನ್ನು ಆಗಸ್ಟ್ 24ಕ್ಕಿಂತಲೂ ಮುಂಚಿತವಾಗಿಯೇ ಮಾಡಲು ಚಿತ್ರತಂಡ ಯೋಜಿಸಿದೆಯಂತೆ. ನಿರ್ಮಾಣ ಸಂಸ್ಥೆಯಾದ ಮ್ಯಾಡಾಕ್ ಫಿಲ್ಮ್ಸ್ ಅವರು ಚಿತ್ರದ ಬಿಡುಗಡೆಯನ್ನು ಮುಂದೂಡಬೇಕೇ ಅಥವಾ ಮುಂಚಿತವಾಗಿ ಬಿಡುಗಡೆ ಮಾಡಬೇಕೇ ಎಂದು ಯೋಚಿಸುತ್ತಿದ್ದಾರೆ. ಆದರೆ, ಅವರು ಚಿತ್ರವನ್ನು ಮೂಲ ದಿನಾಂಕವಾದ ಆಗಸ್ಟ್ 28 ರಂದೇ ಬಿಡುಗಡೆ ಮಾಡಲು ಉದ್ದೇಶಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಬಿಡುಗಡೆಯ ದಿನಾಂಕ ಬದಲಾವಣೆಯ ಕುರಿತು ಅವರು ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ.

ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಒಟ್ಟು 4 ಸಿನಿಮಾಗಳು ಬಿಡುಗಡೆಯಾಗಲು ಸಿದ್ಧವಾಗಿದ್ದವು. ಈ ಅವಧಿಯನ್ನು ಮೊದಲು ಕಾಯ್ದಿರಿಸಿದ ಚಿತ್ರ ‘ಖೋಸ್ಲಾ ಕಾ ಘೋಷ್ಲಾ 2’. ಮೊದಲ ಭಾಗದಂತೆಯೇ, ಈ ಚಿತ್ರದ ಮುಂದುವರಿದ ಭಾಗದಲ್ಲಿ ಅನುಪಮ್ ಖೇರ್, ಬೊಮನ್ ಇರಾನಿ, ರಣವೀರ್ ಶೌರಿ, ಪರ್ವಿನ್ ದಬಾಸ್ ಮತ್ತು ತಾರಾ ಶರ್ಮಾ ಮೊದಲಾದವರು ನಟಿಸಿದ್ದಾರೆ. ನಂತರ, ‘ದಿ ವ್ವಾನ್’ (The Vvan) ಚಿತ್ರತಂಡ ಕೂಡ ಆಗಸ್ಟ್ 28 ರಂದೇ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಕಳೆದ ವಾರ, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ನಟನೆಯ ಜಂಗಲ್ ಅಡ್ವೆಂಚರ್ ಚಿತ್ರವು ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

‘ಈಠಾ’ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರು ಪ್ರಸಿದ್ಧ ಮರಾಠಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವಕರ್ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಛಾವಾ’ ಸಿನಿಮಾ ನಿರ್ದೇಶಿಸಿದ್ದ ಲಕ್ಷ್ಮಣ್ ಉಠೇಕರ್ ನಿರ್ದೇಶನದ ಈ ಚಿತ್ರದಲ್ಲಿ ರಣದೀಪ್ ಹೂಡಾ ಮತ್ತು ಮೊಹಮ್ಮದ್ ಜೀಶನ್ ಅಯ್ಯೂಬ್ ಕೂಡ ನಟಿಸಿದ್ದಾರೆ. ಇದನ್ನು ಮ್ಯಾಡಾಕ್ ಫಿಲ್ಮ್ಸ್‌ನ ದಿನೇಶ್ ವಿಜನ್ ನಿರ್ಮಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us