ಬಾಲಿವುಡ್ (Bollywood) ಮಂದಿಗೆ ಒಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಸ್ಟಾರ್ ನಟ ಸಿದ್ದಾರ್ಥ್ ಮಲ್ಹೋತ್ರಾ ಅವರ ಅಭಿಮಾನಿಯೊಬ್ಬರಿಗೆ ಬರೋಬ್ಬರಿ 50 ಲಕ್ಷ ರೂಪಾಯಿ ದೋಖಾ ಮಾಡಲಾಗಿದೆ. ಈ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ನಟನ ಆಪ್ತರು ಒಂದು ಹೇಳಿಕೊಂಡ ವ್ಯಕ್ತಿಗಳು ಮಿನೂ ವಾಸುದೇವನ್ ಎಂಬ ಅಭಿಮಾನಿಗೆ ಮೋಸ ಮಾಡಿದ್ದಾರೆ. ಬೇರೆ ಯಾರೂ ಕೂಡ ಇಂಥ ಮೋಸದ ಜಾಲಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ ಸಿದ್ದಾರ್ಥ್ ಮಲ್ಹೋತ್ರ (Sidharth Malhotra) ಅವರು ಪ್ರತಿಕ್ರಿಯೆ ನೀಡಿದ್ದಾರೆ. ವಂಚನೆ ಜಾಲದ ವಿಷಯ ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
‘ನನ್ನ ಅಭಿಮಾನಿಗಳು ಅಂತ ಹೇಳಿಕೊಂಡು ಅಥವಾ ನಮ್ಮ ಕುಟುಂಬದ ಆಪ್ತರು ಅಂತ ಹೇಳಿಕೊಂಡು ಜನರಿಂದ ಹಣ ಕೇಳುತ್ತಿರುವ ಮೋಸದ ಜಾಲದ ಬಗ್ಗೆ ನನಗೆ ತಿಳಿದುಬಂದಿದೆ. ಈ ಬಗ್ಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ಇಂಥ ಮೋಸಗಳನ್ನು ನಾನಾಗಲಿ, ನನ್ನ ಕುಟುಂಬದವರಾಗಿ ಅಥವಾ ನನ್ನ ತಂಡದವರಾಗಲಿ ಬೆಂಬಲಿಸುವುದಿಲ್ಲ’ ಎಂದು ಸಿದ್ದಾರ್ಥ್ ಮಲ್ಹೋತ್ರಾ ಅವರು ಪೋಸ್ಟ್ ಮಾಡಿದ್ದಾರೆ.
‘ಇಂಥ ವಿಷಯಗಳಲ್ಲಿ ವ್ಯವಹರಿಸುವಾಗ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ನಾನು ಒತ್ತಾಯಿಸುತ್ತೇನೆ. ಅನುಮಾನಾಸ್ಪದವಾದ ಸಂದೇಶಗಳು ಬಂದಾಗ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತನ್ನಿ ಹಾಗೂ ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸಿ. ಯಾವಾಗಲೂ ಅಭಿಮಾನಿಗಳೇ ನನಗೆ ದೊಡ್ಡ ಶಕ್ತಿ. ನಿಮ್ಮ ನಂಬಿಕೆ ಮತ್ತು ಸುರಕ್ಷತೆಯೇ ನನ್ನ ಮೊದಲ ಆದ್ಯತೆ’ ಎಂದು ಸಿದ್ದಾರ್ಥ್ ಮಲ್ಹೋತ್ರಾ ಅವರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಟಿ ಕಿಯಾರಾ ಅಡ್ವಾಣಿ; ಭರ್ಜರಿ ಸೆಲೆಬ್ರೇಷನ್
ಸಿದ್ದಾರ್ಥ್ ಮಲ್ಹೋತ್ರಾ ಅವರ ದೊಡ್ಡ ಅಭಿಮಾನಿ ಮಿನೂ ವಾಸುದೇವನ್. ಅವರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಸಿದ್ದಾರ್ಥ್ ಅವರ ಜೀವನಕ್ಕೆ ಪತ್ನಿ ಕಿಯಾರಾ ಅಡ್ವಾಣಿಯಿಂದಲೇ ಅಪಾಯ ಇದೆ ಎಂದು ಕೆಲವು ಕಿಡಿಗೇಡಿಗಳು ಮಿನೂ ವಾಸುದೇವನ್ಗೆ ತಿಳಿಸಿದ್ದಾರೆ. ಅಲ್ಲದೇ, ಸಿದ್ದಾರ್ಥ್ ಅವರ ಪ್ರಾಣ ಉಳಿಸಲು ಸಹಾಯ ಮಾಡುತ್ತೇವೆ ಎಂದು ನಂಬಿಸಿ ಮಿನೂ ಅವರಿಂದ 50 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ. ಇದು ಮೋಸದ ಜಾಲ ಎಂಬುದು ಗೊತ್ತಾದ ಬಳಿಕ ಮಿನೂ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:03 pm, Wed, 3 July 24