ಒಂದೇ ಚಿತ್ರವನ್ನು ಹಲವು ಬಾರಿ ಪ್ರಸಾರ ಮಾಡಿದ ವಾಹಿನಿ; ತಲೆಕೆಟ್ಟು ವೀಕ್ಷಕ ಮಾಡಿದ್ದೇನು ನೋಡಿ

| Updated By: ರಾಜೇಶ್ ದುಗ್ಗುಮನೆ

Updated on: Jan 18, 2023 | 3:13 PM

‘ಸೂರ್ಯವಂಶಂ’ ಸಿನಿಮಾ ಪ್ರಸಾರ ಹಕ್ಕು ಸೋನಿ ಮ್ಯಾಕ್ಸ್​ ಬಳಿ ಇದೆ. ಈ ಕಾರಣಕ್ಕೆ ಹಲವು ಬಾರಿ ಈ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಇದನ್ನು ಈಗಲೂ ಅನೇಕರು ಭಕ್ತಿಯಿಂದ ವೀಕ್ಷಿಸುವವರಿದ್ದಾರೆ.

ಒಂದೇ ಚಿತ್ರವನ್ನು ಹಲವು ಬಾರಿ ಪ್ರಸಾರ ಮಾಡಿದ ವಾಹಿನಿ; ತಲೆಕೆಟ್ಟು ವೀಕ್ಷಕ ಮಾಡಿದ್ದೇನು ನೋಡಿ
ಸಾಂದರ್ಭಿಕ ಚಿತ್ರ
Follow us on

ಅಮಿತಾಭ್ ಬಚ್ಚನ್ (Amitabh Bachchan) ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಸಿನಿಮಾಗಳನ್ನು ಜನರು ಈಗಲೂ ಇಷ್ಟಪಡುತ್ತಾರೆ. ಅವರ ನಟನೆಯ ‘ಶೋಲೆ’ ಮೊದಲಾದ ಚಿತ್ರಗಳಿಗೆ ಈಗಲೂ ಬೇಡಿಕೆ ಇದೆ. ಈಗ ಅಮಿತಾಭ್ ಬಚ್ಚನ್ ನಟನೆಯ ‘ಸೂರ್ಯವಂಶಂ’ ಸಿನಿಮಾ (Sooryavansham) ಕೂಡ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ. ಈ ಚಿತ್ರ ಸೋನಿ ಮ್ಯಾಕ್ಸ್​​ನಲ್ಲಿ ಹಲವು ಬಾರಿ ಟೆಲಿಕಾಸ್ಟ್ ಆಗಿದೆ. ಇದನ್ನು ವೀಕ್ಷಕನೋರ್ವ ಪ್ರಶ್ನೆ ಮಾಡಿದ್ದಾನೆ.

‘ಸೂರ್ಯವಂಶಂ’ ಸಿನಿಮಾ ಪ್ರಸಾರ ಹಕ್ಕು ಸೋನಿ ಮ್ಯಾಕ್ಸ್​ ಬಳಿ ಇದೆ. ಈ ಕಾರಣಕ್ಕೆ ಹಲವು ಬಾರಿ ಈ ಚಿತ್ರವನ್ನು ಪ್ರಸಾರ ಮಾಡಲಾಗಿದೆ. ಇದನ್ನು ಈಗಲೂ ಅನೇಕರು ಭಕ್ತಿಯಿಂದ ವೀಕ್ಷಿಸುವವರಿದ್ದಾರೆ. ಜತೆಗೆ ಟ್ರೋಲ್ ಕೂಡ ಮಾಡುತ್ತಾರೆ. ಈ ಚಿತ್ರದ ಬದಲು ಬೇರೆ ಸಿನಿಮಾ ಪ್ರಸಾರ ಮಾಡಬಹುದಿತ್ತಲ್ಲ ಎಂದು ಪ್ರಶ್ನೆ ಮಾಡಿದವರಿದ್ದಾರೆ. ಈಗ ಅಭಿಮಾನಿಯೋರ್ವ ಸೋನಿ ಮ್ಯಾಕ್ಸ್ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾನೆ.

‘ಸೂರ್ಯವಂಶಂ ಚಿತ್ರದ ಪ್ರಸಾರ ಹಕ್ಕು ನಿಮ್ಮ ಬಳಿ (ಸೋನಿ ಮ್ಯಾಕ್ಸ್​) ಇದೆ. ನಿಮ್ಮ ಕೃಪೆಯಿಂದ ಹೀರಾ ಸಿಂಗ್​ (ಅಮಿತಾ ಬಚ್ಚನ್ ಮಾಡಿದ ಪಾತ್ರ) ಕುಟುಂಬದ ಬಗ್ಗೆ ತಿಳಿದುಕೊಂಡಿದ್ದೇವೆ. ನೀವು ಎಷ್ಟು ಬಾರಿ ಈ ಚಿತ್ರವನ್ನು ಟೆಲಿಕಾಸ್ಟ್ ಮಾಡಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಭವಿಷ್ಯದಲ್ಲಿ ಇದನ್ನು ಎಷ್ಟು ಬಾರಿ ಪ್ರಸಾರ ಮಾಡಬೇಕು ಎಂದುಕೊಂಡಿದ್ದೀರಿ ಎಂಬುದು ನನಗೆ ಗೊತ್ತಾಗಬೇಕಿದೆ. ಸಿನಿಮಾ ನಮ್ಮ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದರೆ ಇದಕ್ಕೆ ಯಾರು ಹೊಣೆ. ದಯವಿಟ್ಟು ತಿಳಿಸಿ’ ಎಂದು  ವೀಕ್ಷಕನೋರ್ವ ಪ್ರಶ್ನೆ ಮಾಡಿದ್ದಾನೆ.

ಇದನ್ನೂ ಓದಿ
ಒಪ್ಪಿಗೆ ಇಲ್ಲದೆ ಅಮಿತಾಭ್ ಬಚ್ಚನ್​ ಫೋಟೋ ಬಳಸುವಂತಿಲ್ಲ; ಕೋರ್ಟ್​ನಿಂದಲೇ ಬಂತು ಆದೇಶ
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ

ಇದನ್ನೂ ಓದಿ: Sooryavansham: ಸೂರ್ಯವಂಶಂ ಹಿಂದಿ ಸಿನಿಮಾದ ಬಗ್ಗೆ ಚಂದ್ರನ ಮೇಲಿರುವವರನ್ನು ಕೇಳಿದರೂ ಉತ್ತರ ಸಿಗುತ್ತೆ: ಅನುಪಮ್​ ಖೇರ್

ಈ ಪೋಸ್ಟ್​ಗೆ ಭಾರೀ ಪ್ರತಿಕ್ರಿಯೆ ಬಂದಿದೆ. ಅನೇಕರು ಇದನ್ನು ಟ್ರೋಲ್ ಮಾಡಿದ್ದಾರೆ. ‘ನಿಮ್ಮ ನೋವು ನನಗೂ ಅರ್ಥ ಆಗುತ್ತದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಇದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯ’ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಈ ರೀತಿಯ ಹಲವು ಸಿನಿಮಾಗಳಿವೆ. ದಯವಿಟ್ಟು ಅವರ ಹೆಸರನ್ನು ಹೇಳಿ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:57 pm, Wed, 18 January 23