25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ಸುಹಾನಾ ಖಾನ್ ಅವರ 25ನೇ ಜನ್ಮದಿನದಂದು, ಅವರ ನಿವ್ವಳ ಮೌಲ್ಯ, ಐಷಾರಾಮಿ ಜೀವನಶೈಲಿ ಮತ್ತು ಬಾಲಿವುಡ್‌ನಲ್ಲಿನ ಅವರ ಪ್ರಾರಂಭದ ಬಗ್ಗೆ ತಿಳಿದುಕೊಳ್ಳೋಣ. 'ದಿ ಆರ್ಚೀಸ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ ಸುಹಾನಾ, ಈಗಾಗಲೇ 13 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ಅವರ ತಂದೆ ಶಾರುಖ್ ಖಾನ್ ಅವರ ಆಸ್ತಿಯೊಂದಿಗೆ ಹೋಲಿಸಿದರೆ ಇದು ಕಡಿಮೆ.

25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು
ಸುಹಾನಾ ಖಾನ್
Edited By:

Updated on: May 22, 2025 | 7:53 AM

ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ (Suhana Khan) ಅವರಿಗೆ ಇಂದು (ಮೇ 22) ಬರ್ತ್​ಡೇ ಸಂಭ್ರಮ. ಅವರಿಗೆ ಫ್ಯಾನ್ಸ್ ಕಡೆಯಿಂದ ಶುಭಾಶಯ ಬರುತ್ತಿದೆ. ಅವರು 2023ರ ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆಗ ನಟಿಗೆ 23 ವರ್ಷ. ಅವರು ನಟೆಯ ವಿಚಾರಕ್ಕೆ ಟ್ರೋಲ್ ಆದರು ಅನ್ನೋದು ಎರಡನೆ ವಿಚಾರ ಬಿಡಿ. ಬರ್ತ್​ಡೇ ದಿನ ಸುಹಾನಾ ಖಾನ್ ಅವರ ನೆಟ್​​ವರ್ತ್​ ಬಗ್ಗೆ ನೋಡೋಣ.

ಶಾರುಖ್ ಖಾನ್ ಅವರಿಗೆ ಆರ್ಯನ್ ಖಾನ್ ಹೆಸರಿನ ಮಗನಿದ್ದಾನೆ. ಅವರು ಹುಟ್ಟಿದ ಬಳಿಕ ಹುಟ್ಟಿದ್ದು ಸುಹಾನಾ. ಎರಡನೇ ಮಗುವಾಗಿ ಸುಹಾನಾ ಜನಿಸಿದರು. ಅವರು ವಿದೇಶದಲ್ಲಿ ನಟನಾ ತರಬೇತಿ ಪಡೆದು ಬಂದಿದ್ದಾರೆ. ಅವರಿಗೆ ಈಗಿನ್ನೂ 25 ವರ್ಷ. ಅವರು ಆಗಲೇ ನಟನೆಯ ಜೊತೆ ನಂಟು ಬೆಳೆಸಿಕೊಂಡಿದ್ದಾರೆ.

ಸುಹಾನಾ ಇನ್ನೂ ಸರಿಯಾಗಿ ಬಣ್ಣದ ಲೋಕಕ್ಕೆ ಬಂದೇ ಇಲ್ಲ. ಆಗಲೇ ಅವರ ಒಟ್ಟೂ ಆಸ್ತಿ 13 ಕೋಟಿ ರೂಪಾಯಿಗೂ ಅಧಿಕ ಆಗಿದೆ. ಲಕ್ಷ್ ರೀತಿಯ ಬ್ರ್ಯಾಂಡ್​ಗಳಿಗೆ ಅವರು ಅಂಬಾಸಿಡರ್ ಆಗಿದ್ದಾರೆ. ಅವರ ತಂದೆಯ ಆಸ್ತಿಗೆ (7 ಸಾವಿರ ಕೋಟಿ ರೂಪಾಯಿ) ಹೋಲಿಕೆ ಮಾಡಿದರೆ ಸುಹಾನಾ ಆಸ್ತಿ ಏನೂ ಅಲ್ಲ. ಆದಾಗ್ಯೂ  ಅವರು ತಮ್ಮನ್ನು ತಾವು ಸ್ಥಾಪಿಸಿಕೊಳ್ಳೋ ಭರದಲ್ಲಿ ಇದ್ದಾರೆ.

ಇದನ್ನೂ ಓದಿ
‘ತಿಂಗಳಿಗೆ 40 ಲಕ್ಷ ಜೀವನಾಂಶ ಕೊಡಿ’; ಬೇಡಿಕೆ ಇಟ್ಟ ಜಯಮ್​ ರವಿ ಪತ್ನಿ
‘ಸೀತಾ ರಾಮ’ಗೆ ಕೊನೆಯ ದಿನದ ಶೂಟಿಂಗ್; ಸೀರಿಯಲ್ ಪೂರ್ಣಗೊಳ್ಳಲು ಕಾರಣವೇನು?
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ಹೊರ ನಡೆಯಲು ಅಕ್ಷಯ್ ಕುಮಾರ್ ಕಾರಣ
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು

ಶಾರುಖ್ ಖಾನ್ ಅವರು ಫಾರ್ಮ್​ಹೌಸ್ ಖರೀದಿ ಮಾಡಿದ್ದರು. ಅಲಿಭಾಗ್​ನಲ್ಲಿ ಈ ಫಾರ್ಮ್​ ಹೌಸ್ ಇದ್ದು ಇದರ ಬೆಲೆ 12.91 ಕೋಟಿ ರೂಪಾಯಿ. 1.5 ಎಕರೆಯಲ್ಲಿ ಈ ಜಾಗ ಇದೆ. ಇದು ರೈತ ಭೂಮಿ ಆಗಿದ್ದು, ತಾವು ರೈತ ಎಂದು ಹೇಳಿಕೊಂಡೇ ಈ ಭೂಮಿಯನ್ನು ಅವರು ಖರೀದಿ ಮಾಡಿದ್ದಾರೆ.  ಸುಹಾನಾ ಖಾನ್ ಬಳಿ ಒಂದು ವಿಶೇಷ ಡ್ರೆಸ್ ಇದೆ. ಇದರ ಬೆಲೆ 2.70 ಲಕ್ಷ ರೂಪಾಯಿ. ಆಗಾಗ ಇದನ್ನು ಧರಿಸಿ ಅವರು ಮಿಂಚುತ್ತಾರೆ.

ಇದನ್ನೂ ಓದಿ: ಶಾರುಖ್ ಖಾನ್ ನೌಕರಳಿಗೆ 8 ವರ್ಷಗಳ ಬಳಿಕ ಸಿಕ್ಕಿತು ನ್ಯಾಯ, 62 ಲಕ್ಷ ಪರಿಹಾರಕ್ಕೆ ಆದೇಶ

ಸುಹಾನಾ ಬಳಿ 1.23 ಲಕ್ಷ ರೂಪಾಯಿಯ ಮಿನಿ ಬ್ಯಾಗ್ ಇದೆ. ಸದ್ಯ ಸುಹಾನಾ ಅವರು ತಂದೆಯ ಜೊತೆ ‘ಕಿಂಗ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಇಂದು ಅಪ್​​ಡೇಟ್ ಸಿಗೋ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:52 am, Thu, 22 May 25