‘ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ’ ಎಂದ ಬೆನ್ನಲ್ಲೇ ವೈರಲ್ ಆಯ್ತು ಸನ್ನಿ ಡಿಯೋಲ್ ವಿಡಿಯೋ

ಖ್ಯಾತ ನಟ ಸನ್ನಿ ಡಿಯೋಲ್ ಅವರು ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ ಎಂದು ಹೇಳಿದಾಗ ಅಭಿಮಾನಿಗಳು ಭೇಷ್ ಎಂದಿದ್ದರು. ಆದರೆ ಈಗ ಅವರ ಒಂದು ವಿಡಿಯೋ ನೋಡಿ ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಸನ್ನಿ ಡಿಯೋಲ್ ನಟಿಸಿದ್ದ ಒಂದು ಜಾಹೀರಾತಿನ ವಿಡಿಯೋ ಈಗ ಸಖತ್ ವೈರಲ್ ಆಗಿದೆ.

‘ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ’ ಎಂದ ಬೆನ್ನಲ್ಲೇ ವೈರಲ್ ಆಯ್ತು ಸನ್ನಿ ಡಿಯೋಲ್ ವಿಡಿಯೋ
Sunny Deol

Updated on: Aug 18, 2026 | 6:20 PM

ಇತ್ತೀಚೆಗೆ ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deol) ಅವರು ತಾವೆಂದೂ ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿಲ್ಲ ಮತ್ತು ತಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿ ಅಂತಹ ಉತ್ಪನ್ನಗಳನ್ನು ಎಂದಿಗೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಅವರ ಈ ಹೇಳಿಕೆ ಬೆನ್ನಲ್ಲೇ ಅವರ ಹಳೆಯ ಪಾನ್ ಮಸಾಲಾ (Pan Masala) ಜಾಹೀರಾತಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರ ಸಂದರ್ಶನದಲ್ಲಿ ಮಾತನಾಡಿದ್ದ ಸನ್ನಿ ಡಿಯೋಲ್, ‘ನಾನು ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸುವುದಿಲ್ಲ, ಎಂದಿಗೂ ನಟಿಸುವುದೂ ಇಲ್ಲ. ನನಗೆ ಅಂತಹ ಆಫರ್‌ಗಳು ಬರುತ್ತವೆ, ಆದರೆ ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ನಂಬಿಕೆ ಇಲ್ಲದ ವಿಷಯಗಳನ್ನು ಪ್ರಚಾರ ಮಾಡಲು ನಾನು ಬಯಸುವುದಿಲ್ಲ. ನನ್ನ ಮನಸಾಕ್ಷಿ ಒಪ್ಪದ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದರು.

ಆದರೆ, ಈ ಸಂದರ್ಶನದ ಬೆನ್ನಲ್ಲೇ ನೆಟ್ಟಿಗರು ಸನ್ನಿ ಡಿಯೋಲ್ ನಟಿಸಿದ್ದ ಹಳೆಯ ಪಾನ್ ಮಸಾಲಾ ಜಾಹೀರಾತಿನ ವಿಡಿಯೋವನ್ನು ಹುಡುಕಿ ತೆಗೆದಿದ್ದಾರೆ. ಈ ಜಾಹೀರಾತಿನಲ್ಲಿ ಸನ್ನಿ ಡಿಯೋಲ್ ಅವರೊಂದಿಗೆ ನಟರಾದ ರವಿ ಕಿಶನ್ ಮತ್ತು ವಿಜಯ್ ರಾಝ್ ಕೂಡ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಸನ್ನಿ ಡಿಯೋಲ್ ಪಾನ್ ಶಾಪ್‌ಗೆ ಬಂದು ‘ಮೀಠಾ ಪಾನ್’ ಸೇವಿಸುವುದು ಹಾಗೂ ಆ ಪಾನ್ ಮಸಾಲಾ ಪ್ಯಾಕೆಟ್ ಮೇಲೆ ಅವರ ಫೋಟೋ ಇರುವುದು ಕಂಡುಬಂದಿದೆ.

ಪ್ಯಾಕೆಟ್ ಮೇಲೆ ‘ತಂಬಾಕು ರಹಿತ’ (No Tobacco) ಮತ್ತು ‘ನಿಕೋಟಿನ್ ರಹಿತ’ (No Nicotine) ಎಂದು ಬರೆಯಲಾಗಿದ್ದರೂ, ಇದು ಪಾನ್ ಮಸಾಲಾ ಪ್ರಚಾರವೇ ಆಗಿತ್ತು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಸನ್ನಿ ಡಿಯೋಲ್ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಎಂದಿಗೂ ನಾನು ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ’: ಖಡಕ್ ಆಗಿ ಹೇಳಿದ ಸನ್ನಿ ಡಿಯೋಲ್

ಅಂದಹಾಗೆ, ಇತ್ತೀಚೆಗಷ್ಟೇ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಮಂಡಳಿಯು ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ‘ವಿಮಲ್ ಇಲಾಚಿ’ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಪರೋಕ್ಷವಾಗಿ ಪಾನ್ ಮಸಾಲಾ ಹಾಗೂ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುತ್ತಿದ್ದಾರೆ ಎಂಬ ಆರೋಪ ಅವರ ಮೇಲಿರುವಾಗಲೇ, ಸನ್ನಿ ಡಿಯೋಲ್ ನೀಡಿದ್ದ ಹೇಳಿಕೆ ಮತ್ತು ಈಗ ವೈರಲ್ ಆಗಿರುವ ಹಳೆಯ ವಿಡಿಯೋ ಬಾಲಿವುಡ್ ಅಂಗಳದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us