Gutkha Ban
ಕರ್ನಾಟಕ ಸರ್ಕಾರವು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಗುಟ್ಕಾ ಮತ್ತು ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ. ಗುಟ್ಕಾ ಸೇವನೆಯು ಜೀವಕ್ಕೆ ಅಪಾಯಕಾರಿ. ಹೀಗಾಗಿ ತಂಬಾಕು ಮತ್ತು ನಿಕೋಟಿನ್ ಮಿಶ್ರಿತ ಗುಟ್ಕಾ ಹಾಗೂ ಪಾನ್ ಮಸಾಲಾಗಳ ತಯಾರಿಕೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಗುಟ್ಕಾ ನಿಷೇಧವಾದರೆ ಅಡಿಕೆ ಬೆಳೆಗಾರರಿಗೆ ಬಹಳ ದೊಡ್ಡ ಪೆಟ್ಟು ಬೀಳಲಿದೆ.
ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಮುಖ್ಯವಾಗಿ ಶಿವಮೊಗ್ಗ, ಉತ್ತರ ಕನ್ನಡ,ದಾವಣಗೆರೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಅಡಿಕೆ ಬೆಳೆಯಲಾಗುತ್ತದೆ.
ಇನ್ನೂ ಹೆಚ್ಚು ಓದಿFarmers Protest Against Gutkha Ban: ಗುಟ್ಕಾ ನಿಷೇಧ ಖಂಡಿಸಿ ಅಡಿಕೆ ಬೆಳೆಗಾರರ ಪ್ರತಿಭಟನೆ: ಹೊನ್ನಾಳಿಯಿಂದ ಪಾದಯಾತ್ರೆ
ಗುಟ್ಕಾ ನಿಷೇಧನಿರ್ಧಾರವನ್ನು ವಿರೋಧಿಸಿ ಹೊನ್ನಾಳಿ ಅಡಿಕೆ ಬೆಳೆಗಾರರು ಬೃಹತ್ ಪಾದಯಾತ್ರೆ ನಡೆಸಿದ್ದಾರೆ. ಹೊನ್ನಾಳಿಯ ಹಿರೇಕಲ್ ಮಠದಿಂದ ಪ್ರಾರಂಭವಾದ ಈ ಪಾದಯಾತ್ರೆಯಲ್ಲಿ ರೈತರು, ರೈತ ಮೋರ್ಚಾ ಸದಸ್ಯರು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ನಾಳೆ ದಾವಣಗೆರೆಯಲ್ಲಿ ಅಡಿಕೆ ಬೆಳಗಾರರ ಬೃಹತ್ ಪ್ರತಿಭಟನಾ ಸಭೆ ನಡೆಯಲಿದ್ದು, ಎಸಿ ಕಚೇರಿ ಮುತ್ತಿಗೆಗೂ ನಿರ್ಧರಿಸಲಾಗಿದೆ.
- Basavaraj Doddamani
- Updated on: Aug 27, 2026
- 12:35 pm
‘ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ’ ಎಂದ ಬೆನ್ನಲ್ಲೇ ವೈರಲ್ ಆಯ್ತು ಸನ್ನಿ ಡಿಯೋಲ್ ವಿಡಿಯೋ
ಖ್ಯಾತ ನಟ ಸನ್ನಿ ಡಿಯೋಲ್ ಅವರು ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ ಎಂದು ಹೇಳಿದಾಗ ಅಭಿಮಾನಿಗಳು ಭೇಷ್ ಎಂದಿದ್ದರು. ಆದರೆ ಈಗ ಅವರ ಒಂದು ವಿಡಿಯೋ ನೋಡಿ ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಸನ್ನಿ ಡಿಯೋಲ್ ನಟಿಸಿದ್ದ ಒಂದು ಜಾಹೀರಾತಿನ ವಿಡಿಯೋ ಈಗ ಸಖತ್ ವೈರಲ್ ಆಗಿದೆ.
- Madan Kumar
- Updated on: Aug 18, 2026
- 6:20 pm
‘ಎಂದಿಗೂ ನಾನು ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲ’: ಖಡಕ್ ಆಗಿ ಹೇಳಿದ ಸನ್ನಿ ಡಿಯೋಲ್
ಬಾಲಿವುಡ್ನ ಕೆಲವು ಸ್ಟಾರ್ ನಟರು ಪಾನ್ ಮಸಾಲಾ, ಗುಟ್ಕಾ ಜಾಹೀರಾತುಗಳಲ್ಲಿ ನಟಿಸಿ ವಿವಾದ ಮಾಡಿಕೊಂಡಿದ್ದಾರೆ. ಆದರೆ ಸನ್ನಿ ಡಿಯೋಲ್ ಅವರು ಎಂದಿಗೂ ಇಂಥ ಜಾಹೀರಾತಿನಲ್ಲಿ ನಟಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಬಟ್ವಾರಾ 1947’ ಸಿನಿಮಾ ಬಿಡುಗಡೆ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.
- Madan Kumar
- Updated on: Aug 17, 2026
- 9:12 pm
ಗುಟ್ಕಾ, ಪಾನ್ ಮಸಾಲ ನಿಷೇಧ ವಾಪಸ್ ಪಡೆದಿಲ್ಲ, ಅಡಿಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದ ಖಾದರ್
ಕರ್ನಾಟಕದಲ್ಲಿ ನಿಕೋಟಿನ್ ಯುಕ್ತ ಗುಟ್ಕಾ, ಪಾನ್ ಮಸಾಲ ನಿಷೇಧಿಸಿರುವ ಸರ್ಕಾರದ ಕ್ರಮದ ಬಗ್ಗೆ ಆರೋಪ ಪ್ರತ್ಯಾರೋಪಗಳು ಶುರುವಾಗಿವೆ. ರಾಜ್ಯ ಸರ್ಕಾರದ ಕ್ರಮಕ್ಕೆ ಅಡಿಕೆ ಬೆಳೆಯುವ ಪ್ರದೇಶದ ಶಾಸಕರುಗಳು ಪಕ್ಷಾತೀತವಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಅಡಿಕೆ ಬೆಳೆಗಾರರಿಗೆ ಮಾರಕವಾಗಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಆದೇಶ ವಾಪಸ್ಗೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ ಸಚಿವ ಖಾದರ್ ಆದೇಶ ಪಡೆದಿಲ್ಲ ಎಂದಿದ್ದಾರೆ.
- Web contact
- Updated on: Aug 15, 2026
- 5:14 pm
ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸಿಎಂ ಕ್ಲಾಸ್: ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸೂಚನೆ
ಶಾಸಕರ ಅಸಮಾಧಾನ ಮತ್ತು ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರುವ ಆತಂಕದ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಗುಟ್ಕಾ ಮಾರಾಟ ನಿಷೇಧ ಆದೇಶವನ್ನು ಹಿಂಪಡೆಯಲು ಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ. ಈ ವಿಷಯ ತಮ್ಮ ಗಮನಕ್ಕೆ ತರದೆ ಆದೇಶ ಹೊರಡಿಸಿದ್ದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಆದೇಶ ಶೀಘ್ರದಲ್ಲೇ ರದ್ದುಗೊಳ್ಳುವ ನಿರೀಕ್ಷೆಯಿದೆ.
- Pramod Shastri G
- Updated on: Aug 14, 2026
- 1:01 pm
ಕರ್ನಾಟಕದಲ್ಲಿ ಗುಟ್ಕಾ ಬ್ಯಾನ್ ಬಗ್ಗೆ ಸಚಿವ ಯುಟಿ ಖಾದರ್ ಹೇಳಿದ್ದಿಷ್ಟು
ಆರೋಗ್ಯ ಸಚಿವ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಮಸಾಲಾ ಜೊತೆಯಲ್ಲಿ ನಿಕೋಟಿನ್ ಇರಬಾರದು. ಆದರೂ ಮಸಾಲಾ ಜೊತೆ ಮಿಕ್ಸ್ ಮಾಡಿ ನಿಕೋಟಿನ್ ಮಾರಾಟ ಮಾಡಲಾಗುತ್ತಿದೆ. ಇದು ನಮ್ಮ ಗಮನಕ್ಕೆ ಬಂದಿದೆ, ಹೀಗಾಗಿ ನಿಷೇಧಕ್ಕೆ ಆದೇಶ ನೀಡಿದ್ದು, ಮುಂದೆ ಯಾವ ರೀತಿ ನಿಯಮ ರೂಪಿಸಬೇಕೆಂದು ನಿರ್ಧರಿಸ್ತೇವೆ. ಇನ್ನು ಅಡಕೆ ಮಾರಾಟಗಾರರಿಗೆ ತೊಂದರೆ ಆಗದ ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
- Ramesh B Jawalagera
- Updated on: Aug 13, 2026
- 10:41 pm
ಕರ್ನಾಟಕದಲ್ಲಿ ಗುಟ್ಕಾ-ತಂಬಾಕು ಬ್ಯಾನ್ ಗೆ ವಿರೋಧ: ಸಿಎಂ ಭೇಟಿಯಾದ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗ
Araga Jnanendra on Gutkha Ban: ಕರ್ನಾಟಕದಲ್ಲಿ ತಂಬಾಕು ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಮಾರಾಟಕ್ಕೆ ನಿಷೇಧ (Gutkha, Pan masala Ban) ಹೇರಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಾರ್ವಜನಿಕರು ಸೇರಿ ಹಲವು ರಾಜಕಾರಣಿಗಳು ಸ್ವಾಗತಿಸಿದ್ದಾರೆ. ಆದರೆ, ಮತ್ತೊಂದೆಡೆ ಇದಕ್ಕೆ ಅಡಿಕೆ ಬೆಳೆಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ (Araga jnanendra) ನೇತೃತ್ವದ ನಿಯೋಗ ಇಂದು (ಆಗಸ್ಟ್ 13) ಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿ ಮಾಡಿ ಬ್ಯಾನ್ ಆದೇಶ ವಾಪಸ್ ಪಡೆಯುವಂತೆ ಮನವಿ ಮಾಡಿದೆ.
- Ramesh B Jawalagera
- Updated on: Aug 13, 2026
- 5:52 pm
Gutkha and Pan Masala Ban: ಕರ್ನಾಟಕದಲ್ಲಿ ತಂಬಾಕು, ನಿಕೋಟಿನ್ ಉತ್ಪನ್ನಗಳ ವಿರುದ್ಧ ಸಮರ: ಗುಟ್ಕಾ, ಪಾನ್ ಮಸಾಲಾ ಒಂದು ವರ್ಷ ನಿಷೇಧ
ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳನ್ನು ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ನಿಷೇಧಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಗಸ್ಟ್ 10ರಂದು ಹೊರಡಿಸಿದ ಅಧಿಸೂಚನೆಯನ್ವಯ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ವ್ಯಸನಮುಕ್ತ ಕರ್ನಾಟಕಕ್ಕೆ ಸಹಕರಿಸಲು ಮನವಿ ಮಾಡಿದೆ.
- Vinay Kashappanavar
- Updated on: Aug 13, 2026
- 5:51 pm