Video: ದುಬೈ ಜೀವನಶೈಲಿಗೆ ಹೊಂದಿಕೊಳ್ಳೋದು ಕಷ್ಟ; ಕಹಿ ಅನುಭವ ಬಿಚ್ಚಿಟ್ಟ ಕೋಲ್ಕತ್ತಾ ಶೆಫ್
ವಿದೇಶಿ ಜೀವನದಲ್ಲಿ ನಡೆಸೋದು ಸುಲಭ ಎಂದುಕೊಳ್ಳುವವರೇ ಹೆಚ್ಚು. ಆದರೆ, ಇಲ್ಲಿ ಬದುಕೋದು ಹೇಳಿದ್ದಷ್ಟು ಸುಲಭವಲ್ಲ. ಕೋಲ್ಕತ್ತಾ ಶೆಫ್ ಒಬ್ಬರು ತಮಗಾದ ಕಹಿ ಅನುಭವ ಹಂಚಿಕೊಂಡು ಇಂಡಿಯಾನೇ ಬೆಸ್ಟ್ ಎಂದಿದ್ದಾರೆ. ಭಾರತೀಯ ಮೂಲದ ವ್ಯಕ್ತಿ ಹಂಚಿಕೊಂಡ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೆಚ್ಚಿನವರಿಗೆ ವಿದೇಶಕ್ಕೆ (foreign) ತೆರಳಬೇಕು, ಅಲ್ಲಿ ಹೋದ್ರೆ ಲೈಫ್ ಸೆಟ್ಲ್ ಆಗಬೇಕು ಹೀಗೆ ಸಾಕಷ್ಟು ಆಸೆಗಳಿರುತ್ತವೆ. ಆದರೆ, ಭಾರತಕ್ಕೆ ಹೋಲಿಸಿದ್ರೆ ವಿದೇಶಿ ಜೀವನ ದುಬಾರಿ. ಫಾರಿನ್‌ನಲ್ಲಿ ಜೀವನ ನಡೆಸೋದು ಕಷ್ಟಕರ. ದುಬೈಯಲ್ಲಿ ವಾಸಿಸುವ ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದ ಶೆಫ್‌ಗೆ ಕಹಿ ಅನುಭವವಾಗಿದೆ. ನೋಡೋರಿಗೆ ಕೈ ತುಂಬಾ ಸಂಬಳ ಸಿಗುತ್ತದೆ, ಆದರೆ ಇಲ್ಲಿಯದ್ದು ವಾಸ್ತವ ಬೇರೆಯೇ ಇದೆ ಎಂದು ವಿವರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ವಿದೇಶಿ ಜೀವನದ ಅಸಲಿ ಮುಖ ಬಿಚ್ಚಿಟ್ಟ ವ್ಯಕ್ತಿ
ರಾಹುಲ್ ಬಾಲಾ (Rahul Bala) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ನನಗೆ ವಿದೇಶಕ್ಕೆ ಹೋಗ್ಬೇಕು, ಅಲ್ಲಿ ಕೆಲಸ ಮಾಡ್ಬೇಕು ಎನ್ನುವುದಿತ್ತು. ಆದರೆ ದುಬೈ ಬಂದ ಮೇಲೆ ನಾನು ತೆಗೆದುಕೊಂಡ ನಿರ್ಧಾರ ಸರಿಯಿಲ್ಲ ಎಂದೆನಿಸಿತು. ನಾವು ಅಂದುಕೊಂಡಂತೆ ಇಲ್ಲಿ ಏನು ಇಲ್ಲ. ಇಲ್ಲಿಗಿಂತ ನಮ್ಮ ಹುಟ್ಟೂರೇ ವಾಸಿ ಎಂದು ಹೇಳಿದ್ದಾರೆ.
ಇಲ್ಲಿ ವೆಚ್ಚ ಭರಿಸೋದು ಕಷ್ಟಕರ
ಭಾರತಕ್ಕೆ ಹೋಲಿಸಿದ್ರೆ ಇಲ್ಲಿನ ದೈನಂದಿನ ವೆಚ್ಚಗಳನ್ನು ಭರಿಸೋದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡವರಿಗೆ ಕಷ್ಟವಾಗುತ್ತದೆ. ದುಬೈನಲ್ಲಿನ ಖರ್ಚು ವೆಚ್ಚಗಳನ್ನು ಭಾರತದ ರೂಪಾಯಿಗೆ ಹೋಲಿಸಿದ್ರೆ ಮೊತ್ತವು ದೊಡ್ಡದಾಗಿಯೇ ಕಾಣುತ್ತದೆ ಎಂದಿದ್ದಾರೆ.
ದೈನಂದಿನ ಖರ್ಚು ವೆಚ್ಚ ಬಲು ದುಬಾರಿ
ಇಲ್ಲಿ ಒಂದು ಹೊಟ್ಟು ಊಟಕ್ಕೆ 260 ರೂ ಇಟ್ಟುಕೊಳ್ಳಬೇಕು. ದೈನಂದಿನ ಖರ್ಚು ವೆಚ್ಚಗಳಿಗೆ ತಿಂಗಳ ಸಂಬಳ ಸಾಕಾಗುತ್ತದೆ. ತಿಂಗಳ ಕೊನೆಯಲ್ಲಿ ಕೈ ಖಾಲಿಯಾಗುತ್ತದೆ. ಹೀಗಾಗಿ ಇಲ್ಲಿಗಿಂತ ಭಾರತವೇ ಬೆಸ್ಟ್ ಎಂದು ವಾಸ್ತವ ಸ್ಥಿತಿಯನ್ನು ವಿವರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಭಾರತೀಯರ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿದೇಶಿಗ, ಕಾರಣ ತಿಳಿದ್ರೆ ನೀವು ಶಾಕ್ ಆಗ್ತೀರಾ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನಿಮ್ಮ ಮಾತು ನಿಜ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ನಿರ್ಧಾರದ ಬಗ್ಗೆ ಬೇಸರವಿದ್ದರೆ ದಯವಿಟ್ಟು ವಾಪಾಸ್ ಬನ್ನಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಕಡಿಮೆ ಸಂಬಳದಲ್ಲಿ ವಿದೇಶದಲ್ಲಿ ಜೀವನ ನಡೆಸೋದು ಕಷ್ಟ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




