ಸುಶಾಂತ್ ಸಿಂಗ್ ಕೇಸ್ ಬಹುತೇಕ ಅಂತ್ಯ; ಆತ್ಮಹತ್ಯೆ ಎಂದು ಒಪ್ಪುತ್ತಾ ಕೋರ್ಟ್?

| Updated By: ರಾಜೇಶ್ ದುಗ್ಗುಮನೆ

Updated on: Mar 24, 2025 | 11:00 AM

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಸಿಬಿಐ, ರಿಯಾ ಚಕ್ರವರ್ತಿ ಅವರಿಗೆ ಕ್ಲೀನ್‌ಚಿಟ್ ನೀಡಿದೆ. ಇದನ್ನು ಆತ್ಮಹತ್ಯೆ ಎಂದು ತೀರ್ಮಾನಿಸಲಾಗಿದೆ. ರಿಯಾ ಮತ್ತು ಅವರ ಕುಟುಂಬದವರಿಗೆ ಆರೋಪಗಳಿಂದ ಮುಕ್ತಿ ಸಿಕ್ಕಿದೆ. ಈ ತೀರ್ಪಿನಿಂದ ರಿಯಾ ಅವರು ದೊಡ್ಡ ನೆಮ್ಮದಿ ಪಡೆದಿದ್ದಾರೆ.

ಸುಶಾಂತ್ ಸಿಂಗ್ ಕೇಸ್ ಬಹುತೇಕ ಅಂತ್ಯ; ಆತ್ಮಹತ್ಯೆ ಎಂದು ಒಪ್ಪುತ್ತಾ ಕೋರ್ಟ್?
ಸುಶಾಂತ್
Follow us on

ಸುಶಾಂತ್ ಸಿಂಗ್ ರಜಪೂತ್ (Sushanth Singh Rajput) ಸಾವಿನ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ದೀರ್ಘ ಸಮಯಗಳ ಕಾಲ ತನಿಖೆ ನಡೆಸಿದ್ದು ಗೊತ್ತೇ ಇದೆ. ಸುಶಾಂತ್ ಸಿಂಗ್ ಸಾವಿಗೂ ನಟಿ ರಿಯಾ ಚಕ್ರವರ್ತಿಗೂ ಸಂಬಂಧ ಇದೆ ಎನ್ನಲಾಗಿತ್ತು. ಅಷ್ಟೇ ಅಲ್ಲ, ರಿಯಾ ಒತ್ತಡಕ್ಕೆ ಕಂಗೆಟ್ಟು ಸುಶಾಂತ್ ಸತ್ತರು ಎಂದು ವರದಿಗಳು ಆದವು. ಆದರೆ, ಇದೆಲ್ಲವನ್ನೂ ಸಿಬಿಐ ತನಿಖೆಯಲ್ಲಿ ತಳ್ಳಿ ಹಾಕಿದೆ. ರಿಯಾಗೆ ಅವರ ಸಹೋದರ ಶೋವಿಕ್​ಗೆ ಹಾಗೂ ಅವರ ಕುಟುಂಬಕ್ಕೆ ಸಿಬಿಐ ಕಡೆಯಿಂದ ಕ್ಲೀನ್​ಚಿಟ್ ಸಿಕ್ಕಿದೆ. ಇದು ಆತ್ಮಹತ್ಯೆ ಎಂದು ಸಿಬಿಐ ಹೇಳಿದೆ.

2020ರ ಜೂನ್ ತಿಂಗಳಲ್ಲಿ ಸುಶಾಂತ್ ಸಿಂಗ್ ನಿಧನ ಹೊಂದಿದರು. ತಮ್ಮ ಫ್ಲ್ಯಾಟ್​ನಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡರು. ಅವರ ಸಾವಿಗೆ ರಿಯಾ ಕಾರಣ ಎನ್ನುವ ಆರೋಪ ಬಂತು. ಏಕೆಂದರೆ ರಿಯಾ ಹಾಗೂ ಸುಶಾಂತ್ ಪ್ರೀತಿಸುತ್ತಿದ್ದರು. ಸುಶಾಂತ್ ಸಾವಿಗೆ ಕೆಲವೇ ದಿನ ಮೊದಲು ಇವರು ಬ್ರೇಕಪ್ ಮಾಡಿಕೊಂಡರು. ಸುಶಾಂತ್​ಗೆ ಬರುತ್ತಿದ್ದ ಹಣವನ್ನು ರಿಯಾ ಕಬಳಿಸಿದ್ದರು ಎಂದೆಲ್ಲ ಹೇಳಲಾಯಿತು. ಇನ್ನು ಡ್ರಗ್ಸ್ ಕೇಸ್​ಗೆ ಸಂಬಂಧಿಸಿ ರಿಯಾ ಸಹೋದರ ಶೋವಿಕ್ ಅವರನ್ನು ಕೂಡ ಬಂಧಿಸಲಾಗಿತ್ತು.

ಶಿಷ್ಟಾಚಾರದ ಪ್ರಕಾರ ತನಿಖೆ ಮುಕ್ತಾಯಗೊಂಡಾಗ, ಮುಕ್ತಾಯ ವರದಿಯನ್ನು ಕೋರ್ಟ್​ಗೆ ಸಲ್ಲಿಸಬೇಕು. ನಂತರ ಮ್ಯಾಜಿಸ್ಟ್ರೇಟ್ ಅದರ ಭವಿಷ್ಯವನ್ನು ನಿರ್ಧರಿಸುತ್ತಾರೆ. ಮ್ಯಾಜಿಸ್ಟ್ರೇಟ್ ಇದನ್ನು ಒಪ್ಪಿದರೆ ಪ್ರಕರಣ ಅಧಿಕೃತವಾಗಿ ಮುಕ್ತಾಯಗೊಂಡಂತೆ ಆಗುತ್ತದೆ. ಅವರು ಒಪ್ಪದಿದ್ದರೆ ಮತ್ತೊಂದು ತನಿಖೆ ಆಗಬೇಕು.  ಉನ್ನತ ನ್ಯಾಯಾಲಯದಲ್ಲಿ ನಿರ್ಧಾರವನ್ನು ಪ್ರಶ್ನಿಸುವ ಮತ್ತು ಅದನ್ನು ವಿರೋಧಿಸಿ ಅರ್ಜಿಯನ್ನು ಸಲ್ಲಿಸುವ ಆಯ್ಕೆಯನ್ನು ಕುಟುಂಬ ಹೊಂದಿರುತ್ತದೆ.

ಇದನ್ನೂ ಓದಿ
ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಗೆಳೆಯರು
ರಶ್ಮಿಕಾ ಅಪ್ಪನಿಗೆ ಇಲ್ಲದೆ ತೊಂದರೆ ನಿಮಗೇಕೆ; ಸಲ್ಮಾನ್ ಖಾನ್ ನೇರ ಪ್ರಶ್ನೆ
‘ಕನ್ನಡ ಸಿನಿಮಾ ಎಂದಾಗ ಬೇಸರ ಆಗೋದು ಏನು ಗೊತ್ತಾ?’; ವಿವರಿಸಿದ ಯಶ್
ಮೊದಲ ಸಿನಿಮಾ ಅವಕಾಶ ಕೊಟ್ಟ ನಿರ್ಮಾಪಕನಿಗೆ ಯಶ್ ಧನ್ಯವಾದ

ಸಿಬಿಐ ವರದಿಗೆ ಸಂಬಂಧಿಸಿದಂತೆ ದಿಯಾ ಮಿರ್ಜಾ ಅವರು ಪ್ರತಿಕ್ರಿಯಿಸಿದ್ದಾರೆ. ‘ರಿಯಾ ವಿರುದ್ಧ ಆರೋಪ ಹೊರಿಸಿದವರು ಈಗ ಕ್ಷಮೆ ಕೇಳಿ ಪತ್ರ ಬರೆಯಬಹುದೇ? ನೀವು ತಪ್ಪಿತಸ್ಥರನ್ನು ಹುಡುಕಲು ಹೊರಟಿರಿ. ಅವರಿಗೆ ಕಿರುಕುಳ ನೀಡಿದರಿ. ಈಗ ಅವರಿಗೆ ಕ್ಷಮೆ ಕೇಳಿ’ ಎಂದಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವು: ತನಿಖಾ ವರದಿ ಸಲ್ಲಿಸಿದ ಸಿಬಿಐ

ರಿಯಾ ಚಕ್ರವರ್ತಿ ಅವರು 27 ದಿನಗಳ ಕಾಲ ಜೈಲಿನಲ್ಲಿ ಇದ್ದರು. ಅವರು ಈ ಪ್ರಕರಣದಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ವೃತ್ತಿ ಬದುಕು ಕೂಡ ನಾಶವಾಗಿದೆ. ಈಗ ಅವರಿಗೆ ಕ್ಲೀನ್ ಚಿಟ್ಟ ಸಿಕ್ಕಿರೋದು ಖುಷಿ ಕೊಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.