Swara Bhasker: ‘ದಿ ಕಾಶ್ಮೀರ್​ ಫೈಲ್ಸ್​’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್​

| Updated By: ಮದನ್​ ಕುಮಾರ್​

Updated on: Nov 29, 2022 | 3:29 PM

Nadav Lapid | The Kashmir Files: ಸ್ವರಾ ಭಾಸ್ಕರ್​ ಅವರ ಟ್ವೀಟ್​ಗೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರ ಪರವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಕಟು ವಿರೋಧ ವ್ಯಕ್ತಪಡಿಸಿದ್ದಾರೆ.

Swara Bhasker: ‘ದಿ ಕಾಶ್ಮೀರ್​ ಫೈಲ್ಸ್​’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್​
ಸ್ವರಾ ಭಾಸ್ಕರ್, ದಿ ಕಾಶ್ಮೀರ್ ಫೈಲ್ಸ್ ಪೋಸ್ಟರ್​
Follow us on

2022ರಲ್ಲಿ ಭಾರಿ ಯಶಸ್ಸು ಕಂಡ ಸಿನಿಮಾಗಳಲ್ಲಿ ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಚಿತ್ರ ಕೂಡ ಪ್ರಮುಖವಾಗಿದೆ. ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 250 ಕೋಟಿ ರೂಪಾಯಿ ಕಮಾಯಿ ಮಾಡಿತು ಎಂಬ ಒಂದೇ ಕಾರಣಕ್ಕೆ ಇದು ಹೆಚ್ಚು ಚರ್ಚೆ ಆಗಿದ್ದಲ್ಲ. ಬದಲಿಗೆ, ಅದರಲ್ಲಿನ ಕಂಟೆಂಟ್​ ಕಾರಣದಿಂದ ಪರ-ವಿರೋಧ ವ್ಯಕ್ತವಾಗಿದ್ದೇ ಹೆಚ್ಚು. ಇತ್ತೀಚೆಗೆ ಮುಕ್ತಾಯವಾದ ಗೋವಾ ಸಿನಿಮೋತ್ಸವದಲ್ಲೂ ಈ ಬಗ್ಗೆ ಚರ್ಚೆ ಆಗಿದೆ. ಸಿನಿಮೋತ್ಸವದ ಜ್ಯೂರಿ ಕಮಿಟಿ ಅಧ್ಯಕ್ಷರಾದ ನಡಾವ್​ ಲಪಿಡ್ (Nadav Lapid)​ ಅವರು ಈ ಸಿನಿಮಾವನ್ನು ‘ಕೆಟ್ಟ ಚಿತ್ರ’ ಎಂದು ಕರೆದಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ (Swara Bhasker) ಅವರು ನಡಾವ್​ ಲಪಿಡ್​ ಅವರ ಹೇಳಿಕೆಗೆ ಸಹಮತ ಸೂಚಿಸಿದ್ದಾರೆ.

ಬಾಲಿವುಡ್​ನಲ್ಲಿ ಸ್ವರಾ ಭಾಸ್ಕರ್​ ಅವರು ಡಿಫರೆಂಟ್​ ಆಗಿ ಗುರುತಿಸಿಕೊಂಡಿದ್ದಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳಲು ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಈ ಬಾರಿ ಕೂಡ ಅವರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕುರಿತ ಅನಿಸಿಕೆಯನ್ನು ನೇರವಾಗಿ ಹಂಚಿಕೊಂಡಿ​ದ್ದಾರೆ. ಗೋವಾ ಸಿನಿಮೋತ್ಸವದಲ್ಲಿ ನಡಾವ್​ ಲಪಿಡ್​ ಹೇಳಿಕೆ ಕುರಿತು ಪ್ರಕಟ ಆಗಿರುವ ಸುದ್ದಿಯನ್ನು ಟ್ವಿಟರ್​ನಲ್ಲಿ ಸ್ವರಾ ಭಾಸ್ಕರ್​ ಹಂಚಿಕೊಂಡಿದ್ದಾರೆ. ‘ಈ ವಿಚಾರ ಜಗತ್ತಿಗೆ ತುಂಬ ಸ್ಪಷ್ಟವಾಗಿ ತಿಳಿದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
ಒಟಿಟಿಗೆ ಬರ್ತಿದೆ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ; ಕನ್ನಡ ಪ್ರೇಕ್ಷಕರಿಗೂ ಇಲ್ಲಿದೆ ಒಂದು ಗುಡ್​ ನ್ಯೂಸ್​
‘ದಿ ಕಾಶ್ಮೀರ್​ ಫೈಲ್ಸ್​’ ನಟನ ಅಚ್ಚರಿಯ ಬದಲಾವಣೆ; ಹೇಗಿದ್ದ ಅನುಪಮ್​ ಖೇರ್​ ಹೇಗಾದ್ರು ನೋಡಿ
‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ್ದು ‘ಬಾಹುಬಲಿ’ಗಿಂತಲೂ ದೊಡ್ಡ ಗೆಲುವು: ಇದು ಆಮಿರ್ ಖಾನ್ ಫಾರ್ಮುಲಾ

ಸ್ವರಾ ಭಾಸ್ಕರ್​ ಅವರ ಈ ಟ್ವೀಟ್​ಗೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಅವರ ಪರವಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಕಟು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ವರಾ ಭಾಸ್ಕರ್​ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ಆದರೆ ಅವುಗಳಿಗೆ ಸ್ವರಾ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಸಿದ್ಧಾಂತದ ಕಾರಣಗಳಿಂದ ಆಗಾಗ ಅವರು ಟೀಕೆಗೆ ಒಳಗಾಗುತ್ತಾರೆ. ಈ ಹಿಂದೆ ಅವರಿಗೆ ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು.

ನಡಾವ್​ ಲಪಿಡ್​ ಹೇಳಿದ್ದೇನು?

‘ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯ ವಿಭಾಗದಲ್ಲಿ ನಾವು 15 ಚಿತ್ರಗಳನ್ನು ನೋಡಿದೆವು. 14 ಸಿನಿಮಾಗಳು ಗುಣಮಟ್ಟದಿಂದ ಕೂಡಿದ್ದು, ಚರ್ಚೆ ಹುಟ್ಟುಹಾಕಿದವು. ಆದರೆ 15ನೇ ಸಿನಿಮಾ ದಿ ಕಾಶ್ಮೀರ್​ ಫೈಲ್ಸ್​ ನೋಡಿ ನಮಗೆಲ್ಲ ಶಾಕ್​ ಆಯಿತು. ಅದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಅಂತ ನನಗೆ ಅನಿಸಿತು. ಇಂಥ ಪ್ರತಿಷ್ಠಿತ ಸಿನಿಮೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಇರಲು ಅದು ಸೂಕ್ತವಲ್ಲ ಎನಿಸಿತು. ಈ ವೇದಿಕೆಯಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸಲು ನಾನು ಕಂಫರ್ಟಬಲ್​ ಆಗಿದ್ದೇನೆ. ಸಿನಿಮೋತ್ಸವದಲ್ಲಿ ಈ ವಿಮರ್ಶಾತ್ಮಕ ಚರ್ಚೆಯನ್ನು ಒಪ್ಪಿಕೊಳ್ಳಬಹುದು. ಬದುಕಿಗೆ ಮತ್ತು ಕಲೆಗೆ ಅದು ಅವಶ್ಯಕ’ ಎಂದು ನಡಾವ್​ ಲಪಿಡ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.