
ಎಲ್ಲ ನಟಿಯರು ಬಳುಕುವ ರೀತಿ ಇರಲು ಇಷ್ಟಪಡೋದು ಗೊತ್ತೇ ಇದೆ. ಅಭಿಮಾನಿಗಳು ಕೂಡ ತಮ್ಮಿಷ್ಟದ ನಟಿ ಹಾಗೆ ಇರಲಿ ಎಂದು ಬಯಸುತ್ತಾರೆ. ಆದರೆ, ಕೆಲ ನಟಿಯರು ಪಾತ್ರಕ್ಕೆ ತಕ್ಕಂತೆ ಕೆಲವು ಚೇಂಜಸ್ ಮಾಡಿಕೊಳ್ಳೋದನ್ನು ನೋಡಬಹುದು. ಈ ಮೊದಲು ನಟಿ ತಾಪ್ಸಿ ಪನ್ನು (Taapsee Pannu) ಕೂಡ ಅದೇ ಪ್ರಯತ್ನ ಮಾಡಿದ್ದರು. ಆದರೆ ಅವರಿಗೆ ನೆಟ್ಟಿಗರಿಂದ ಬಂದ ಕಮೆಂಟ್ಗಳು ತುಂಬ ಖಾರವಾಗಿದ್ದವು. ಆದರೆ, ಅದನ್ನು ಕೂಲ್ ಆಗಿ ಅವರು ಸ್ವೀಕರಿಸಿದ್ದಾರೆ. ಇಂದು (ಆಗಸ್ಟ್ 1) ಅವರ ಜನ್ಮದಿನ. ಈ ವೇಳೆ ಹಳೆಯ ಘಟನೆ ನೆನೆಯೋಣ.
‘ಪಿಂಕ್’, ‘ತಪ್ಪಡ್’, ‘ಹಸೀನ್ ದಿಲ್ರುಬಾ’ ರೀತಿಯ ಚಿತ್ರಗಳನ್ನು ತಾಪ್ಸಿ ಪನ್ನು ನೀಡಿದ್ದಾರೆ. ಅವರು ‘ರಶ್ಮಿ ರಾಕೆಟ್’ ಚಿತ್ರದಲ್ಲಿ ಅಥ್ಲೀಟ್ ಪಾತ್ರ ಮಾಡಿದ್ದರು. ಆ ಸಿನಿಮಾ ಅ.15ರಂದು ಜೀ5 ಓಟಿಟಿ ಪ್ಲಾಟ್ಫಾರ್ಮ್ ಮೂಲಕ ಬಿಡುಗಡೆ ಕಂಡಿದೆ. ಆ ಸಿನಿಮಾದಲ್ಲಿನ ತಮ್ಮ ಪಾತ್ರಕ್ಕಾಗಿ ತಾಪ್ಸಿ ಪನ್ನು ಬಾಡಿ ಟ್ರಾನ್ಸ್ಫಾರ್ಮೇಷನ್ ಮಾಡಿಕೊಂಡಿದ್ದರು. ಅದರ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಅವುಗಳಿಗೆ ಬಂದ ಕಮೆಂಟ್ ಕೊಂಚ ಕಟುವಾಗಿಯೇ ಇದ್ದವು.
‘ತಾಪ್ಸಿ ಪನ್ನು ದೇಹ ಗಂಡಸರ ರೀತಿ ಇದೆ’ ಎಂದು ಕೆಲವರು ಕಮೆಂಟ್ ಮಾಡಿದ್ದರು. ತಾಪ್ಸಿ ಪನ್ನು ಬೇಸರ ಮಾಡಿಕೊಳ್ಳಬಹುದು ಎಂಬುದು ಕಮೆಂಟ್ ಮಾಡಿದವನ ಉದ್ದೇಶ ಆಗಿತ್ತೇನೋ. ಆದರೆ, ಅವರು ಇದನ್ನು ತುಂಬ ಪಾಸಿಟಿವ್ ಆಗಿ ಸ್ವೀಕರಿಸಿದರು ಎಂದೇ ಹೇಳಬಹುದು. ಸಿನಿಮಾ ನೋಡಿ ಇದಕ್ಕೆ ಕಾರಣ ಇದೆ ಎಂದರು.
ಇದನ್ನೂ ಓದಿ: ಸುಡು ಬೇಸಿಗೆಯಲ್ಲಿ ಬಡವರಿಗೆ ವಾಟರ್ ಕೂಲರ್ ನೀಡಿದ ನಟಿ ತಾಪ್ಸಿ ಪನ್ನು
ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳನ್ನು ಮಾಡುತ್ತ ತಾಪ್ಸಿ ಪನ್ನು ಮುನ್ನುಗ್ಗುತ್ತಿದ್ದಾರೆ. ಅವರಿಗೆ ಟ್ರೋಲ್ ಕಾಟ ಹೊಸದೇನೂ ಅಲ್ಲ. ಅನೇಕ ವಿಚಾರಗಳ ಬಗ್ಗೆ ಅವರು ಓಪನ್ ಆಗಿ ಎಲ್ಲವನ್ನೂ ಹೇಳಿಕೊಂಡಿದ್ದು ಇದೆ2. ಆ ಕಾರಣದಿಂದ ಅವರನ್ನು ಕೆಲವರು ಟ್ರೋಲ್ ಮಾಡುವುದರ ಜೊತೆಗೆ ದ್ವೇಷಿಸಿಸುತ್ತಾರೆ ಕೂಡ. ಆದರೆ ಅವುಗಳ ಬಗ್ಗೆ ತಾಪ್ಸಿ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅದರ ಬದಲು ಅವರು ತಮ್ಮ ಸಿನಿಮಾ ಕೆಲಸಗಳ ಬಗ್ಗೆ ಗಮನ ಹರಿಸುತ್ತಾರೆ. ಅದರ ಫಲವಾಗಿ ತಾಪ್ಸಿಗೆ ಹೆಚ್ಚು ಹೆಚ್ಚು ಸಿನಿಮಾ ಆಫರ್ಗಳು ಹರಿದುಬರುತ್ತಿವೆ. ಕಳೆದ ವರ್ಷ ರಿಲೀಸ್ ಆದ ‘ಫಿರ್ ಆಯಿ ಹಸೀನ್ ದಿಲ್ರುಬಾ’ ಯಶಸ್ಸು ಕಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.