‘ತೋಬಾ ತೋಬಾ..’ ಗಾಯಕನ ಇಂಡಿಯಾ ಟೂರ್​; 16 ಕೋಟಿ ರೂಪಾಯಿ ಸಂಭಾವನೆ

|

Updated on: Jul 25, 2024 | 6:20 PM

ವಿಕ್ಕಿ ಕೌಶಲ್​ ಅಭಿನಯದ ‘ಬ್ಯಾಡ್​ ನ್ಯೂಸ್​’ ಸಿನಿಮಾದ ‘ತೋಬಾ ತೋಬಾ..’ ಸಾಂಗ್​ ಸೂಪರ್​ ಹಿಟ್​ ಆಗಿದೆ. ಈ ಹಾಡಿನ ಗಾಯಕ ಕರಣ್​ ಔಜ್ಲಾ ಸಿಕ್ಕಾಪಟ್ಟೆ ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ. ಪಂಜಾಬ್​ ಮೂಲದ ಕರಣ್​ ಅವರು ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಈಗ ಅವರು ಭಾರತದಲ್ಲಿ ತಮ್ಮ ಮೊದಲ ಸಂಗೀತ ಕಾರ್ಯಕ್ರಮ ನೀಡಲು ಸಜ್ಜಾಗಿದ್ದಾರೆ.

‘ತೋಬಾ ತೋಬಾ..’ ಗಾಯಕನ ಇಂಡಿಯಾ ಟೂರ್​; 16 ಕೋಟಿ ರೂಪಾಯಿ ಸಂಭಾವನೆ
ವಿಕ್ಕಿ ಕೌಶಲ್​, ಕರಣ್​ ಔಜ್ಲಾ
Follow us on

ಸೋಶಿಯಲ್​ ಮೀಡಿಯಾದಲ್ಲಿ ‘ತೋಬಾ ತೋಬಾ..’ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹಾಡಿನಿಂದ ವಿಕ್ಕಿ ಕೌಶಲ್​ ಅವರಿಗೆ ಹೊಸ ಇಮೇಜ್​ ಬಂದಿದೆ. ‘ತೋಬಾ ತೋಬಾ..’ ಹಾಡಿಗೆ ಧ್ವನಿ ನೀಡಿದ ಪಂಜಾಬಿ ಸಿಂಗರ್​ ಕರಣ್​ ಔಜ್ಲಾ ಅವರು ಸಖತ್​ ಮಿಂಚುತ್ತಿದ್ದಾರೆ. ಈಗ ಅವರು ಬಾಲಿವುಡ್ ಮಂದಿಯ ಫೇವರಿಟ್​ ಸಿಂಗರ್​ ಆಗಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಕರಣ್​ ಜೌಜ್ಲಾ ಅವರು ಇದೇ ಮೊದಲ ಬಾರಿಗೆ ಭಾರತದಲ್ಲಿ ಲೈವ್​ ಮ್ಯೂಸಿಕ್​ ಕಾರ್ಯಕ್ರಮ ನೀಡಲು ಬರುತ್ತಿದ್ದಾರೆ. ದಾಖಲೆ ಮೊತ್ತದಲ್ಲಿ ಇದರ ಟಿಕೆಟ್​ಗಳು ಮಾರಾಟ ಆಗುತ್ತಿವೆ.

ಛಂಡಿಗಡ, ಬೆಂಗಳೂರು, ದೆಹಲಿ, ಮುಂಬೈನಲ್ಲಿ ಕರಣ್​ ಔಜ್ಲಾ ಅವರ ಲೈವ್​ ಕಾರ್ಯಕ್ರಮ ನಡೆಯಲಿದೆ. ಇದರ ಟಿಕೆಟ್​ಗಳು ಬುಕ್​ ಮೈ ಶೋನಲ್ಲಿ ಲಭ್ಯವಾಗಿವೆ. ಡಿಸೆಂಬರ್​ 7ರಂದು ಛಂಡಿಗಡದಲ್ಲಿ, ಡಿಸೆಂಬರ್​ 13ರಂದು ಬೆಂಗಳೂರಿನಲ್ಲಿ, ಡಿಸೆಂಬರ್​ 15ರಂದು ದೆಹಲಿಯಲ್ಲಿ ಹಾಗೂ ಡಿಸೆಂಬರ್​ 21ರಂದು ಮುಂಬೈನಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: 200 ರೂಪಾಯಿಗಾಗಿ ಅವಕಾಶ ಕೇಳುತ್ತಿದ್ದ ವಿಕ್ಕಿ ಕೌಶಲ್; ಬದುಕು ಬದಲಿಸಿತು ಬಣ್ಣದ ಲೋಕ

ಇಂಡಿಯಾ ಟೂರ್​ಗಾಗಿ ಕರಣ್​ ಔಜ್ಲಾ ಅವರು ಬರೋಬ್ಬರಿ 16 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ! ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸೃಷ್ಟಿ ಆಗಿದೆ. ಪಂಜಾಬಿ ಹಾಡುಗಳ ಮೂಲಕ ಅವರು ಜನಮನ ಗೆದ್ದಿದ್ದಾರೆ. ದೆಹಲಿ ಕಾರ್ಯಕ್ರಮದ 20,000 ಟಿಕೆಟ್​ಗಳು ಕೆಲವೇ ಗಂಟೆಗಳಲ್ಲಿ ಸೋಲ್ಡ್​ಔಟ್​ ಆಗಿವೆ! ಬೇಡಿಕೆ ಹೆಚ್ಚಿರುವುದರಿಂದ ದೆಹಲಿಯಲ್ಲಿ ಇನ್ನೊಂದು ಶೋ ಆಯೋಜನೆ ಮಾಡಲು ಪ್ಲ್ಯಾನ್​ ಮಾಡಲಾಗುತ್ತಿದೆ.

ಕರಣ್​ ಔಜ್ಲಾ ಅವರ ಮ್ಯೂಸಿಕ್​ ಕಾರ್ಯಕ್ರಮದ ಟಿಕೆಟ್​ಗಳು ದುಬಾರಿ ಆಗಿವೆ. ಒಂದೂವರೆ ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೆ ಟಿಕೆಟ್​ ಬೆಲೆ ಇದೆ. ಹಾಗಿದ್ದರೂ ಕೂಡ ಅಭಿಮಾನಿಗಳು ಈ ಟಿಕೆಟ್​ಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಟ್ಟು 70 ಸಾವಿರ ಜನರು ಈ ಶೋನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಂಜಾಬಿ ಸಿಂಗರ್​ಗೆ ಭಾರತದಲ್ಲಿ ಇಷ್ಟು ದೊಡ್ಡ ಶೋ ನಡೆಯಲಿರುವುದು ಇದೇ ಮೊದಲು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.