Nora Fatehi: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಇಡಿ ತನಿಖೆಗೆ ಹಾಜರಾದ ನಟಿ ನೋರಾ ಫತೇಹಿ

Sukesh Chandrasekhar | Money Laundering: ಸಾಕಷ್ಟು ಉದ್ಯಮಿಗಳಿಗೆ ಸುಕೇಶ್​ ಚಂದ್ರಶೇಖರ್​ ಅವರು ವಂಚನೆ ಮಾಡಿದ್ದಾರೆ ಎಂಬ ಆರೋಪ ಇದೆ. ಈ ಪ್ರಕರಣದಲ್ಲಿ ನೋರಾ ಫತೇಹಿ ಹೆಸರು ಕೂಡ ತಳುಕು ಹಾಕಿಕೊಂಡಿದೆ.

Nora Fatehi: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಇಡಿ ತನಿಖೆಗೆ ಹಾಜರಾದ ನಟಿ ನೋರಾ ಫತೇಹಿ
ನೋರಾ ಫತೇಹಿ
Edited By:

Updated on: Dec 02, 2022 | 4:40 PM

ಬಾಲಿವುಡ್​ನಲ್ಲಿ ನಟಿ ನೋರಾ ಫತೇಹಿ (Nora Fatehi) ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಸುಕೇಶ್​ ಚಂದ್ರಶೇಖರ್​ (Sukesh Chandrasekhar) ಜೊತೆ ಸಂಪರ್ಕ ಹೊಂದಿದ್ದ ಕಾರಣದಿಂದ ನೋರಾ ಫತೇಹಿ ಕೂಡ ತನಿಖೆಗೆ ಒಳಗಾಗುವಂತಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ. ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಇಂದು (ಡಿ.2) ವಿಚಾರಣೆ ನಡೆಸಿದ್ದಾರೆ. ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗೆ ನೋರಾ ಫತೇಹಿ ಹಾಜರಾಗಿದ್ದಾರೆ. ಇಡಿ ಅಧಿಕಾರಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಕೂಡ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಅವರ ವಿರುದ್ಧ ಈಗಾಗಲೇ ಚಾರ್ಜ್​ ಶೀಟ್​ ಸಲ್ಲಿಸಲಾಗಿದೆ. ಈ ಕೇಸ್​ನಲ್ಲಿ ನೋರಾ ಫತೇಹಿ ಅವರ ಹೇಳಿಕೆಯನ್ನು ಇಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ನೋರಾ ಫತೇಹಿ ಮೂಲತಃ ಭಾರತದವರಲ್ಲ. ಕೆನಾಡದಿಂದ ಬಂದಿರುವ ಅವರು ಭಾರತದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅವರಿಗೆ ಸಖತ್​ ಬೇಡಿಕೆ ಇದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇಷ್ಟೆಲ್ಲ ಬ್ಯುಸಿ ಆಗಿರುವ ಅವರು ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

ಸಾಕಷ್ಟು ಉದ್ಯಮಿಗಳಿಗೆ ಸುಕೇಶ್​ ಚಂದ್ರಶೇಖರ್​ ಅವರು ವಂಚನೆ ಮಾಡಿದ್ದಾರೆ ಎಂಬ ಆರೋಪ ಇದೆ. ಉದ್ಯಮಿಗಳಿಂದ ಪಡೆದುಕೊಂಡ ಹಣವನ್ನು ತಂದು, ಅದರಿಂದ ನಟಿಯರಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದರು. ನೋರಾ ಫತೇಹಿ ಕೂಡ ಅವರಿಂದ ಗಿಫ್ಟ್​ ಪಡೆದಿದ್ದರು ಎಂಬ ಮಾತು ಕೇಳಿಬಂದಿದೆ. ಅಂತಿಮವಾಗಿ ಈ ಪ್ರಕರಣದಲ್ಲಿ ಯಾರಿಗೆ ಶಿಕ್ಷೆ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇದನ್ನೂ ಓದಿ
Nora Fatehi: ಹೊಸ ಅವತಾರದಲ್ಲಿ ಕಾಣಿಸಿಕೊಂಡ ನೋರಾ; ಕೆನಡಾ ಮೂಲದ ನಟಿಯ ಮನಮೋಹಕ ಫೋಟೋಗಳು ವೈರಲ್
Nora Fatehi: ಆಗಾಗ ಗೆಟಪ್ ಬದಲಿಸುವ ನೋರಾ; ಇಲ್ಲಿವೆ ನಟಿಯ ಕ್ಯೂಟ್ ಫೋಟೋಗಳು
Nora Fatehi: ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ನೋರಾ ಫತೇಹಿ
ನೋರಾ ಫತೇಹಿಗೆ ಗಿಫ್ಟ್​ ಆಗಿ ಸಿಕ್ಕಿತ್ತು ಐಷಾರಾಮಿ ಕಾರು; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿಗೆ ಸಂಕಷ್ಟ

ನೋರಾ ಫತೇಹಿ ಅವರು ಅತ್ಯುತ್ತಮ ಡ್ಯಾನ್ಸರ್​. ಹಿಂದಿ ಸಿನಿಮಾಗಳಲ್ಲಿ ಐಟಂ ಡ್ಯಾನ್ಸ್ ಮಾಡುವ ಮೂಲಕ ಅವರು ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಅವರು ಹೆಜ್ಜೆ ಹಾಕಿದ ಎಲ್ಲ ಹಾಡುಗಳು ಕೋಟಿಗಟ್ಟಲೆ ವೀವ್ಸ್​ ಪಡೆದುಕೊಂಡಿವೆ. ನೋರಾ ಫತೇಹಿ ಡ್ಯಾನ್ಸ್ ಮಾಡಿದರೆ ಆ ಹಾಡು ಖಂಡಿತಾ ಸೂಪರ್​ ಹಿಟ್​ ಆಗುತ್ತದೆ ಎಂಬ ನಂಬಿಕೆ ಬಾಲಿವುಡ್​ ವಲಯದಲ್ಲಿದೆ.

ಪ್ರತಿ ಹಾಡಿಗೆ ನೋರಾ ಫತೇಹಿ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಮಾತ್ರವಲ್ಲದೇ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಕೆಲವು ರಿಯಾಲಿಟಿ ಶೋಗಳಲ್ಲಿ ನಿರ್ಣಾಯಕಿಯಾಗಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.