Adah Sharma: ‘ದಿ ಕೇರಳ ಸ್ಟೋರಿ ಕೇವಲ ಸಿನಿಮಾ ಅಲ್ಲ, ಇದೊಂದು ಆಂದೋಲನ’: ನಟಿ ಅದಾ ಶರ್ಮಾ

|

Updated on: May 17, 2023 | 3:15 PM

The Kerala Story: ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಸಿಗುತ್ತಿರುವ ಭರ್ಜರಿ ರೆಸ್ಪಾನ್ಸ್​ ನೋಡಿ ಅದಾ ಶರ್ಮಾ ಖುಷಿ ಆಗಿದ್ದಾರೆ. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಗಿದೆ.

Adah Sharma: ‘ದಿ ಕೇರಳ ಸ್ಟೋರಿ ಕೇವಲ ಸಿನಿಮಾ ಅಲ್ಲ, ಇದೊಂದು ಆಂದೋಲನ’: ನಟಿ ಅದಾ ಶರ್ಮಾ
ಅದಾ ಶರ್ಮಾ
Follow us on

ಬಾಕ್ಸ್​ ಆಫೀಸ್​ನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿರುವ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದ ಬಗ್ಗೆ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಈ ಸಿನಿಮಾಗೆ ಸುದೀಪ್ತೋ ಸೇನ್​ (Sudipto Sen) ಅವರು ನಿರ್ದೇಶನ ಮಾಡಿದ್ದಾರೆ. ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅದಾ ಶರ್ಮಾ (Adah Sharma) ಅವರಿಗೆ ದೇಶಾದ್ಯಂತ ಖ್ಯಾತಿ ಹೆಚ್ಚಿದೆ. ಈಗ ಅವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ‘ದಿ ಕೇರಳ ಸ್ಟೋರಿ’ ಸಿನಿಮಾಗೆ ಸಿಗುತ್ತಿರುವ ಭರ್ಜರಿ ರೆಸ್ಪಾನ್ಸ್​ ನೋಡಿ ಅದಾ ಶರ್ಮಾ ಖುಷಿ ಆಗಿದ್ದಾರೆ. ‘ಇದೊಂದು ಸಿನಿಮಾ ಅಲ್ಲ. ಇದು ಆಂದೋಲನ’ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

‘ಈ ಮೊದಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಸಿಕ್ಕಾಗ ‘1920’ ಮತ್ತು ‘ಕಮಾಂಡೋ’ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು. ಆದರೆ ಈಗ ದಿ ಕೇರಳ ಸ್ಟೋರಿ ಬಗ್ಗೆ ಮಾತನಾಡುತ್ತಾರೆ. ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳು ಎಂದು ತಾಯಂದಿರು ಕಣ್ಣೀರು ಹಾಕುತ್ತಾ ಹೇಳುತ್ತಾರೆ. ಹುಡುಗಿಯರಿಗೆ ಈ ಚಿತ್ರ ಇಷ್ಟ ಆಗಿದೆ. ನಾಲ್ಕು-ಐದು ಬಾರಿ ಸಿನಿಮಾ ನೋಡಿದ ಹುಡುಗರು ಬಂದು ಕೆಲವು ಡೈಲಾಗ್​ ಮತ್ತು ದೃಶ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಈಗ ಕೇವಲ ಸಿನಿಮಾವಾಗಿ ಉಳಿದಿಲ್ಲ. ಇದೊಂದು ಆಂದೋಲನ ಆಗಿದೆ’ ಎಂದಿದ್ದಾರೆ ಅದಾ ಶರ್ಮಾ.

ಇದನ್ನೂ ಓದಿ: Adah Sharma: ಬ್ಲೂ ವೇಲ್​ ಕುರಿತ ಸಿನಿಮಾದಲ್ಲಿ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ; ಈ ಚಿತ್ರದ ಕಥೆ ಏನು?

ಇದನ್ನೂ ಓದಿ
‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಮಧ್ಯ ಪ್ರದೇಶ ಸರ್ಕಾರ
The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್​ನಲ್ಲಿ ಜೋರಾಗಿದೆ ಚರ್ಚೆ
Adah Sharma: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಗಮನ ಸೆಳೆದ ಅದಾ ಶರ್ಮಾ ನಟನೆ; ಪ್ರೇಕ್ಷಕರಿಂದ ಸಿಕ್ತು ಮೆಚ್ಚುಗೆ
The Kerala Story Review: ಐಸಿಸ್ ಸಂಚಿನ ಕುರಿತು ಎಚ್ಚರಿಕೆ ಸಂದೇಶ ಸಾರುವ ‘ದಿ ಕೇರಳ ಸ್ಟೋರಿ’

2008ರಿಂದಲೂ ಅದಾ ಶರ್ಮಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ‘ರಣವಿಕ್ರಮ’. 2015ರಲ್ಲಿ ತೆರೆಕಂಡಿದ್ದ ಆ ಚಿತ್ರಕ್ಕೆ ಪುನೀತ್​ ರಾಜ್​ಕುಮಾರ್​ ಹೀರೋ ಆಗಿದ್ದರು. ಪುನೀತ್​ಗೆ ಜೋಡಿಯಾಗಿ ಅದಾ ಶರ್ಮಾ ಅಭಿನಯಿಸಿದ್ದರು. ಆ ಬಳಿಕ ಅವರು ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಮಿಂಚಿದ ಅದಾ ಶರ್ಮಾ

10ನೇ ತರಗತಿಯಲ್ಲಿ ಇರುವಾಗಲೇ ಅದಾ ಶರ್ಮಾ ಅವರಿಗೆ ನಟಿಯಾಗುವ ಬಯಕೆ ಮೂಡಿತ್ತು. ಆದರೆ ಹೈಸ್ಕೂಲ್​ ಶಿಕ್ಷಣ ಮುಗಿಯುವ ತನಕ ಸಿನಿಮಾದಲ್ಲಿ ನಟಿಸಲು ಅವರ ಪೋಷಕರು ಅವಕಾಶ ನೀಡಲಿಲ್ಲ. ನಂತರ ಅವರು ಅನೇಕ ಸಿನಿಮಾಗಳಿಗೆ ಆಡಿಷನ್​ ನೀಡಲು ಶುರುಮಾಡಿದರು. ಅದಾ ಶರ್ಮಾ ಮೊದಲು ನಟಿಸಿದ್ದು ಹಿಂದಿಯ ‘1920’ ಸಿನಿಮಾದಲ್ಲಿ. 2014ರ ಬಳಿಕ ಅವರಿಗೆ ಬೇರೆ ಭಾಷೆಗಳಿಂದ ಅವಕಾಶಗಳು ಸಿಗಲು ಆರಂಭಿಸಿದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.