ಸಿನಿಮಾ ಬಜೆಟ್ 45 ಕೋಟಿ, ಗಳಿಕೆ 60 ಸಾವಿರ; ಶೇ. 99.99ರಷ್ಟು ನಷ್ಟ
ಅರ್ಜುನ್ ಕಪೂರ್ ಅಭಿನಯದ 'ದಿ ಲೇಡಿ ಕಿಲ್ಲರ್' ಸಿನಿಮಾ ಬಾಲಿವುಡ್ ಕಂಡ ಭಾರಿ ದುರಂತಗಳಲ್ಲಿ ಒಂದು. 45 ಕೋಟಿ ಬಜೆಟ್‌ನ ಈ ಚಿತ್ರ ಕೇವಲ 60 ಸಾವಿರ ರೂ. ಗಳಿಸಿ ಶೇ. 99.99ರಷ್ಟು ನಷ್ಟ ಅನುಭವಿಸಿದೆ. ಸತತ ವೈಫಲ್ಯಗಳು ಮತ್ತು ನೆಗೆಟಿವ್ ಪ್ರತಿಕ್ರಿಯೆಗಳ ನಡುವೆಯೂ ಅರ್ಜುನ್ ಕಪೂರ್ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ.

ಅರ್ಜುನ್ ಕಪೂರ್ (Arjun Kapoor) ಅವರು ಬಾಲಿವುಡ್ ಹೀರೋ. ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದಾರೆ ಒಂದು ಪೋಸ್ಟ್ಗೆ 10-20 ಸಾವಿರದಷ್ಟು ಲೈಕ್ಸ್ ಬರುತ್ತವೆ. ಕಮೆಂಟ್ ಬಾಕ್ಸ್ ಓಪನ್ ಮಾಡಿ ನೋಡಿದರೆ ಎಲ್ಲವೂ ನೆಗೆಟಿವ್ ಕಮೆಂಟ್ಗಳೇ ಆಗಿರುತ್ತವೆ. ಈಗ ಅವರ ಒಂದು ಸಿನಿಮಾ ಬಗ್ಗೆ ನಾವು ಹೇಳುತ್ತಿದ್ದೇವೆ. ಇದು ಭಾರತ ಚಿತ್ರರಂಗ ಕಂಡ ದೊಡ್ಡ ಡಿಸಾಸ್ಟರ್ಗಳಲ್ಲಿ ಒಂದು ಎನ್ನಬಹುದು.
2023ರಲ್ಲಿ ರಿಲೀಸ್ ಆದ ‘ದಿ ಲೇಡಿ ಕಿಲ್ಲರ್’ ಎಂಬ ಚಿತ್ರ ದುರಂತ ಕಂಡಿತು. ಈ ಸಿನಿಮಾದ ಬಜೆಟ್ 45 ಕೋಟಿ ರೂಪಾಯಿ. ಅರ್ಜುನ್ ಕಪೂರ್ ಅವರನ್ನು ನಂಬಿ ಇಷ್ಟೊಂದು ಹಣ ಹಾಕಲು ನಿರ್ಮಾಪಕರು ಬಂದಿದ್ದೇ ಒಂದು ಸಾಧನೆ ಎನ್ನಬಹುದು. ಆದರೂ ಭರವಸೆಯಿಂದ ನಿರ್ಮಾಪಕರು ಸಿನಿಮಾ ಮಾಡಿದರು.
ಈ ಚಿತ್ರ ಮೊದಲ ದಿನ ಕಲೆಕ್ಷನ್ ಮಾಡಿದ್ದು 38 ಸಾವಿ ರೂಪಾಯಿ. ಈ ಚಿತ್ರದ ಒಟ್ಟೂ ಬಾಕ್ಸ್ ಆಫೀಸ್ ಕಲೆಕ್ಷನ್ ಕೇವಲ 60 ಸಾವಿರ. ಅಂದರೆ ಮೊದಲ ದಿನದ ಬಳಿಕ ಚಿತ್ರ ಗಳಿಕೆ ಮಾಡಿದ್ದು ಕೇವಲ 22 ಕೋಟಿ ರೂಪಾಯಿ. ಇದು ಅರ್ಜುನ್ ಕಪೂರ್ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಶೇ. 99.99 ಪರ್ಸೆಂಟ್ ನಷ್ಟ ಆಗಿದೆ.
ಈ ಸಿನಿಮಾ ಮೊದಲ ದಿನ ಮಾರಾಟ ಮಾಡಿದ್ದು ಕೇವಲ 293 ಟಿಕೆಟ್ಗಳು ಮಾತ್ರ. ಇದರಲ್ಲಿ ಚಿತ್ರತಂಡದವರೇ ಖರೀದಿ ಮಾಡಿದ್ದು ಎಷ್ಟಿತ್ತೋ ದೇವರೇ ಬಲ್ಲ. ಅರ್ಜುನ್ ಕಪೂರ್ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ.
ಇದನ್ನೂ ಓದಿ: ಬ್ರೇಕಪ್ ಬಳಿಕ ಮೊದಲ ಬಾರಿ ಮುಖಾಮುಖಿ; ಮಲೈಕಾನ ತಬ್ಬಿ ಆಲಂಗಿಸಿದ ಅರ್ಜುನ್ ಕಪೂರ್
ಅರ್ಜುನ್ ಅವರು ಬಾಲಿವುಡ್ ನಟಿ ಮಲೈಕಾ ಅರೋರಾ ಲವ್ ಮಾಡಿದರು. ಕೆಲ ವರ್ಷ ಇವರು ಒಟ್ಟಿಗೆ ಇದ್ದರು. ಈಗ ಬೇರೆ ಆಗಿದ್ದಾರೆ. ಯಶಸ್ಸು ಸಿಗದೇ ಇದ್ದರೂ ಅರ್ಜುನ್ ಆ್ಯಟಿಟ್ಯೂಡ್ ಮಾತ್ರ ತುಂಬಾನೇ ತೋರಿಸುತ್ತಾರೆ ಎಂಬ ಮಾತಿದೆ. ಈ ಕಾರಣಕ್ಕೆ ಅವರು ಸಾಕಷ್ಟು ಟ್ರೋಲ್ ಆಗುತ್ತಾರೆ. ಇವರು ಬೋನಿ ಕಪೂರ್ ಅವರ ಮೊದಲ ಪತ್ನಿ ಮಗ. ಅವರು ಇನ್ನೂ ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:50 am, Mon, 24 November 25



