‘ನಿಮ್ಮಲ್ಲಿ ಹೊಂದಾಣಿಕೆ ಸಾಧ್ಯವೇ ನೋಡಿ’; ಹನಿ ಸಿಂಗ್​-ಶಾಲಿನಿ ದಂಪತಿಗೆ ಜಡ್ಜ್​ ಸಲಹೆ

| Updated By: ರಾಜೇಶ್ ದುಗ್ಗುಮನೆ

Updated on: Sep 04, 2021 | 6:31 PM

ಹನಿ ಸಿಂಗ್​ ಮತ್ತು ಶಾಲಿನಿ ಸೆಪ್ಟೆಂಬರ್​ 3ರಂದು ಕೋರ್ಟ್​ಗೆ ತೆರಳಿದ್ದರು. ಈ ವೇಳೆ ಶಾಲಿನಿಗೆ ಕೋರ್ಟ್​ ಕಡೆಯಿಂದ ಒಂದು ರಿಲೀಫ್​ ಸಿಕ್ಕಿದೆ. ಗಂಡನ ಮನೆಗೆ ತೆರಳಿ ತಮಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬರಬಹುದು ಎಂದು ಕೋರ್ಟ್​ ಹೇಳಿದೆ.

‘ನಿಮ್ಮಲ್ಲಿ ಹೊಂದಾಣಿಕೆ ಸಾಧ್ಯವೇ ನೋಡಿ’; ಹನಿ ಸಿಂಗ್​-ಶಾಲಿನಿ ದಂಪತಿಗೆ ಜಡ್ಜ್​ ಸಲಹೆ
ಹನಿ ಸಿಂಗ್​-ಶಾಲಿನಿ
Follow us on

ಗಾಯಕ ಹನಿ ಸಿಂಗ್​ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್​ ಕೌಟುಂಬಿಕ ಕಲಹ ಕೋರ್ಟ್​ ಮೆಟ್ಟಿಲೇರಿದೆ. ಪತಿ ವಿರುದ್ಧ ಶಾಲಿನಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲು ಮಾಡಿದ್ದಾರೆ. ಸದ್ಯ, ಇದರ ವಿಚಾರಣೆ ಕೋರ್ಟ್​ನಲ್ಲಿ ನಡೆಯುತ್ತಿದೆ. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್​, ‘ಹೊಂದಾಣಿ ಮಾಡಿಕೊಳ್ಳಲು ಸಾಧ್ಯವೇ ಎಂಬುದನ್ನು ನೋಡಿ’ ಎಂದು ದಂಪತಿಗೆ ಸೂಚಿಸಿದೆ.

ಹನಿ ಸಿಂಗ್​ ಮತ್ತು ಶಾಲಿನಿ ಸೆಪ್ಟೆಂಬರ್​ 3ರಂದು ಕೋರ್ಟ್​ಗೆ ತೆರಳಿದ್ದರು. ಈ ವೇಳೆ ಶಾಲಿನಿಗೆ ಕೋರ್ಟ್​ ಕಡೆಯಿಂದ ಒಂದು ರಿಲೀಫ್​ ಸಿಕ್ಕಿದೆ. ಗಂಡನ ಮನೆಗೆ ತೆರಳಿ ತಮಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬರಬಹುದು ಎಂದು ಕೋರ್ಟ್​ ಹೇಳಿದೆ. ಮುಂದಿನ ವಿಚಾರಣೆ ವೇಳೆ ಮನೆ ಮತ್ತು ಪರಿಹಾರದ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದೆ.

ಹನಿ ಸಿಂಗ್​ ಹಾಗೂ ಶಾಲಿನಿ ಅವರನ್ನು ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೇಟ್​ ಚೇಂಬರ್​ಗೆ ಕರೆಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮತ್ತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಮುಂದಿನ ವಿಚಾರ ಸೆಪ್ಟೆಂಬರ್ 28ರಂದು ನಡೆಯಲಿದೆ.

ಕೋರ್ಟ್​ ವಿಚಾರಣೆ ತಪ್ಪಿಸಿಕೊಂಡಿದ್ದ ಹನಿ ಸಿಂಗ್

ಅನಾರೋಗ್ಯದ ಕಾರಣ ನೀಡಿ ಹನಿ ಸಿಂಗ್​ ಕೋರ್ಟ್​ಗೆ ಹಾಜರಾಗಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಧೀಶೆ ತನಿಯಾ ಸಿಂಗ್​ ಅಸಮಾಧಾನ ಹೊರ ಹಾಕಿದ್ದರು. ‘ಯಾರೊಬ್ಬರೂ ಕಾನೂನಿಗಿಂತ ದೊಡ್ಡವರಲ್ಲ. ಈ ಪ್ರಕರಣವನ್ನು ಅವರು ಹಗುರವಾಗಿ ತೆಗೆದುಕೊಂಡಿದ್ದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ’ ಎಂದಿದ್ದರು ನ್ಯಾಯಾಧೀಶೆ ತನಿಯಾ. ಈಗ ಅವರು ವಿಚಾರಣೆಗೆ ಹಾಜರಾಗಿದ್ದಾರೆ.

ಮೌನ ಮುರಿದಿದ್ದ ಹನಿ ಸಿಂಗ್​: 

ಇತ್ತೀಚೆಗೆ ಹನಿ ಸಿಂಗ್​ ಈ ಪ್ರಕರಣದಲ್ಲಿ ಮೌನ ಮುರಿದಿದ್ದರು. ‘20 ವರ್ಷಗಳಿಂದ ನನ್ನ ಬಾಳ ಸಂಗಾತಿ ಆಗಿರುವ ಶಾಲಿನಿ ತಲ್ವಾರ್ ಅವರು ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಈ ನನ್ನ ಆರೋಗ್ಯದ ಬಗ್ಗೆ ಊಹಾಪೋಹ ಹಬ್ಬಿದ್ದಾಗ, ನನ್ನ ಸಾಹಿತ್ಯದ ಬಗ್ಗೆ ಕಟು ಟೀಕೆ ಕೇಳಿಬಂದಾಗ, ಮಾಧ್ಯಮಗಳಲ್ಲಿ ನೆಗೆಟಿವ್​ ಪ್ರಚಾರ ಮಾಡಿದಾಗ ನಾನು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿರಲಿಲ್ಲ. ಆದರೆ ಇಂದು ನನ್ನ ಸಹೋದರಿ, ತಂದೆ-ತಾಯಿ ಮೇಲೆ ಆರೋಪ ಕೇಳಿ ಬಂದಿರುವುದರಿಂದ ನಾನು ಮೌನವಾಗಿರುವುದು ಸೂಕ್ತವಲ್ಲ. ದೇಶದ ಕಾನೂನಿನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಸತ್ಯ ಹೊರಗೆ ಬರಲಿದೆ ಎಂಬ ಭರವಸೆ ಇದೆ. ನ್ಯಾಯಾಲಯ ತೀರ್ಪು ನೀಡುವುದಕ್ಕಿಂತ ಮುನ್ನವೇ ಜನರು ಮತ್ತು ಅಭಿಮಾನಿಗಳು ತೀರ್ಮಾನಕ್ಕೆ ಬರಬಾರದ ಅಂತ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಹನಿ ಸಿಂಗ್​ ಹೇಳಿದ್ದರು.

ಇದನ್ನೂ ಓದಿ: ಅಕ್ರಮ ಸಂಬಂಧ ಮತ್ತು ಪತ್ನಿ ಮೇಲೆ ಹಲ್ಲೆ ಆರೋಪ; ಮೊದಲ ಬಾರಿಗೆ ಮೌನ ಮುರಿದ ಯೋ ಯೋ ಹನಿ ಸಿಂಗ್​