Janhvi Kapoor: ಇಎಂಐ ಕಟ್ಟಲು ಈ ದಾರಿ ಕಂಡುಕೊಂಡ ಜಾನ್ವಿ ಕಪೂರ್​; ಬಯಲಾಯ್ತು ಫೋಟೋಶೂಟ್​ ಗುಟ್ಟು

| Updated By: ಮದನ್​ ಕುಮಾರ್​

Updated on: Nov 09, 2022 | 8:43 AM

Janhvi Kapoor Photoshoot: ಜಾನ್ವಿ ಕಪೂರ್​ ಅವರು ಪದೇಪದೇ ಫೋಟೋಶೂಟ್​ ಮಾಡಿಸುತ್ತಲೇ ಇರುತ್ತಾರೆ. ಅವರ ಗ್ಲಾಮರಸ್​ ಫೋಟೋಗಳು ಆಗಾಗ ವೈರಲ್​ ಆಗುತ್ತವೆ.

Janhvi Kapoor: ಇಎಂಐ ಕಟ್ಟಲು ಈ ದಾರಿ ಕಂಡುಕೊಂಡ ಜಾನ್ವಿ ಕಪೂರ್​; ಬಯಲಾಯ್ತು ಫೋಟೋಶೂಟ್​ ಗುಟ್ಟು
ಜಾನ್ವಿ ಕಪೂರ್
Follow us on

ನಟಿ ಜಾನ್ವಿ ಕಪೂರ್ (Janhvi Kapoor) ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುತ್ತಾರೆ. ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣುತ್ತಿಲ್ಲ. ಶ್ರೀದೇವಿ (Sridevi) ಪುತ್ರಿ ಎಂಬ ಕಾರಣಕ್ಕೆ ಅವರಿಗೆ ಅವಕಾಶ ಸುಲಭವಾಗಿ ಸಿಗುತ್ತಿವೆ. ಆದರೆ ಯಶಸ್ಸು ಮರೀಚಿಕೆ ಆಗಿದೆ. ಜಾನ್ವಿ ಕಪೂರ್​ ನಟನೆಯ ‘ಮಿಲಿ’ (Mili) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಅವರ ಅಭಿನಯಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಈ ಚಿತ್ರದ ಕಲೆಕ್ಷನ್​ ಮಾತ್ರ ನಿರಾಸೆ ಮೂಡಿಸಿದೆ. ಇಷ್ಟಾದರೂ ಕೂಡ ಜಾನ್ವಿ ಕಪೂರ್​ ಅವರ ವೈಯಕ್ತಿಯ ಆದಾಯಕ್ಕೆ ತೊಂದರೆ ಆಗಿಲ್ಲ. ಅವರು ಇಎಂಐ ಕಟ್ಟಲು ಬೇರೊಂದು ದಾರಿ ಕಂಡುಕೊಂಡಿದ್ದಾರೆ. ಅದೇನು ಎಂಬ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಜಾನ್ವಿ ಕಪೂರ್​ ಅವರು ಪದೇಪದೇ ಫೋಟೋಶೂಟ್​ ಮಾಡಿಸುತ್ತಲೇ ಇರುತ್ತಾರೆ. ಅವರ ಗ್ಲಾಮರಸ್​ ಫೋಟೋಗಳು ಆಗಾಗ ವೈರಲ್​ ಆಗುತ್ತವೆ. ಅವರಿಗೆ ಫೋಟೋಗಳ ಬಗ್ಗೆ ಇಷ್ಟೊಂದು ಕ್ರೇಜ್​ ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ. ಅದಕ್ಕೆ ಉತ್ತರ ಸಿಕ್ಕಿದೆ. ಹಣ ಗಳಿಸುವ ಉದ್ದೇಶದಿಂದಲೇ ಜಾನ್ವಿ ಕಪೂರ್​ ಅವರು ಈ ಪರಿ ಪೋಟೋಶೂಟ್​ ಮಾಡಿಸುತ್ತಾರೆ.

ಇದನ್ನೂ ಓದಿ
44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​; ಖರೀದಿಸಿದ ಹೀರೋ ಯಾರು?
ಡಿಗ್ಲಾಮ್ ಲುಕ್​ನಲ್ಲಿ ನಟಿ ಜಾನ್ವಿ ಕಪೂರ್​; ಆದರೆ, ಈ ನಟಿ ನೀವಂದುಕೊಂಡ ಹಾಗಲ್ಲ
Janhvi Kapoor: ಜಾನ್ವಿ ಕಪೂರ್​ ಫೋಟೋ ವೈರಲ್​; ಶ್ರೀದೇವಿ ಪುತ್ರಿಯ ಅಂದ-ಚಂದ ಕಂಡು ವಾವ್​ ಎಂದ ಅಭಿಮಾನಿಗಳು
Janhvi Kapoor: ಪ್ರಕೃತಿಯ ಮಡಿಲಿನಲ್ಲಿ ಜಾನ್ವಿ ಕಪೂರ್ ವಿಹಾರ; ಫೋಟೋಗಳಿಗೆ ಮಸ್ತ್​ ಪೋಸ್​​

ಆಗಾಗ ಫೋಟೋ ಹಂಚಿಕೊಳ್ಳುವುದರಿಂದ ಹೆಚ್ಚಿನ ಜನರನ್ನು ಸೆಳೆಯಬಹುದು. ಒಂದಷ್ಟು ಲೈಕ್ಸ್​ ಜಾಸ್ತಿ ಆಗುತ್ತದೆ. ಇದರಿಂದ ಜನಪ್ರಿಯತೆ ಹೆಚ್ಚುತ್ತದೆ. ಆ ಜನಪ್ರಿಯತೆ ಮತ್ತು ಲೈಕ್ಸ್​ ಆಧಾರದಲ್ಲಿಯೇ ಕೆಲವು ಬ್ರ್ಯಾಂಡ್​ಗಳಿಂದ ಜಾಹೀರಾತಿಗೆ ಆಫರ್​ ಬರುತ್ತದೆ. ಬ್ರ್ಯಾಂಡ್​ಗಳ ಜೊತೆ ಕೈ ಜೋಡಿಸಿದ್ದಕ್ಕಾಗಿ ಜಾನ್ವಿ ಕಪೂರ್​ ಅವರಿಗೆ ಸಂಭಾವನೆ ಸಿಗುತ್ತದೆ. ಇದರಿಂದ ಬಂದ ಹಣದಿಂದಲೇ ತಾವು ಇಎಂಐ ಕಟ್ಟುವುದು ಎಂದು ಜಾನ್ವಿ ಕಪೂರ್​ ಹೇಳಿದ್ದಾರೆ.

‘ಮಿಲಿ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 10 ಕೋಟಿ ರೂಪಾಯಿ ಗಳಿಸಲೂ ಸಾಧ್ಯವಾಗದೇ ಒದ್ದಾಡುತ್ತಿದೆ. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಜಾನ್ವಿ ಕಪೂರ್​ ತಂದೆ ಬೋನಿ ಕಪೂರ್​. ಅವರಿಗೆ ಈ ಸಿನಿಮಾದಿಂದ ನಷ್ಟ ಆಗುವ ಸಾಧ್ಯತೆಯೇ ಹೆಚ್ಚಿದೆ. ಈ ವರ್ಷ ಒಟಿಟಿಯಲ್ಲಿ ರಿಲೀಸ್​ ಆದ ‘ಗುಡ್​ ಲಕ್​ ಜೆರಿ’ ಸಿನಿಮಾ ಕೂಡ ಜಾನ್ವಿ ಕಪೂರ್​ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡಲಿಲ್ಲ.

ಈಗ ಜಾನ್ವಿ ಕಪೂರ್​ ಕೈಯಲ್ಲಿ ಕೆಲವು ಸಿನಿಮಾಗಳಿವೆ. ‘ಬವಾಲ್​’, ‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಮುಂತಾದ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಪ್ರಸ್ತುತ ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 2 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:43 am, Wed, 9 November 22