ದಳಪತಿ ವಿಜಯ್​ ಹೆಸರಲ್ಲಿ ಪ್ರಿಯಾಮಣಿಗೆ ಮೋಸ ಮಾಡಿದ ‘ಜವಾನ್​’ ನಿರ್ದೇಶಕ ಅಟ್ಲಿ

|

Updated on: Sep 15, 2023 | 11:06 AM

ದಳಪತಿ ವಿಜಯ್​ ಅವರು ‘ಜವಾನ್​’ ಚಿತ್ರದಲ್ಲಿ ಒಂದು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಗಾಸಿಪ್​ ಹಬ್ಬಿತ್ತು. ನಿರ್ದೇಶಕ ಅಟ್ಲಿ ಸಹ ಅದನ್ನೇ ಹೇಳಿದ್ದರಿಂದ ಆ ಮಾತನ್ನು ನಂಬಿಕೊಂಡು ಪ್ರಿಯಾಮಣಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ ದಳಪತಿ ವಿಜಯ್​ ನಟಿಸುವುದು ಸುಳ್ಳು ಎಂಬುದು ನಂತರ ಬಯಲಾಯಿತು.

ದಳಪತಿ ವಿಜಯ್​ ಹೆಸರಲ್ಲಿ ಪ್ರಿಯಾಮಣಿಗೆ ಮೋಸ ಮಾಡಿದ ‘ಜವಾನ್​’ ನಿರ್ದೇಶಕ ಅಟ್ಲಿ
ಪ್ರಿಯಾಮಣಿ, ಅಟ್ಲಿ
Follow us on

ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ (Jawan Movie) ಸೂಪರ್​ ಹಿಟ್​ ಆಗಿದೆ. ವಿಶ್ವಾದ್ಯಂತ 650 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿ ಈ ಸಿನಿಮಾ ಮುನ್ನುಗ್ಗುತ್ತಿದೆ. ನಿರ್ದೇಶಕ ಅಟ್ಲಿ ಅವರು ಆ್ಯಕ್ಷನ್​-ಕಟ್​ ಹೇಳಿದ ಮೊದಲ ಬಾಲಿವುಡ್​ ಚಿತ್ರ ಇದು. ಚೊಚ್ಚಲ ಪ್ರಯತ್ನದಲ್ಲೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಈ ಚಿತ್ರದಲ್ಲಿ ಬಹುತಾರಾಗಣ ಇದೆ. ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ (Priyamani) ಕೂಡ ‘ಜವಾನ್​’ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಅವರ ಪಾತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಹಾಗಿದ್ದರೂ ಕೂಡ ಅವರಿಗೆ ಒಂದು ಅಸಮಾಧಾನ ಇದೆ. ನಿರ್ದೇಶಕ ಅಟ್ಲಿ ಅವರು ಪ್ರಿಯಾಮಣಿಗೆ ಮೋಸ ಮಾಡಿದ್ದು ಈಗ ಬಯಲಾಗಿದೆ. ಆ ಮೋಸ ನಡೆದಿದ್ದು ದಳಪತಿ ವಿಜಯ್​ (Thalapathy Vijay) ಅವರ ಹೆಸರಿನಲ್ಲಿ ಎಂಬುದು ಶಾಕಿಂಗ್​ ವಿಚಾರ.

ಶಾರುಖ್​ ಖಾನ್​ ಒಡೆತನದ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಬ್ಯಾನರ್​ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಸಂಜಯ್​ ದತ್​, ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದಾರೆ. ದಳಪತಿ ವಿಜಯ್​ ಕೂಡ ಈ ಚಿತ್ರದಲ್ಲಿ ಒಂದು ಅತಿಥಿ ಪಾತ್ರ ಮಾಡುತ್ತಾರೆ ಎಂಬ ಗಾಸಿಪ್​ ಹಬ್ಬಿತ್ತು. ಅದನ್ನೇ ನಂಬಿಕೊಂಡು ಪ್ರಿಯಾಮಣಿ ಕೂಡ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು. ಆದರೆ ದಳಪತಿ ವಿಜಯ್​ ನಟಿಸುವುದು ಸುಳ್ಳು ಎಂಬುದು ನಂತರ ಬಯಲಾಯಿತು.

ಇದನ್ನೂ ಓದಿ: ದಳಪತಿ ವಿಜಯ್​ ಮಗನಿಂದ ಸ್ಫೂರ್ತಿ ಪಡೆದು ಸಿನಿಮಾ ನಿರ್ದೇಶನ ಮಾಡಲಿರುವ ಸ್ಟಾರ್​ ನಟ ವಿಶಾಲ್

ಕೆಲವು ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಸ್ವತಃ ಅಟ್ಲಿ ಅವರೇ ಪ್ರಿಯಾಮಣಿಗೆ ದಳಪತಿ ವಿಜಯ್​ ಬಗ್ಗೆ ಹೇಳಿದ್ದರು. ವಿಜಯ್​ ಅತಿಥಿ ಪಾತ್ರ ಮಾಡುತ್ತಾರೆ ಎಂಬುದು ಗೊತ್ತಾದ ಬಳಿಕ ಅವರ ಜೊತೆ ಒಂದು ದೃಶ್ಯದಲ್ಲಾದರೂ ತೆರೆಹಂಚಿಕೊಳ್ಳಲು ಅವಕಾಶ ಕೊಡಿ ಎಂದು ಪ್ರಿಯಾಮಣಿ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಅಟ್ಲಿ ಕೂಡ ಒಪ್ಪಿದ್ದರು. ಆದರೆ ಇದೆಲ್ಲವೂ ಕೇವಲ ವದಂತಿ ಎಂಬುದು ಗೊತ್ತಾದ ಬಳಿಕ ತಾವು ಮೋಸ ಹೋಗಿರುವುದು ಪ್ರಿಯಾಮಣಿಗೆ ತಿಳಿಯಿತು. ಅದೇನೇ ಇರಲಿ, ಈ ಸಿನಿಮಾದ ಗೆಲುವಿನಿಂದ ಅವರು ಖುಷಿಯಾಗಿದ್ದಾರೆ.

ಇದನ್ನೂ ಓದಿ: ‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಜೊತೆ ಆ್ಯಕ್ಷನ್​ ಮೆರೆದ ಪ್ರಿಯಾಮಣಿ

ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶ ಸಿಕ್ಕರೆ ಯಾರೂ ಬೇಡ ಎನ್ನುವುದಿಲ್ಲ. ಪ್ರಿಯಾಮಣಿ ಅವರು ಈ ಹಿಂದೆ ‘ಚೆನ್ನೈ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ಶಾರುಖ್​ ಜೊತೆ ‘ಒನ್​ ಟು ತ್ರಿ ಫೋರ್​..’ ಹಾಡಿನಲ್ಲಿ ಹೆಜ್ಜೆ ಹಾಕಿದ್ದರು. ಈಗ ‘ಜವಾನ್​’ ಸಿನಿಮಾದಲ್ಲಿ ಪ್ರಮುಖವಾದ ಒಂದು ಪಾತ್ರ ಮಾಡಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.