ಟೈಗರ್ ಶ್ರಾಫ್ (Tiger Shroff) ಹಾಗೂ ದಿಶಾ ಪಟಾನಿ ಸುತ್ತಾಟ ಆರಂಭಿಸಿ 6 ವರ್ಷಗಳೇ ಕಳೆದಿವೆ. ಆದರೆ, ದಿಶಾ ಆಗಲಿ, ಟೈಗರ್ ಆಗಲಿ ಈ ಬಗ್ಗೆ ಪಬ್ಲಿಕ್ನಲ್ಲಿ ಮಾತನಾಡಿಲ್ಲ. ತಾವು ರಿಲೇಶನ್ಶಿಪ್ನಲ್ಲಿರುವ ವಿಚಾರವನ್ನು ಈ ಜೋಡಿ ಈವರೆಗೆ ಹೇಳಿಕೊಂಡಿಲ್ಲ. ಹೀಗಿರುವಾಗಲೇ ಇವರ ಬ್ರೇಕಪ್ ಬಗ್ಗೆ ಸುದ್ದಿ ಹರಿದಾಡಿದೆ. ಇಬ್ಬರೂ ಬೇರೆ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಚರ್ಚೆ ಆಗುತ್ತಿದೆ. ಬ್ರೇಕಪ್ ವಿಚಾರವನ್ನು ಈ ಜೋಡಿಯಂತೂ ಖಚಿತ ಮಾಡುವುದಿಲ್ಲ. ಹೀಗಾಗಿ, ಫ್ಯಾನ್ಸ್ ಗೊಂದಲದಲ್ಲಿ ಇದ್ದಾರೆ.
ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಇಬ್ಬರೂ ‘ಬಾಘಿ 2’ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಇಬ್ಬರೂ ಒಟ್ಟಾಗಿ ಕೆಲಸ ಮಾಡುವುದಕ್ಕೂ ಮೊದಲೇ ಇವರ ಮಧ್ಯೆ ಪ್ರೀತಿ ಬೆಳೆದಿತ್ತು ಎನ್ನಲಾಗಿದೆ. ತೆರೆಮೇಲೆ ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ಇಬ್ಬರೂ ಚಿತ್ರರಂಗದಲ್ಲಿ ತಮ್ಮದೇ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಿರುವಾಗಲೇ ಇವರ ಬ್ರೇಕಪ್ ವಿಚಾರ ಮುನ್ನೆಲೆಗೆ ಬಂದಿದೆ.
ಟೈಗರ್ ಶ್ರಾಫ್ ಹಾಗೂ ದಿಶಾ ಪಟಾನಿ ಇಬ್ಬರ ಸಂಬಂಧ ಮುರಿದು ಬಿದ್ದಿರುವುದು ಏಕೆ ಎಂಬ ವಿಚಾರ ಬಹಿರಂಗ ಆಗಿಲ್ಲ. ಈ ವಿಚಾರದಲ್ಲಿ ಇಬ್ಬರೂ ಮೌನ ವಹಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ದಿಶಾ ಹಾಗೂ ಟೈಗರ್ಗೆ ಈ ಬಗ್ಗೆ ಪ್ರಶ್ನೆ ಎದುರಾಗಬಹುದು. ಈ ವೇಳೆ ಉತ್ತರ ನೀಡದೇ ಜಾರಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಪ್ ವಿಚಾರದಲ್ಲಿ ದಿಶಾ ಅಥವಾ ಟೈಗರ್ ಯಾರೇ ಮಾತನಾಡಿದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತದೆ. ಸಿನಿಮಾ ವಿಚಾರಗಳ ಬದಲು ಇದೇ ವಿಚಾರ ಹೈಲೈಟ್ ಮಾಡಲಾಗುತ್ತದೆ. ಸಮಂತಾ ಹಾಗೂ ನಾಗ ಚೈತನ್ಯ ಅವರು ವಿಚ್ಛೇದನ ಪಡೆದು ಒಂದು ವರ್ಷ ಸಮೀಪಿಸುತ್ತಾ ಬಂದಿದೆ. ಆದಾಗ್ಯೂ ಈ ವಿಚಾರ ಇನ್ನೂ ಚರ್ಚೆ ಆಗುತ್ತಿದೆ. ಈ ರೀತಿ ಚರ್ಚೆ ಆಗುವುದು ಈ ಜೋಡಿಗೆ ಇಷ್ಟವಿಲ್ಲ. ಈ ಕಾರಣಕ್ಕೆ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ‘ನನ್ನ ಮತ್ತು ಟೈಗರ್ ಶ್ರಾಫ್ ಕುರಿತ ಗಾಸಿಪ್ ನಿಜ’: ವಿಡಿಯೋ ಸಮೇತ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ
ದಿಶಾ ಪಟಾನಿ ನಟನೆಯ ‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್ ಹಾಗೂ ಜಾನ್ ಅಬ್ರಹಾಂ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ ದಿಶಾ.