
‘ಟಾಕ್ಸಿಕ್’ ಸಿನಿಮಾ (Toxic Movie) ರಿಲೀಸ್ ಆಗಿ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವರು ಈ ಚಿತ್ರವನ್ನು ತೆಗಳಿದರೆ ಇನ್ನೂ ಕೆಲವರು ಸಿನಿಮಾ ಹಾಡಿ ಹೊಗಳಿದ್ದಾರೆ. ಈಗ ಈ ಸಾಲಿಗೆ ಆದಿತ್ಯ ಧಾರ್ ಕೂಡ ಸೇರ್ಪಡೆ ಆಗಿದ್ದಾರೆ. ಅವರು ‘ಟಾಕ್ಸಿಕ್’ ಚಿತ್ರವನ್ನು ವೀಕ್ಷಿಸಿದ್ದು ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಈ ಸಂದರ್ಭದ ಪೋಸ್ಟ್ ವೈರಲ್ ಆಗಿದೆ. ಎಲ್ಲರೂ ಯಶ್ ಹಾಗೂ ಆದಿತ್ಯ ಧರ್ ಅವರು ಸಿನಿಮಾ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಹಾಗೂ ‘ಧುರಂಧರ್’ ಸಿನಿಮಾಗಳ ನಿರ್ದೇಶಕ ಆದಿತ್ಯ ಧರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಟಾಕ್ಸಿಕ್’ ಸಿನಿಮಾದ ಯಶ್ ಅವರ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್ ಜೊತೆಗೆ ಯಶ್ ಎಂದು ಬರೆದು ಕೆಂಪು ಹಾರ್ಟ್ ಮತ್ತು ತಾಕತ್ತು ತೋರಿಸೋ ಎಮೋಜಿ ಹಾಕಿದ್ದಾರೆ. ಈ ಮೂಲಕ ಯಶ್ ಶಕ್ತಿಗೆ ಆದಿತ್ಯ ಧರ್ ಕಡೆಯಿಂದ ಮೆಚ್ಚುಗೆ ಸಿಕ್ಕಂತೆ ಆಗಿದೆ.
This is what you call AURA 🥵🔥
Aditya Dhar appreciating TOXIC and Yash Boss what a beautiful moment! 🫰☺️
When filmmakers recognize the vision and madness behind a film, it hits different.❤️🔥Yash Boss × TOXIC AURA speaks for itself 👑🔥#ToxicTheMovie #Yash #AdityaDhar pic.twitter.com/p4itcFm0xH
— 𓆩♛ 𝙍𝙤𝙘𝙠𝙞𝙣𝙜 𝘼𝙨𝙝𝙪 ♛𓆪 (@Dudey212530) September 1, 2026
ಆದಿತ್ಯ ಧರ್ ಅವರ ಈ ಇನ್‌ಸ್ಟಾಗ್ರಾಮ್ ಸ್ಟೋರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಯಶ್ ಅಭಿಮಾನಿಗಳ ಮನ ಗೆದ್ದಿದೆ. ಸಿನಿಮಾ ಹಿನ್ನಡೆ ಅನುಭವಿಸುತ್ತಿರುವಾಗ ಬಾಲಿವುಡ್‌ನಿಂದ ಮೊದಲ ವ್ಯಕ್ತಿಯಾಗಿ ಆದಿತ್ಯ ಧರ್ ಬೆಂಬಲಕ್ಕೆ ನಿಂತಿರುವುದನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ‘ಖ್ಯಾತ ನಿರ್ದೇಶಕರು ಸಿನಿಮಾದ ಹಿಂದಿನ ದೂರದೃಷ್ಟಿ ಮತ್ತು ಶ್ರಮವನ್ನು ಗುರುತಿಸಿದಾಗ ಅದುವೇ ನಿಜವಾದ ಔರಾ’ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ ಗೌತಮ್
ಇನ್ನು ಕೆಲ ಅಭಿಮಾನಿಗಳು ಈ ಪೋಸ್ಟ್ ನೋಡಿದ ನಂತರ ಯಶ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾವೇನಾದರೂ ಬರಲಿದೆಯೇ ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ಅನೇಕರು ಕೋರಿದ್ದಾರೆ. ಸದ್ಯ ‘ಟಾಕ್ಸಿಕ್’ ಚಿತ್ರವು ಟೀಕೆಗಳ ನಡುವೆಯೂ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಇಲ್ಲಿಯವರೆಗೆ ಒಟ್ಟು 300 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.