ಬಾಲಿವುಡ್​​ ನಟನಿಗೆ ಬೆದರಿಕೆ ಕರೆ, ಐದು ಕೋಟಿ ಹಣಕ್ಕೆ ಬೇಡಿಕೆ

ಮುಂಬೈ ಅಪರಾಧ ವಿಭಾಗ ನಡೆಸಿದ ಪ್ರಾಥಮಿಕ ತನಿಖೆಯು ಈ ಬೆದರಿಕೆ ಕರೆಯಲ್ಲಿ ಬಿಷ್ಣೋಯ್ ಗ್ಯಾಂಗ್‌ನ ನೇರ ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಈ ಬೆದರಿಕೆ ಕುರಿತು ತುಷಾರ್ ಕಪೂರ್ ಅವರು ಮುಂಬೈ ಪೊಲೀಸರಿಗೆ ಅನಧಿಕೃತವಾಗಿ ಮಾಹಿತಿ ನೀಡಿದ್ದು, ಇದರ ಬೆನ್ನಲ್ಲೇ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗ ಹಾಗೂ ಅದರ ಸುಲಿಗೆ ವಿರೋಧಿ ವಿಭಾಗಕ್ಕೆ ವಹಿಸಲಾಗಿದೆ.

ಬಾಲಿವುಡ್​​ ನಟನಿಗೆ ಬೆದರಿಕೆ ಕರೆ, ಐದು ಕೋಟಿ ಹಣಕ್ಕೆ ಬೇಡಿಕೆ
Tussar Kapoor

Updated on: Nov 03, 2026 | 3:04 PM

ಬಾಲಿವುಡ್​​ ಮೇಲೆ ಮಾಫಿಯಾ ಕಣ್ಣು ಬಿದ್ದಿದೆ. 80-90ರ ದಶದಲ್ಲಿ ಬಾಲಿವುಡ್​​ ಮೇಲೆ ದೊಡ್ಡ ಮಟ್ಟದಲ್ಲಿ ಮಾಫಿಯಾ ಕರಿನೆರಳು ಬಿದ್ದಿತ್ತು. ಅದಾದ ಬಳಿಕ ಬಾಲಿವುಡ್​​ ಬಹುತೇಕ ನೆಮ್ಮದಿಯಿಂದ ಇತ್ತು. ಆದರೆ ಇತ್ತೀಚೆಗೆ ಮತ್ತೆ ಈ ಮಾಫಿಯಾ ಗ್ಯಾಂಗಿನವರು ಬಾಲಿವುಡ್​​ ಮೇಲೆ ಕಣ್ಣು ಹಾಕಿದ್ದಾರೆ. ವಿಶೇಷವಾಗಿ ಬಿಷ್ಣೋಯಿ ಗ್ಯಾಂಗ್, ಗೋಲ್ಡಿ ಬ್ರಾರ್ ಗ್ಯಾಂಗ್​​ ಇನ್ನೂ ಕೆಲವರು ವಿದೇಶದಲ್ಲಿ ಇದ್ದುಕೊಂಡು ಬಾಲಿವುಡ್​ ನಟರಿಗೆ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಕೆಲವರ ಮೇಲೆ ದಾಳಿಗಳು ಸಹ ನಡೆದಿವೆ. ಇದೀಗ ಮತ್ತೊಬ್ಬ ಬಾಲಿವುಡ್​ ನಟನಿಗೆ ಗ್ಯಾಂಗ್​ನಿಂದ ಬೆದರಿಕೆ ಬಂದಿದ್ದು ಐದು ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ.

ಬಾಲಿವುಡ್ ನಟ, ನಿರ್ಮಾಪಕ ತುಷಾರ್ ಕಪೂರ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬರಿಂದ 5 ಕೋಟಿ ರೂ.ಗಳ ಸುಲಿಗೆ ಬೆದರಿಕೆ ಕರೆ ಬಂದಿದೆ. ಹ್ಯಾರಿ ಬಕ್ಸರ್ ಎಂಬ ಹೆಸರಿನಲ್ಲಿ ಈ ಕರೆ ಮಾಡಲಾಗಿದ್ದು, ಹಣ ಕೊಡುವಂತೆ ಬೆದರಿಕೆ ಹಾಕಲಾಗಿದ್ದು, ಹಣ ಕೊಡದಿದ್ದಲ್ಲಿ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ನಟ ತುಷಾರ್ ಕಪೂರ್ ಈ ಬಗ್ಗೆ ಮುಂಬೈ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.

ಮುಂಬೈ ಅಪರಾಧ ವಿಭಾಗ ನಡೆಸಿದ ಪ್ರಾಥಮಿಕ ತನಿಖೆಯು ಈ ಬೆದರಿಕೆ ಕರೆಯಲ್ಲಿ ಬಿಷ್ಣೋಯ್ ಗ್ಯಾಂಗ್‌ನ ನೇರ ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಈ ಬೆದರಿಕೆ ಕುರಿತು ತುಷಾರ್ ಕಪೂರ್ ಅವರು ಮುಂಬೈ ಪೊಲೀಸರಿಗೆ ಅನಧಿಕೃತವಾಗಿ ಮಾಹಿತಿ ನೀಡಿದ್ದು, ಇದರ ಬೆನ್ನಲ್ಲೇ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗ ಹಾಗೂ ಅದರ ಸುಲಿಗೆ ವಿರೋಧಿ ವಿಭಾಗಕ್ಕೆ ವಹಿಸಲಾಗಿದೆ.

ಇದನ್ನೂ ಓದಿ:ಬಾಲಿವುಡ್​​ಗೆ ಹಾರಲಿರುವ ಮಂಗಳೂರು ಮೂಲದ ನಟಿ ಕೃತಿ ಶೆಟ್ಟಿ

ಪೊಲೀಸ್ ಮೂಲಗಳ ಪ್ರಕಾರ, ಅಪರಾಧ ವಿಭಾಗದ ತಾಂತ್ರಿಕ ತಂಡವು ಬೆದರಿಕೆ ಕರೆಯ ಆಡಿಯೋ ರೆಕಾರ್ಡಿಂಗ್ ಅನ್ನು ಪರಿಶೀಲಿಸಿದ್ದು, ಕಳುಹಿಸಿದವರ ಧ್ವನಿಯನ್ನು ತಮ್ಮ ಡೇಟಾಬೇಸ್‌ನಲ್ಲಿರುವ ಹ್ಯಾರಿ ಬಕ್ಸರ್‌ನ ಅಧಿಕೃತ ಆಡಿಯೋ ಮಾದರಿಗಳೊಂದಿಗೆ ಹೋಲಿಸಿ ನೋಡಿದೆ. ಈ ವಿಶ್ಲೇಷಣೆಯಲ್ಲಿ ಎರಡೂ ರೆಕಾರ್ಡಿಂಗ್‌ಗಳು ತಾಳೆಯಾಗುತ್ತಿಲ್ಲ ಎಂಬುದು ತಿಳಿದುಬಂದಿದೆ. ನಟನನ್ನು ಬೆದರಿಸಿ ಹಣ ವಸೂಲಿ ಮಾಡಲು ಅಪರಿಚಿತ ವ್ಯಕ್ತಿಯೊಬ್ಬ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಂತೆ ನಟಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಧ್ವನಿ ರೆಕಾರ್ಡಿಂಗ್‌ನ ಮೂಲವನ್ನು ಪತ್ತೆಹಚ್ಚಲು ಮತ್ತು ಕರೆ ಮಾಡಿದವರನ್ನು ಗುರುತಿಸಲು ಪೊಲೀಸರು ತನಿಖೆಯನ್ನು ಮುಂದುವರಿಸಿರುವ ಕಾರಣ, ಇಲ್ಲಿಯವರೆಗೆ ಯಾವುದೇ ಪ್ರಥಮ ವರ್ತಮಾನ ವರದಿ ದಾಖಲಾಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us