ಇನ್ನಷ್ಟು ಕೆಟ್ಟು ಹೋಗಿದೆ ಉರ್ಫಿ ಜಾವೇದ್ ಮುಖದ ಅಂದ; ವಿಡಿಯೋ ವೈರಲ್

ರಿಯಾಲಿಟಿ ಶೋ ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಆದ ಉರ್ಫಿ ಅವರಿಗೆ ಈ ಗತಿ ಬಂದಿದೆ. ಅವರ ಮುಖದ ಆಕಾರ ಬದಲಾಗಿದೆ. ವಿಡಿಯೋ ವೈರಲ್ ಆಗಿದ್ದು, ಜನರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಉರ್ಫಿ ಜಾವೇದ್ ಪರಿಸ್ಥಿತಿ ಬಗ್ಗೆ ಇಲ್ಲಿದೆ ಮಾಹಿತಿ..

ಇನ್ನಷ್ಟು ಕೆಟ್ಟು ಹೋಗಿದೆ ಉರ್ಫಿ ಜಾವೇದ್ ಮುಖದ ಅಂದ; ವಿಡಿಯೋ ವೈರಲ್
Urfi Javed

Updated on: Jul 22, 2025 | 7:24 PM

ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಾರೆ ಉರ್ಫಿ ಜಾವೇದ್. ಫ್ಯಾಷನ್ ಲೋಕದಲ್ಲಿ ಚಿತ್ರ-ವಿಚಿತ್ರ ಪ್ರಯೋಗಳನ್ನು ಮಾಡುವಲ್ಲಿ ಅವರು ಫೇಮಸ್. ಯಾವಾಗಲೂ ಅವರ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಅವರು ಸುಂದರವಾಗಿ ಕಾಣುತ್ತಾರೆ. ಆದರೆ ಈಗ ಅವರ ಮುಖ ವಿಕಾರವಾಗಿದೆ! ಹಾಗಂತ ಉರ್ಫಿ ಜಾವೇದ್ (Urfi Javed) ಅವರು ಅಳುತ್ತಾ ಮನೆಯಲ್ಲಿ ಕುಳಿತಿಲ್ಲ. ತಮ್ಮದೇ ವಿಡಿಯೋಗಳನ್ನು (Urfi Javed Viral Video) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಉರ್ಫಿ ಜಾವೇದ್ ಅವರನ್ನು ಫಾಲೋ ಮಾಡುವ ಎಲ್ಲರಿಗೂ ಈಗಾಗಲೇ ವಿಷಯ ಏನೆಂಬುದು ತಿಳಿದಿದೆ. ಚೆನ್ನಾಗಿ ಕಾಣಬೇಕು ಎಂಬ ಆಸೆಯಿಂದ ಉರ್ಫಿ ಜಾವೇದ್ ಅವರು ತುಟಿಗಳಿಗೆ ಫಿಲ್ಲರ್ ಮಾಡಿಸಿಕೊಂಡಿದ್ದರು. ಆದರೆ ಫಿಲ್ಲರ್ ಮಾಡುವ ಪ್ರಕ್ರಿಯೆ ತಪ್ಪಾದ ಕಾರಣ ಅದನ್ನು ತೆಗೆಸುವುದು ಅನಿವಾರ್ಯ ಆಯಿತು. ಫಿಲ್ಲರ್ ತೆಗೆಸಿದ್ದರಿಂದ ಅವರ ತುಟಿಗಳು ಊದಿಕೊಂಡಿವೆ.

ಇದನ್ನೂ ಓದಿ
ಅರ್ಧ ಬಟ್ಟೆ ಹಾಕುವ ಖುಷಿ ಮುಖರ್ಜಿಯ ಉಡುಗೆ ಬಗ್ಗೆ ಟೀಕೆ ಮಾಡಿದ ಉರ್ಫಿ ಜಾವೇದ
ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಉರ್ಫಿ ಜಾವೇದ್? ಲೀಕ್ ಆಯ್ತು ಫೋಟೋ
ನಡೆಯಲೂ ಆಗದಷ್ಟು ಕುಡಿದ ಉರ್ಫಿ ಜಾವೇದ್; ವೈರಲ್ ವಿಡಿಯೋದ ಅಸಲಿಯತ್ತು ಏನು?
Urfi Javed: ಮಾದಕವಾಗಿ ಸೀರೆ ಧರಿಸಿ ಉಯ್ಯಾಲೆಯಿಂದ ಬಿದ್ದ ಉರ್ಫಿ ಜಾವೇದ್​; ಕಾಪಾಡಲು ಬಂದಿದ್ದು 9 ಪುರುಷರು

ಆರಂಭದಲ್ಲಿ ತುಟಿಗಳು ಮಾತ್ರ ಊದಿಕೊಂಡಿದ್ದವು. ಅದರ ವಿಡಿಯೋವನ್ನು ಉರ್ಫಿ ಜಾವೇದ್ ಅವರು ಹಂಚಿಕೊಂಡಿದ್ದರು. ಆದರೆ ನಂತರ ಅವರ ಸಂಪೂರ್ಣ ಮುಖ ದಪ್ಪ ಆಗಿದೆ. ಇದು ಉರ್ಫಿ ಜಾವೇದ್ ಹೌದೋ ಅಲ್ಲವೋ ಎಂದು ಅನುಮಾನ ಮೂಡುವಷ್ಟು ದಪ್ಪ ಆಗಿದೆ. ವೈರಲ್ ಆಗಿರುವ ಈ ವಿಡಿಯೋಗೆ ಜನರು ಕಮೆಂಟ್ ಮಾಡುತ್ತಿದ್ದಾರೆ.

ಉರ್ಫಿ ಜಾವೇದ್ ವೈರಲ್ ವಿಡಿಯೋ:

ತುಟಿ ಮತ್ತು ಬಹುಪಾಲು ಮುಖ ಊದಿಕೊಂಡಿದ್ದರಿಂದ ಉರ್ಫಿ ಜಾವೇದ್ ಅವರಿಗೆ ಮಾತನಾಡಲು ಕೂಡ ಕಷ್ಟ ಆಗುತ್ತಿದೆ. ಆದರೆ ಅವರು ಹೆಚ್ಚು ಚಿಂತೆ ಮಾಡುತ್ತಿಲ್ಲ. ತಮಗೆ ಬಂದಿರುವ ಈ ಪರಿಸ್ಥಿತಿಯಲ್ಲಿ ಕೂಡ ಅವರು ತಮಾಷೆ ಮಾಡುತ್ತಿದ್ದಾರೆ. ಬೇರೆಯವರಾಗಿದ್ದರೆ ಇಂಥ ವಿಡಿಯೋವನ್ನು ಪೋಸ್ಟ್ ಮಾಡುತ್ತಿರಲಿಲ್ಲ. ಆದಷ್ಟು ಬೇಗ ತಾನು ಮೊದಲಿನಂತೆ ಆಗುತ್ತೇನೆ ಎಂಬ ಭರವಸೆ ಅವರಿಗೆ ಇದೆ.

ಇದನ್ನೂ ಓದಿ: ನಡೆಯಲೂ ಸಾಧ್ಯವಾಗದಷ್ಟು ಕುಡಿದ ಉರ್ಫಿ ಜಾವೇದ್​; ವೈರಲ್​ ವಿಡಿಯೋದ ಅಸಲಿಯತ್ತು ಏನು?

ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಅವರು ತುಂಬ ಫೇಮಸ್ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 53 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ತುಟಿ ಊದಿಕೊಂಡಿರುವ ವಿಡಿಯೋ 18 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಇನ್ನೊಂದು ವಿಡಿಯೋ ಕೇವಲ ಎರಡು ಗಂಟೆಯಲ್ಲಿ 44 ಲಕ್ಷ ವೀವ್ಸ್ ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:10 pm, Tue, 22 July 25