ಪತ್ನಿ ಕತ್ರಿನಾ ಕೈಫ್ ವಿಚಿತ್ರ ಪ್ರಾಣಿ ಎಂದ ವಿಕ್ಕಿ ಕೌಶಲ್; ವಿಡಿಯೋ ವೈರಲ್ ಮಾಡಿದ ನಟಿ

ವ್ಯಾಲೆಂಟೈನ್ಸ್ ಡೇ ಸಮೀಪಿಸಿದೆ. ಪ್ರೀತಿಸುತ್ತಿರುವವರು, ಪ್ರೀತಿಸಿ ಮದುವೆ ಆದವರೆಲ್ಲ ಈ ದಿನವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಸೆಲೆಬ್ರಿಟಿಗಳು ಕೂಡ ಪ್ರೀತಿಯ ಮೂಡ್​ನಲ್ಲಿ ಇದ್ದಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್. ಪರಸ್ಪರ ಪ್ರೀತಿಸಿ ಮದುವೆ ಆದ ಈ ಜೋಡಿಗೆ ವ್ಯಾಲೆಂಟೈನ್ಸ್ ಡೇ ಎಂದು ತುಂಬ ಸ್ಪೆಷಲ್.

ಪತ್ನಿ ಕತ್ರಿನಾ ಕೈಫ್ ವಿಚಿತ್ರ ಪ್ರಾಣಿ ಎಂದ ವಿಕ್ಕಿ ಕೌಶಲ್; ವಿಡಿಯೋ ವೈರಲ್ ಮಾಡಿದ ನಟಿ
Vicky Kaushal

Updated on: Feb 12, 2025 | 10:02 PM

ನಟಿ ಕತ್ರಿನಾ ಕೈಫ್ ಅವರು ವಿಕ್ಕಿ ಕೌಶಲ್ ಜೊತೆ ಮದುವೆ ಆಗುತ್ತಾರೆ ಎಂದು ಆರಂಭದಲ್ಲಿ ಯಾರೂ ಊಹಿಸಿರಲಿಲ್ಲ. ಆದರೆ ಈ ಜೋಡಿಯ ನಡುವೆ ಪ್ರೀತಿ ಚಿಗುರಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. 2021ರ ಡಿಸೆಂಬರ್​ 9ರಂದು ಅವರಿಬ್ಬರ ಮದುವೆ ನೆರವೇರಿತು. ಮದುವೆ ಬಳಿಕ ಕತ್ರಿನಾ ಕೈಫ್ ಅವರು ಸಿನಿಮಾರಂಗದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪೋಸ್ಟ್ ಮಾಡುತ್ತಾರೆ. ಈಗ ಅವರು ಹಂಚಿಕೊಂಡ ಒಂದು ವಿಡಿಯೋ ವೈರಲ್ ಆಗಿದೆ.

ವಿಕ್ಕಿ ಕೌಶಲ್ ಅವರು ಕತ್ರಿನಾ ಕೈಫ್ ಅವರನ್ನು ಈ ರೀತಿಯಲ್ಲಿ ವರ್ಣಿಸಿದ್ದಾರೆ. ‘ವಿಚಿತ್ರ, ಆದರೆ ನಿಜಕ್ಕೂ ಪ್ರಾಣಿ ನೀವು’ ಎಂದು ವಿಕ್ಕಿ ಕೌಶಲ್ ಹೇಳಿದ್ದಾರೆ. ‘ನನ್ನ ಪ್ರೀತಿಯ ಗಂಡ ನನ್ನನ್ನು ವರ್ಣಿಸಿದ್ದು ಹೀಗೆ’ ಎಂಬ ಕ್ಯಾಪ್ಷನ್​ನೊಂದಿಗೆ ಕತ್ರಿನಾ ಕೈಫ್ ಅವರು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ನಕ್ಕಿದ್ದಾರೆ.

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ನಡುವೆ ವಯಸ್ಸಿನ ಅಂತರ ಇದೆ. ಕತ್ರಿನಾ ಅವರು ವಿಕ್ಕಿ ಕೌಶಲ್​ಗಿಂತ 5 ವರ್ಷ ದೊಡ್ಡವರು. ಅಲ್ಲದೇ ಚಿತ್ರರಂಗದಲ್ಲಿ ಕೂಡ ಕತ್ರಿನಾ ಕೈಫ್ ಸೀನಿಯರ್. ಶ್ರೀಮಂತಿಕೆ ವಿಚಾರದಲ್ಲೂ ಅವರದ್ದೇ ಮೇಲುಗೈ. ಹಾಗಿದ್ದರೂ ಕೂಡ ಅವರಿಬ್ಬರ ನಡುವೆ ಪ್ರೀತಿ ಚಿಗುರಿ, ಆ ಪ್ರೀತಿ ಮದುವೆಯ ಹಂತಕ್ಕೆ ಬಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಇದನ್ನೂ ಓದಿ: ಕೈಯಲ್ಲಿಲ್ಲ ಒಂದೂ ಸಿನಿಮಾ, ಚಿತ್ರರಂಗ ತೊರೆದರೆ ಕತ್ರಿನಾ ಕೈಫ್?

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್ ಹಲವು ಸಮಯದಿಂದ ಹರಿದಾಡುತ್ತಿತ್ತು. ಆದರೆ ಆ ವಿಷಯದ ಬಗ್ಗೆ ಅವರಿಬ್ಬರು ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಮದುವೆ ಆಗುವ ತನಕ ತಮ್ಮ ರಿಲೇಷನ್​ಶಿಪ್ ವಿಚಾರವನ್ನು ಅವರು ರಹಸ್ಯವಾಗಿ ಇಟ್ಟಿದ್ದರು. ಕೆಲವೇ ಕೆಲವು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಅವರ ಮದುವೆ ನೆರವೇರಿತು. ಸದ್ಯ ವಿಕ್ಕಿ ಕೌಶಲ್ ಅವರು ‘ಛಾವ’ ಸಿನಿಮಾದಲ್ಲಿ ನಟಿಸಿದ್ದಾರೆ. ‘ವ್ಯಾಲೆಂಟೈನ್ಸ್ ಡೇ’ ದಿನವೇ ಈ ಸಿನಿಮಾ ಬಿಡುಗಡೆ ಆಗಲಿದೆ. ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.