ಆನ್​ಲೈನ್​ನಲ್ಲಿ ಲೀಕ್ ಆಯ್ತು ‘ಛಾವ’ ಸಿನಿಮಾ; ನೂರಾರು ಕೋಟಿ ಬಿಸ್ನೆಸ್​ಗೆ ತೊಂದರೆ

|

Updated on: Mar 21, 2025 | 10:41 AM

ಒಟಿಟಿಯಲ್ಲಿ ‘ಛಾವ’ ಸಿನಿಮಾವನ್ನು ನೋಡಬೇಕು ಎಂದು ಪ್ರೇಕ್ಷಕರು ಕಾಯುತ್ತಿದ್ದರು. ಅಷ್ಟರಲ್ಲಾಗಲೇ ಈ ಸಿನಿಮಾಗೆ ಪೈರಸಿ ಕಾಟ ಶುರು ಆಗಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಸಿನಿಮಾದ ಪೈರಸಿ ಕಾಪಿ ಸಾವಿರಾರು ಲಿಂಕ್​ಗಳ ಮೂಲಕ ಹರಿದಾಡುತ್ತಿದೆ.

ಆನ್​ಲೈನ್​ನಲ್ಲಿ ಲೀಕ್ ಆಯ್ತು ‘ಛಾವ’ ಸಿನಿಮಾ; ನೂರಾರು ಕೋಟಿ ಬಿಸ್ನೆಸ್​ಗೆ ತೊಂದರೆ
Vicky Kaushal
Follow us on

ವಿಕ್ಕಿ ಕೌಶಲ್ (Vicky Kaushal) ನಟನೆಯ ‘ಛಾವ’ ಸಿನಿಮಾದ ಸಾಧನೆ ಸಣ್ಣದಲ್ಲ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 562 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಿದೇಶದ ಕಲೆಕ್ಷನ್ ಕೂಡ ಸೇರಿಸಿದರೆ ಒಟ್ಟು ಮೊತ್ತು ದೊಡ್ಡದಾಗಲಿದೆ. ಐತಿಹಾಸಿಕ ಕಥೆ ಇರುವ ಈ ಸಿನಿಮಾದಿಂದ ವಿಕ್ಕಿ ಕೌಶಲ್ ಅವರು ದೊಡ್ಡ ಹೆಸರು ಮಾಡಿದ್ದಾರೆ. ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗ ಚಿತ್ರತಂಡಕ್ಕೆ ಪೈರಸಿ (Piracy) ಕಾಟ ಎದುರಾಗಿದೆ. ಹೌದು, ‘ಛಾವ’ ಸಿನಿಮಾ (Chhaava Movie) ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಇದರಿಂದ ನೂರಾರು ಕೋಟಿ ರೂಪಾಯಿ ವ್ಯವಹಾರಕ್ಕೆ ತೊಂದರೆ ಆಗುತ್ತಿದೆ.

‘ಛಾವ’ ಸಿನಿಮಾ ಚಿತ್ರಮಂದಿರದಲ್ಲಿ ಎಷ್ಟು ಬಾಚಿಕೊಳ್ಳಬೇಕೋ ಅಷ್ಟು ಹಣವನ್ನು ಈಗಾಗಲೇ ಬಾಚಿಕೊಂಡಿದೆ. ಇನ್ನೇನಿದ್ದರೂ ಒಟಿಟಿಯಲ್ಲಿ ಈ ಸಿನಿಮಾ ಅಬ್ಬರಿಸಬೇಕು. ಮೂಲಗಳ ಪ್ರಕಾರ, ಏಪ್ರಿಲ್​ 11ರಂದು ನೆಟ್​ಪ್ಲಿಕ್ಸ್​ ಮೂಲಕ ಈ ಸಿನಿಮಾ ಒಟಿಟಿಗೆ ಕಾಲಿಡಲಿದೆ. ಆದರೆ ಅದಕ್ಕೂ ಮುನ್ನ ಆನ್​ಲೈನ್​​ನಲ್ಲಿ ಸಿನಿಮಾ ಲೀಕ್ ಆಗಿದ್ದರಿಂದ ಒಟಿಟಿ ಬಿಸ್ನೆಸ್ ಮೇಲೆ ಖಂಡಿತಾ ಪೆಟ್ಟು ಬೀಳಲಿದೆ.

ಇದು ಸೂಪರ್​ ಹಿಟ್ ಸಿನಿಮಾ ಆದ್ದರಿಂದ ದೊಡ್ಡ ಮೊತ್ತಕ್ಕೆ ಒಟಿಟಿ ಡೀಲ್ ನಡೆದಿರುತ್ತದೆ. ಆ ಮೊತ್ತ ರಿಕವರಿ ಆಗಬೇಕು ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ವೀವ್ಸ್ ಬರಬೇಕು. ಆದರೆ ಒಟಿಟಿಗೆ ಬರುವುದಕ್ಕೂ ಮುನ್ನವೇ ಆನ್​ಲೈನ್​ನಲ್ಲಿ ಲೀಕ್ ಆಗಿರುವುದರಿಂದ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸುವವರ ಸಂಖ್ಯೆ ಕಡಿಮೆ ಆಗಬಹುದು. ಪೈರಸಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ
‘ಛಾವ’ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಬೆಂಕಿ; ಕಾರಣ ತಿಳಿಸಿದ ಪೊಲೀಸರು
‘ಛಾವ’ ಎಫೆಕ್ಟ್: ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನದ ವಿಷಯ ಸೇರಿಸಲು ಒತ್ತಾಯ
ಛಾವ ಸಿನಿಮಾ ದೃಶ್ಯ ಹಾಗೂ ಕುಂಭಮೇಳ ಕಾಲ್ತುಳಿತದ ಬಗ್ಗೆ ಸ್ವರಾ ಭಾಸ್ಕರ್ ಟೀಕೆ
‘ಛಾವ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಪರದೆ ಹರಿದು ಹಾಕಿದ ಕುಡುಕ

‘ಛಾವ’ ಚಿತ್ರವನ್ನು ‘ಮೆಡಾಕ್ ಫಿಲ್ಮ್ಸ್​’ ಸಂಸ್ಥೆ ನಿರ್ಮಾಣ ಮಾಡಿದೆ. ಪೈರಸಿ ತಡೆಯಲು ‘ಆಗಸ್ಟ್​ ಎಂಟರ್​ಟೇನ್ಮೆಂಟ್​’ ಎಂಬ ಸಂಸ್ಥೆಯನ್ನು ನಿಯೋಜಿಸಿಕೊಳ್ಳಲಾಗಿತ್ತು. ಈ ಸಂಸ್ಥೆಯ ಸಿಇಓ ರಜತ್ ರಾಹುಲ್ ಹಕ್ಸರ್ ಅವರು ಮುಂಬೈನ ಸೌತ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 1818 ಲಿಂಕ್​ಗಳ ಮೂಲಕ ಪೈರಸಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ‘ಛಾವ’ ಎಫೆಕ್ಟ್: ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನದ ವಿಷಯ ಸೇರಿಸಲು ಒತ್ತಾಯ

ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿದ ‘ಛಾವ’ ಸಿನಿಮಾದಲ್ಲಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ಅಭಿನಯಿಸಿದ್ದಾರೆ. ತೆಲುಗು ಭಾಷೆಗೂ ಡಬ್ ಆಗಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.