ಆ ವ್ಯಕ್ತಿ ನೋಡಿ ವಿದ್ಯಾ ಬಾಲನ್ಗೆ ಆಗಿತ್ತು ‘ಲಸ್ಟ್ ಎಟ್ ಫಸ್ಟ್ ಸೈಟ್’; ಅವರನ್ನೇ ಮದುವೆ ಆದರು
ಸಾಮಾನ್ಯವಾಗಿ ಮೊದಲ ಬಾರಿ ಭೇಟಿ ಮಾಡಿದ ‘ಲವ್ ಎಟ್ ಫಸ್ಟ್ ಸೈಟ್’ ಆಗುತ್ತದೆ. ಆದರೆ, ವಿದ್ಯಾ ಬಾಲನ್ಗೆ ಆಗಿದ್ದು, ‘ಲಸ್ಟ್ (ಕಾಮ) ಎಟ್ ಫಸ್ಟ್ ಸೈಟ್’. ಹೌದು ಈ ವಿಚಾರವನ್ನು ವಿದ್ಯಾ ಬಾಲನ್ ಅವರು ಈ ಮೊದಲು ಹೇಳಿಕೊಂಡಿದ್ದರು. ಅವರು ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ನ ಮದುವೆ ಆಗಿದ್ದಾರೆ. ಅವರು ಇತ್ತೀಚೆಗೆ ಮದುವೆ ಬಗ್ಗೆ ಮಾತನಾಡಿದ್ದು, ಮೊದಲ ಭೇಟಿ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.
ವಿದ್ಯಾ ಬಾಲನ್ ಅವರಿಗೆ ಇಂದು (ಜನವರಿ 1) ಜನ್ಮದಿನದ ಸಂಭ್ರಮ. ಬಾಲಿವುಡ್ನ ಬೇಡಿಕೆಯ ನಟಿ ಆಗಿದ್ದ ಅವರು ಇತ್ತೀಚೆಗೆ ಬಣ್ಣದ ಲೋಕದಿಂದ ದೂರ ಸರಿದಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ನಿರ್ಮಾಪಕ ಸಿದ್ದಾರ್ಥ್ ರಾಯ್ ಕಪೂರ್ನ ಮದುವೆ ಆಗಿದ್ದಾರೆ. ಅವರು ಇತ್ತೀಚೆಗೆ ಮದುವೆ ಬಗ್ಗೆ ಮಾತನಾಡಿದ್ದು, ಮೊದಲ ಭೇಟಿ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.
ಸಾಮಾನ್ಯವಾಗಿ ಮೊದಲ ಬಾರಿ ಭೇಟಿ ಮಾಡಿದ ‘ಲವ್ ಎಟ್ ಫಸ್ಟ್ ಸೈಟ್’ ಆಗುತ್ತದೆ. ಆದರೆ, ವಿದ್ಯಾ ಬಾಲನ್ಗೆ ಆಗಿದ್ದು, ‘ಲಸ್ಟ್ (ಕಾಮ) ಎಟ್ ಫಸ್ಟ್ ಸೈಟ್’. ‘ನಾನು ಸಿದ್ದಾರ್ಥ್ ಅವರನ್ನು ಮೊದಲ ಬಾರಿಗೆ ನೋಡಿದಾಗ ದೈಹಿಕವಾಗಿ ಅವರಿಗೆ ಅಟ್ರ್ಯಾಕ್ಟ್ ಆದೆ. ಅವರು ಸಖತ್ ಹ್ಯಾಂಡ್ಸಮ್. ಅವರು ಹೆಚ್ಚು ಖಾಸಗಿ ಆಗಿರಲು ಇಷ್ಟಪಡುತ್ತಿದ್ದರು. ಇದರಿಂದ ಹೆಚ್ಚು ಸುರಕ್ಷಿತ ಎನಿಸಿತು’ ಎಂದಿದ್ದರು ವಿದ್ಯಾ ಬಾಲನ್.
ಮೊದಲ ಮುಂದುವರಿದವರು ಯಾರು ಎಂದು ಕೇಳಿದಾಗ, ಅದು ಸಿದ್ಧಾರ್ಥ್ ಎಂದು ವಿದ್ಯಾ ಹೇಳಿದ್ದಾರೆ. ಜನಪ್ರಿಯತೆ ವಿದ್ಯಾಗೆ ಹೊಸತಾಗಿದ್ದರಿಂದ ಅವರು ಯಾರಿಗೂ ಹತ್ತಿರ ಆಗಿರಲಿಲ್ಲ. ಆಗ ಅವರಿಗೆ ಕಂಡಿದ್ದು ಸಿದ್ಧಾರ್ಥ. ವಿದ್ಯಾ ಬಾಲನ್ ಈ ಮೊದಲು ಡೇಟ್ ಮಾಡಿದ್ದರು. ಆದರೆ, ಅದು ಬ್ರೇಕಪ್ನಲ್ಲಿ ಕೊನೆ ಆಯಿತು. ಹೀಗಾಗಿ, ಸಿದ್ದಾರ್ಥ್ನ ಮದುವೆ ಆಗುವ ಯಾವುದೇ ಆಲೋಚನೆ ವಿದ್ಯಾಗೆ ಇರಲಿಲ್ಲ. ಸಿದ್ದಾರ್ಥ್ ಅವರೇ ಈ ವಿಚಾರದಲ್ಲಿ ಮುಂದುವರಿದರು.
ವಿದ್ಯಾ ಬಾಲನ್ 30 ವರ್ಷದವರಾಗಿದ್ದಾಗ ಸಾಕಷ್ಟು ಖ್ಯಾತಿಯನ್ನು ಕಂಡಿದ್ದು ನಿಜ. ಆದರೆ ನಂತರ, ಒಂಟಿತನವನ್ನು ಅನುಭವಿಸಲು ಪ್ರಾರಂಭಿಸಿದರು. ಹೀಗಾಗಿ, ಅವರಿಗೆ ಒಬ್ಬರು ಬೇಕಿತ್ತು. ದಿನದ ಕೊನೆಯಲ್ಲಿ ನಿಮ್ಮ ಗೆಲುವು ಮತ್ತು ಸೋಲುಗಳನ್ನು ಹಂಚಿಕೊಳ್ಳಲು ಒಬ್ಬರು ಬೇಕು ಎಂದರು ಅವರು.
ಇದನ್ನೂ ಓದಿ: ‘ಭೂಲ್ ಭುಲಯ್ಯ 3’ ಸಿನಿಮಾ ಮೂಲಕ ಸಕ್ಸಸ್ ಪಡೆದ ವಿದ್ಯಾ ಬಾಲನ್
ಸಂಬಂಧಗಳಿಂದ ದೂರವಿದ್ದಾಗ ವಿದ್ಯಾ ಅವರು ಸಿದ್ಧಾರ್ಥ ಅವರನ್ನು ಭೇಟಿಯಾದರು. ವಂಚನೆಗೆ ಒಳಗಾಗಿದ್ದು ಅವರ ಹಿಂಜರಿಕೆಗೆ ಕಾರಣವಾಗಿತ್ತು. ಕೊನೆಗೂ ಇಬ್ಬರೂ ಮದುವೆ ಆದರು. ಸಿದ್ಧಾರ್ಥ್ ತುಂಬಾ ಖಾಸಗಿ ವ್ಯಕ್ತಿ. ಕಳೆದ ಕೆಲವು ವರ್ಷಗಳಿಂದ ವಿದ್ಯಾ ಕೂಡ ಹಾಗೆ ಆಗಿದ್ದಾರೆ. ಈ ಹಿಂದೆ ಅವರು ಹಲವು ವಿಚಾರ ಹಂಚಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಹಾಗಿಲ್ಲ. ವಿದ್ಯಾ ಬಾಲನ್ ಈ ವರ್ಷ ‘ಭೂಲ್ ಭುಲಯ್ಯ 3’ ಚಿತ್ರದಲ್ಲಿ ಮಂಜುಲಿಕಾ ಆಗಿ ಕಾಣಿಸಿಕೊಂಡಿದ್ದರು. ಈಗ ಅವರ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.