ಮೋದಿ ಮೆಚ್ಚಿದ ನಟ ವಿಕ್ರಾಂತ್ ಮಾಸಿ ನಿವೃತ್ತಿ ಘೋಷಿಸಿಲ್ಲ; ಇಲ್ಲಿದೆ ಅಸಲಿ ವಿಚಾರ
‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದ ನಟ ವಿಕ್ರಾಂತ್ ಮಾಸಿ ಅವರು ಇತ್ತೀಚೆಗೆ ಸಖತ್ ಜನಪ್ರಿಯತೆ ಪಡೆದಿದ್ದಾರೆ. ಆದರೆ ಅವರು ನಟನೆಯಿಂದ ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದೆ. ಆ ಕುರಿತು ಈಗ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಕ್ರಾಂತ್ ಮಾಸಿ ಅವರು ಈ ವಿಚಾರದ ಕುರಿತು ಮಾತನಾಡಿದ್ದಾರೆ.
ನಟ ವಿಕ್ರಾಂತ್ ಮಾಸಿ ಅವರು ಸ್ಕ್ರಿಪ್ಟ್ ಮತ್ತು ಪಾತ್ರಗಳ ಆಯ್ಕೆಯಲ್ಲಿ ಬಹಳ ಕಾಳಜಿ ವಹಿಸುತ್ತಿದ್ದಾರೆ. ‘12th ಫೇಲ್’ ಸಿನಿಮಾ ಬಿಡುಗಡೆ ಆದ ನಂತರ ಅವರು ಸಖತ್ ಫೇಮಸ್ ಆದರು. ಇತ್ತೀಚೆಗೆ ಬಿಡುಗಡೆ ಆದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಕೂಡ ಗಮನ ಸೆಳೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಈ ಸಿನಿಮಾವನ್ನು ನೋಡಿ ಹೊಗಳಿದ್ದಾರೆ. ಇಷ್ಟೆಲ್ಲ ಮೆಚ್ಚುಗೆ ಪಡೆದಿರುವ ವಿಕ್ರಾಂತ್ ಮಾಸಿ ಅವರು ಈಗ ಏಕಾಏಕಿ ನಿವೃತ್ತಿ ಘೋಷಿಸುತ್ತಾರೆ ಎಂಬ ಸುದ್ದಿ ಹಬ್ಬಿದ್ದರಿಂದ ಅಭಿಮಾನಿಗಳಿಗೆ ಬೇಸರ ಆಗಿತ್ತು. ಆದರೆ ಆ ಕುರಿತು ಸ್ವತಃ ವಿಕ್ರಾಂತ್ ಮಾಸಿ ಅವರಿಂದ ಸ್ಪಷ್ಟನೆ ಸಿಕ್ಕಿದೆ.
ನಟನೆಯಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ವಿಕ್ರಾಂತ್ ಮಾಸಿ ಅವರು ಸೋಶಿಯಲ್ ಮೀಡಿಯಾಸಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಅವರ ಮಾತನ್ನು ಜನರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ಒಂದು ಗ್ಯಾಪ್ ತೆಗೆದುಕೊಳ್ಳಲು ಬಯಸಿದ್ದಾರೆಯೇ ಹೊರತು ಸಂಪೂರ್ಣ ನಿವೃತ್ತಿ ಘೋಷಿಸುತ್ತಿಲ್ಲ. ಈ ವಿಚಾರನನ್ನು ವಿಕ್ರಾಂತ್ ಮಾಸಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ವಿಕ್ರಾಂತ್ ಮಾಸಿ ಅವರು ತುಂಬಾ ಬ್ಯುಸಿ ಆಗಿದ್ದರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಆದ್ದರಿಂದ ಅವರಿಗೆ ವಿಶ್ರಾಂತಿ ಬೇಕಾಗಿದೆ. ತುಂಬ ಬ್ಯುಸಿ ಆಗಿದ್ದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈ ಎಲ್ಲ ಕಾರಣಗಳಿಂದಾಗಿ ಅವರು ವಿಶ್ರಾಂತಿ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ ಅಷ್ಟೇ. ನಿವೃತ್ತಿಯ ಬಗ್ಗೆ ಅವರು ಆಲೋಚಿಸಿಲ್ಲ.
ಇದನ್ನೂ ಓದಿ: ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ನೋಡಿ ಮನಸಾರೆ ಹೊಗಳಿದ ನರೇಂದ್ರ ಮೋದಿ
ವಿಕ್ರಾಂತ್ ಮಾಸಿ ನಟಿಸಿರುವ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದಲ್ಲಿ ಗೋಧ್ರಾ ಹತ್ಯಾಕಾಂಡದ ಕುರಿತು ಕಥೆ ಇದೆ. ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಡಿಸೆಂಬರ್ 2ರಂದು ಸಂಸತ್ ಭವನದಲ್ಲಿ ನರೇಂದ್ರ ಮೋದಿ ಅವರು ಈ ಸಿನಿಮಾವನ್ನು ವೀಕ್ಷಿಸಿದರು. ಅವರ ಜೊತೆ ಚಿತ್ರತಂಡದವರು ಕೂಡ ಭಾಗಿ ಆಗಿದ್ದರು. ಮೋದಿ ಜೊತೆ ಕುಳಿತು ಸಿನಿಮಾ ನೋಡಿದ್ದು ತಮ್ಮ ವೃತ್ತಿ ಬದುಕಿನ ಉತ್ತುಂಗ ಘಳಿಗೆ ಎಂದು ವಿಕ್ರಾಂತ್ ಮಾಸಿ ಹೇಳಿದ್ದರು. ಇಷ್ಟೆಲ್ಲ ಪ್ರಶಂಸೆ ಪಡೆದ ಅವರು ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಹಬ್ಬಿದ್ದಾಗ ಅಭಿಮಾನಿಗಳಿಗೆ ಬೇಸರ ಆಗಿದ್ದು ಸಹಜ. ಆದರೆ ಈಗ ಎಲ್ಲರಿಗೂ ನಿರಾಳ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.