‘ರಾಮಾಯಣ’: ಯಶ್ ನಟನೆಗೆ ಮಾರುಹೋದ ಬಾಲಿವುಡ್ ನಟ ವಿವೇಕ್ ಒಬೆರಾಯ್

‘ರಾಮಾಯಣ’ ಸಿನಿಮಾನಲ್ಲಿ ನಟಿಸಿರುವ ಎಲ್ಲ ಕಲಾವಿದರ ನಟನೆಯನ್ನು ಸಹ ಕೊಂಡಾಡುತ್ತಿದ್ದಾರೆ. ಎಲ್ಲರಿಗಿಂತಲೂ ಹೆಚ್ಚು ಅಂಕ ಸಿಗುತ್ತಿರುವುದು ನಟ ಯಶ್ ಅವರ ನಟನೆಗೆ. ರಾವಣನಾಗಿ ಯಶ್ ಅವರ ಅಬ್ಬರ, ಆರ್ಭಟ, ಗಾಂಭೀರ್ಯತೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರು ಮಾತ್ರವೇ ಅಲ್ಲ, ಚಿತ್ರರಂಗದ ಗಣ್ಯರು ಸಹ ಯಶ್ ಅಭಿನಯಕ್ಕೆ ಮಾರು ಹೋಗಿದ್ದಾರೆ. ಇದೀಗ ಬಾಲಿವುಡ್​ನ ಖ್ಯಾತ ನಟ, ‘ರಾಮಾಯಣ’ದಲ್ಲಿ ಯಶ್ ಅವರ ಸಹನಟರೂ ಆಗಿರುವ ವಿವೇಕ್ ಒಬೆರಾಯ್ ಯಶ್ ನಟನೆಯ ಬಗ್ಗೆ ಕೊಂಡಾಡಿ ಟ್ವೀಟ್ ಮಾಡಿದ್ದಾರೆ.

‘ರಾಮಾಯಣ’: ಯಶ್ ನಟನೆಗೆ ಮಾರುಹೋದ ಬಾಲಿವುಡ್ ನಟ ವಿವೇಕ್ ಒಬೆರಾಯ್
Yash Vivek

Updated on: Nov 06, 2026 | 12:50 PM

ಮುಖ್ಯಾಂಶಗಳು

  • ಯಶ್ ಬಗ್ಗೆ ವಿವೇಕ್ ಒಬೆರಾಯ್ ಟ್ವೀಟ್
  • ಯಶ್ ನಟನೆಯ ಕೊಂಡಾಡಿದ ವಿವೇಕ್
  • ರಾಮಾಯಣ ಸಿನಿಮಾನಲ್ಲಿ ಅದ್ಧೂರಿ ಪ್ರದರ್ಶನ

‘ರಾಮಾಯಣ’ ಸಿನಿಮಾ ನಿನ್ನೆಯಷ್ಟೆ (ನವೆಂಬರ್ 05) ರಿಲೀಸ್ ಆಗಿದೆ. ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಿದೆ. ಸಿನಿಮಾ ನೋಡಿದವರೆಲ್ಲ ಸಿನಿಮಾ ಅನ್ನು ಕೊಂಡಾಡುತ್ತಿದ್ದಾರೆ. ‘ರಾಮಾಯಣ’ ಕತೆಯನ್ನು ಇಷ್ಟು ಅದ್ಧೂರಿಯಾಗಿ ಯಾರೂ ತೆರೆಗೆ ತಂದಿದ್ದಿಲ್ಲ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಿನಿಮಾನಲ್ಲಿ ನಟಿಸಿರುವ ಎಲ್ಲ ಕಲಾವಿದರ ನಟನೆಯನ್ನು ಸಹ ಕೊಂಡಾಡುತ್ತಿದ್ದಾರೆ. ಎಲ್ಲರಿಗಿಂತಲೂ ಹೆಚ್ಚು ಅಂಕ ಸಿಗುತ್ತಿರುವುದು ನಟ ಯಶ್ ಅವರ ನಟನೆಗೆ. ರಾವಣನಾಗಿ ಯಶ್ ಅವರ ಅಬ್ಬರ, ಆರ್ಭಟ, ಗಾಂಭೀರ್ಯತೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರು ಮಾತ್ರವೇ ಅಲ್ಲ, ಚಿತ್ರರಂಗದ ಗಣ್ಯರು ಸಹ ಯಶ್ ಅಭಿನಯಕ್ಕೆ ಮಾರು ಹೋಗಿದ್ದಾರೆ. ಇದೀಗ ಬಾಲಿವುಡ್​ನ ಖ್ಯಾತ ನಟ, ‘ರಾಮಾಯಣ’ದಲ್ಲಿ ಯಶ್ ಅವರ ಸಹನಟರೂ ಆಗಿರುವ ವಿವೇಕ್ ಒಬೆರಾಯ್ ಯಶ್ ನಟನೆಯ ಬಗ್ಗೆ ಕೊಂಡಾಡಿ ಟ್ವೀಟ್ ಮಾಡಿದ್ದಾರೆ.

‘ಯಶಾ… ನನ್ನ ಸಹೋದರ, ರಾಕಿಯಿಂದ ರಾವಣನವರೆಗೆ, ಎಂತಹ ಅದ್ಭುತ ಬೆಳವಣಿಗೆ ನಿಮ್ಮದು, ನೀನು ಸಂಪೂರ್ಣವಾಗಿ ಮಿಂಚಿಬಿಟ್ಟೆ. ರಾವಣನ ಪಾತ್ರಕ್ಕೆ ನೀನು ತಂದಿರುವ ವೈಭವ, ಶಕ್ತಿ ಮತ್ತು ಗತ್ತು ಬೇರೆಯದೇ ಲೆವೆಲ್. ತೆರೆಯ ಮೇಲೆ ರಾವಣನ ಪ್ರಭಾವವನ್ನು ನಾನು ಅನುಭವಿಸಿದೆ. ನಿನ್ನೊಂದಿಗೆ ತೆರೆ ಹಂಚಿಕೊಂಡಿದ್ದು ಅದ್ಭುತ ಅನುಭವ ಸಹೋದರ. ರಾವಣನ ಹತ್ತು ತಲೆಗಳು ಮಾತನಾಡುವ ಆ ದೃಶ್ಯ, ಉಫ್ಫ್, ಅಬ್ಬಬ್ಬಾ ಅದ್ಭುತ. ಎಂತಹ ಅದ್ಭುತ ಅಭಿನಯ ಬ್ರದರ್’ ಎಂದು ವಿವೇಕ್ ಒಬೆರಾಯ್ ಟ್ವೀಟ್ ಮಾಡಿದ್ದಾರೆ. ಯಶ್ ಅವರ ಸಹೋದರನ ಪಾತ್ರದಲ್ಲಿ ವಿವೇಕ್ ಒಬೆರಾಯ್ ಅವರು ‘ರಾಮಾಯಣ’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.

Loading...

ವಿವೇಕ್, ಕೇವಲ ಯಶ್​ ಬಗ್ಗೆ ಮಾತ್ರವೇ ಅಲ್ಲದೆ ರಣ್​ಬೀರ್ ಕಪೂರ್, ಸಾಯಿ ಪಲ್ಲವಿ ಇನ್ನೂ ಕೆಲವು ಕಲಾವಿದರ ಬಗ್ಗೆ ಪ್ರತ್ಯೇಕ ಟ್ವೀಟ್​​ಗಳನ್ನು ಮಾಡಿದ್ದಾರೆ, ರಣ್​ಬೀರ್ ಕಪೂರ್ ಬಗ್ಗೆ ಟ್ವೀಟ್ ಮಾಡಿ, ‘ರಣಬೀರ್ ಕಪೂರ್, ನಮ್ಮ ಪ್ರೀತಿಯ ಶ್ರೀರಾಮನನ್ನು ನೀವು ಹೇಗೆ ಅಭಿನಯಿಸುತ್ತೀರಿ ಎಂಬ ಕುತೂಹಲ, ಅನುಮಾನ ಹಲವರಿಗೆ ಇತ್ತು. ಆದರೆ ನಿನ್ನೆ ನಿಮ್ಮನ್ನು ತೆರೆಯ ಮೇಲೆ ನೋಡಿದ ಮೇಲೆ, ನಾನು ಹೇಳಬಲ್ಲೆ, ನಾನು ತೆರೆಯ ಮೇಲೆ ನನ್ನ ರಾಮನನ್ನು ಕಂಡೆ. ಆ ಪಾತ್ರಕ್ಕೆ ನೀವು ತಂದಿರುವ ಸೌಜನ್ಯ, ಘನತೆ ಮತ್ತು ದಿವ್ಯತೆ ಅದ್ಭುತ. ದಶರಥನು ನಿಧನನಾದನೆಂದು ಅರಿಯುವ ಆ ದೃಶ್ಯದಲ್ಲಿ, ನೀವು ನನ್ನ ಕಣ್ಣಲ್ಲಿ ನೀರು ತರಿಸಿಬಿಟ್ಟಿರಿ, ಸಹೋದರ’ ಎಂದಿದ್ದಾರೆ ವಿವೇಕ್.

ಸಾಯಿ ಪಲ್ಲವಿ ಬಗ್ಗೆಯೂ ಟ್ವೀಟ್ ಮಾಡಿರುವ ವಿವೇಕ್, ‘ಸಾಯಿ ಪಲ್ಲವಿ, ನಾವು ಸೀತಾ ಮಾತೆಯೊಂದಿಗೆ ಜೋಡಿಸಿ ನೋಡುವ ಮುಗ್ಧತೆ, ಸೌಜನ್ಯ ಮತ್ತು ಪರಿಶುದ್ಧತೆ ನಿಮ್ಮ ಅಭಿನಯದಲ್ಲಿ ಸುಂದರವಾಗಿ ಪ್ರತಿಬಿಂಬಿತವಾಗಿದೆ. ಎಂತಹ ಸೊಗಸಾದ, ಹೃದಯಸ್ಪರ್ಶಿ ಅಭಿನಯ, ಯುದ್ಧದ ದೃಶ್ಯಗಳಲ್ಲಿ ನಿಮ್ಮ ಚುರುಕುತನದಿಂದ ನನ್ನನ್ನು ಬೆರಗುಗೊಳಿಸಿದಿರಿ, ಯೋಧ ರಾಜಕುಮಾರಿ’ ಎಂದಿದ್ದಾರೆ ನಟ.

ವಿವೇಕ್ ಒಬೆರಾಯ್ ಅವರು ಬಾಲಿವುಡ್​​ನ ಸ್ಟಾರ್ ನಟರುಗಳಲ್ಲಿ ಒಬ್ಬರು. ಒಂದು ಕಾಲದಲ್ಲಿ ಕೆಲ ಸಮಯದ ವರೆಗೆ ಬಾಲಿವುಡ್​​ನ ನಂಬರ್ 1 ನಟ ಎನಿಸಿಕೊಂಡಿದ್ದರು. ವಿವೇಕ್ ಒಬೆರಾಯ್ ಅವರು ದಕ್ಷಿಣದ ಸಿನಿಮಾಗಳಲ್ಲಿಯೂ ಸಹ ನಟನೆ ಮಾಡಿದ್ದಾರೆ. ವಿವೇಕ್ ಅವರು ಒಳ್ಳೆಯ ನಟ ಆಗಿರುವ ಜೊತೆಗೆ ಯಶಸ್ವಿ ಉದ್ಯಮಿ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us