ಜೂ.ಎನ್​ಟಿಆರ್ ಜೊತೆ ಸೇರಿ ಸಿನಿಮಾ ಪ್ರಚಾರ ಮಾಡಬೇಡಿ; ಹೃತಿಕ್​ಗೆ ಸೂಚಿಸಿದ ನಿರ್ಮಾಣ ಸಂಸ್ಥೆ

ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ ಅವರನ್ನು ನಟಿಸಿದ್ದಾರೆ. ಇಬ್ಬರೂ ಒಟ್ಟಿಗೆ ಸಿನಿಮಾ ಪ್ರಚಾರ ಮಾಡೋದಿಲ್ಲ. ಈ ಆಲೋಚನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಪ್ರಚಾರಕ್ಕೆ ಈ ವಿಧಾನ ಪರಿಣಾಮಕಾರಿಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಜೂ.ಎನ್​ಟಿಆರ್ ಜೊತೆ ಸೇರಿ ಸಿನಿಮಾ ಪ್ರಚಾರ ಮಾಡಬೇಡಿ; ಹೃತಿಕ್​ಗೆ ಸೂಚಿಸಿದ ನಿರ್ಮಾಣ ಸಂಸ್ಥೆ
ಹೃತಿಕ್-ಎನ್​ಟಿಆರ್

Updated on: Jul 02, 2025 | 9:56 PM

ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಅದಕ್ಕೆ ಹೆಚ್ಚಿನ ಪ್ರಚಾರ ನೀಡಲು ತಂಡದವರು ನಾನಾ ಕಸರತ್ತು ಮಾಡುತ್ತಾರೆ. ಅಲ್ಲದೆ, ಈ ಚಿತ್ರದಲ್ಲಿ ಅಪರೂಪದ ಕಲಾವಿದರ ಸಮಾಗಮ ಆಗಿದೆ ಎಂದರೆ ಅವರು ಆದಷ್ಟು ಒಟ್ಟಿಗೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲಾಗುತ್ತದೆ. ಈ ಮೊದಲು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಟ್ಟಾಗಿ ನಟಿಸಿದ್ದರು. ಈ ವೇಳೆ ಅವರು ಯಾವುದೇ ಜಾಹೀರಾತುಗಳಲ್ಲಿ ನಟಿಸಿದಂತೆ ಷರತ್ತು ಹಾಕಲಾಗಿತ್ತು. ಈಗ ವಾರ್ 2’ ( war 2) ಮುಖ್ಯಭೂಮಿಕೆಯಲ್ಲಿ ಇರೋರಿಗೂ ಇದೇ ರೀತಿಯ ಷರತ್ತು ಹಾಕಲಾಗಿದೆ.

ಯಶ್ ರಾಜ್ ಫಿಲ್ಮ್ಸ್ ಇತ್ತೀಚೆಗೆ ಸ್ಪೈ ಯೂನಿವರ್ಸ್ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಾರಿ ಅವರು ‘ವಾರ್ 2’ ಸಿನಿಮಾ ಮೂಲಕ ಬರಲು ರೆಡಿ ಆಗಿದ್ದಾರೆ. ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆದರೆ, ಪ್ರಚಾರದ ವೇಳೆ ಇವರು ಒಟ್ಟಾಗಿ ಕಾಣಿಸೋದಿಲ್ಲ. ಏಕೆಂದರೆ ಇಬ್ಬರಿಗೂ ಪ್ರತ್ಯೇಕವಾಗಿ ಸಿನಿಮಾ ಪ್ರಚಾರ ಮಾಡುವಂತೆ ಸೂಚಿಸಲಾಗಿದೆ.

‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಹಾಗೂ ಹೃತಿಕ್ ರೋಷನ್ ಮುಖಾಮುಖಿ ಆಗೋದು ಗೊತ್ತೇ ಇದೆ. ಸುದ್ದಿಗೋಷ್ಠಿಯಲ್ಲಿ, ಸಂದರ್ಶನದಲ್ಲಿ ಇವರನ್ನು ಪದೇ ಪದೇ ನೋಡಿದರೆ ಈ ಜೋಡಿ ಮೇಲೆ ಅಷ್ಟು ಕ್ರೇಜ್ ಉಳಿದುಕೊಳ್ಳೋದಿಲ್ಲ ಎಂಬುದು ನಿರ್ಮಾಣ ಸಂಸ್ಥೆಯ ನಂಬಿಕೆ. ಈ ಕಾರಣದಿಂದಲೇ ತೆರೆಮೇಲೆ ಇವರನ್ನು ಮೊದಲ ಬಾರಿಗೆ ನೋಡಲಿ ಎಂದು ಯಶ್ ರಾಜ್ ಫಿಲ್ಮ್ಸ್ ಬಯಸುತ್ತಿದೆ.

ಇದನ್ನೂ ಓದಿ
‘ನಾನು ಫಾತಿಮಾಗೆ ಲವರ್, ತಂದೆ ಎರಡೂ ಅಲ್ಲ’; ಆಮಿರ್ ಖಾನ್ ನೇರ ಮಾತು
ನೀಲಿ ತಾರೆಯ ಅನುಮಾನಾಸ್ಪದ ಸಾವು; ಶವ ಸಂಸ್ಕಾರಕ್ಕೆ ಹಣ ಕೇಳಿದ ಕುಟುಂಬ
ಲವ್ ಇನ್ ದಿ ಏರ್; ಮಗುವಿನಂತೆ ಯಶ್​​ನ ತಬ್ಬಿ ಕುಳಿತ ರಾಧಿಕಾ ಪಂಡಿತ್
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ. ಅಭಿಮಾನಿಗಳು ಈ ಐಡಿಯಾಗೆ ಅಸಮಾಧಾನ ಹೊರಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರನ್ನು ನೋಡೋದಕ್ಕೂ, ಸಿನಿಮಾದಲ್ಲಿ ನೋಡೋದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂಬ ಅಭಿಪ್ರಾಯವನ್ನು ಕೆಲವರು ಹೊರಹಾಕಿದ್ದಾರೆ. ಇನ್ನೂ ಕೆಲವರು ಅತೀ ಬುದ್ಧಿವಂತಿಕೆ ತೋರಿಸಿದರೆ ಈ ರೀತಿ ಆಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರನ್ನು ಒಟ್ಟಿಗೆ ತೆರಮೇಲೆ ತಂದರೆ ಚಿತ್ರಕ್ಕೆ ಮತ್ತಷ್ಟು ಪ್ರಚಾರ ಸಿಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಇದನ್ನೂ ಓದಿ:ಅಂದು ಬಿಕಿನಿ, ಇಂದು ಗನ್; ‘ವಾರ್ 2’ ಸಿನಿಮಾದಲ್ಲಿ ಕಿಯಾರಾ ಹೊಸ ಅವತಾರ

2019ರ ‘ವಾರ್’ ಚಿತ್ರದ ಮುಂದುವರಿದ ಭಾಗವಾಗಿ ‘ವಾರ್ 2’ ರಿಲೀಸ್ ಆಗುತ್ತಿದೆ. ಆಗಸ್ಟ್ 14ರಂದು ಚಿತ್ರ ಬಿಡುಗಡೆ ಕಾಣಲಿದೆ. ಅಯಾನ್ ಮುಖರ್ಜಿ ನಿರ್ದೇಶನ ಚಿತ್ರಕ್ಕೆ ಇದೆ. ಕಿಯಾರಾ ಅಡ್ವಾಣಿ ಚಿತ್ರಕ್ಕೆ ನಾಯಕಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 9:52 pm, Wed, 2 July 25