ಬಿಗ್ ಬಜೆಟ್ ಸಿನಿಮಾ ಎಂದಾಗ ಕನಿಷ್ಠ ಒಂದು ವರ್ಷ ಶೂಟಿಂಗ್ ನಡೆಯುತ್ತದೆ. ನಾನಾ ಲೊಕೇಷನ್ಗಳಿಗೆ ತೆರಳಿ ಚಿತ್ರೀಕರಣ ಮಾಡಲಾಗುತ್ತದೆ. ಆದರೆ, ‘ವಾರ್ 2’ ಸಿನಿಮಾ (War 2 Movie) ಈ ವಿಚಾರದಲ್ಲಿ ಭಿನ್ನವಾಗಿದೆ. ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾದ ಶೂಟಿಂಗ್ಗೆ ಕೇವಲ 60 ದಿನ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ 2024ರಲ್ಲೇ ಸಿನಿಮಾ ರಿಲೀಸ್ ಆದರೂ ಅಚ್ಚರಿ ಏನಿಲ್ಲ ಎನ್ನುತ್ತಿವೆ ಮೂಲಗಳು. ಈ ವಿಚಾರ ಕೇಳಿ ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ಫ್ಯಾನ್ಸ್ ಖುಷಿಯಾಗಿದ್ದಾರೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ‘ವಾರ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಟೈಗರ್ ಶ್ರಾಫ್ ಪಾತ್ರ ಕೊನೆಯಾಗಿದೆ. ‘ವಾರ್ 2’ ಚಿತ್ರದಲ್ಲಿ ಹೃತಿಕ್ ಜೊತೆ ಜೂನಿಯರ್ ಎನ್ಟಿಆರ್ ಸೇರಿಕೊಳ್ಳುತ್ತಿದ್ದಾರೆ. ಇದರಿಂದ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡುವಂತೆ ಆಗಿದೆ. ಸಿನಿಮಾ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದ್ದರೂ ಇದಕ್ಕೆ ಕಡಿಮೆ ದಿನಗಳ ಶೂಟಿಂಗ್ ನಿಗದಿ ಮಾಡಲಾಗಿದೆ.
ಜೂನಿಯರ್ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಅವರಿಂದ 60 ದಿನಗಳ ಕಾಲ್ಶೀಟ್ನ ಅಯಾನ್ ಮುಖರ್ಜಿ ಪಡೆದಿದ್ದಾರೆ. 30 ದಿನಗಳ ಕಾಲ ಇವರ ಕಾಂಬಿನೇಷನ್ ದೃಶ್ಯಗಳ ಶೂಟಿಂಗ್ ಇರಲಿದೆ. ಇನ್ನು 30 ದಿನ ಪ್ರತ್ಯೇಕವಾಗಿ ಇವರ ಭಾಗದ ದೃಶ್ಯದ ಶೂಟ್ ನಡೆಯಲಿದೆ ಎಂದು ತಿಳಿದು ಬಂದಿದೆ. ಹೃತಿಕ್ ರೋಷನ್ ಭಾಗದ ಶೂಟಿಂಗ್ ಜೂನ್ನಲ್ಲಿ ಪೂರ್ಣಗೊಂಡರೆ, ಜೂನಿಯರ್ ಎನ್ಟಿಆರ್ ಭಾಗದ ಚಿತ್ರೀಕರಣ ಜುಲೈನಲ್ಲಿ ಪೂರ್ಣಗೊಳ್ಳಲಿದೆ. ಬಹುತೇಕ ಚಿತ್ರೀಕರಣ ಸ್ಟುಡಿಯೋದಲ್ಲೇ ನಡೆಯಲಿದೆ.
ಇದನ್ನೂ ಓದಿ: ‘ವಾರ್ 2’ ಚಿತ್ರದಲ್ಲಿ ಇರಲ್ಲ ಯಾವುದೇ ವಿಶೇಷ ಅತಿಥಿ ಪಾತ್ರ; ಸೋಲಿನಿಂದ ಬುದ್ಧಿ ಕಲಿತ ನಿರ್ಮಾಪಕರು
ಅಯಾನ್ ಮುಖರ್ಜಿ ಅವರು ಸಂಪೂರ್ಣವಾಗಿ ಪ್ಲ್ಯಾನಿಂಗ್ ಮಾಡಿ ಶೂಟಿಂಗ್ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರು ಸ್ಕ್ರಿಪ್ಟ್ ಕೆಲಸಕ್ಕಾಗಿ ಸಾಕಷ್ಟು ಸಮಯ ಹೂಡಿಕೆ ಮಾಡಿದ್ದಾರೆ. ಈ ಕಾರಣದಿಂದ ಶೂಟಿಂಗ್ ಮತ್ತಷ್ಟು ಸುಲಭವಾಗಲಿದೆ ಎಂದು ಊಹಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ