
ಸಮಯ್ ರೈನಾ (Samay Raina) ಅವರು ಯೂಟ್ಯೂಬ್ನಲ್ಲಿ ‘ಇಂಡಿಯಾಸ್ ಗಾಟ್ ಲೇಟೆಂಟ್’ ಹೆಸರಿನ ಶೋ ಮಾಡುತ್ತಿದ್ದರು. ಈ ಸ್ಟ್ಯಾಂಡಪ್ ಕಾಮಿಡಿಯನ್ ಮಾಡಿಕೊಂಡ ವಿವಾದ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದ್ದು ಗೊತ್ತೇ ಇದೆ. ಈ ವಿಚಾರಕ್ಕೆ ಸಂಬಂಧಿಸಿ ಕೇಸ್ ಕೂಡ ದಾಖಲಾಗಿದೆ ಅನ್ನೋದು ಹೊಸ ಸುದ್ದಿ ಏನೂ ಅಲ್ಲ. ಪಾಲಕರ ಲೈಂಗಿಕ ವಿಚಾರ ಮಾತನಾಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಈ ಶೋ ಕೂಡ ಬಂದ್ ಆಗಿತ್ತು. ಈಗ ಈ ಶೋ ಯಾವಾಗ ಮತ್ತೆ ಆರಂಭ ಆಗಲಿದೆ ಎಂಬ ಪ್ರಶ್ನೆ ಸಮಯ್ ಎದುರು ಬಂದಿದೆ.
ರಣವೀರ್ ಅಲಾಹಾಬಾದಿಯಾ ಅವರು ಸಮಯ್ ರೈನಾ ಶೋಗೆ ಬಂದಿದ್ದರು. ಈ ವೇಳೆ ಮಾತಿನ ಭರದಲ್ಲಿ ಅವರು ಏನೇನೋ ಮಾತನಾಡಿದ್ದರು. ತಂದೆ ತಾಯಿ ಲೈಂಗಿಕತೆ ಮಾತನಾಡಿದ್ದು ಸರಿ ಅಲ್ಲ ಎಂಬುದು ಅನೇಕ ಅಭಿಪ್ರಾಯ ಆಗಿತ್ತು. ಆ ಬಳಿಕ ಶೋಗೆ ಬ್ಯಾನ್ ಬೀಳುವ ಭಯ ಕಾಡಿತು. ಹೀಗಾಗಿ, ಈ ಶೋನ ಅಷ್ಟೂ ವಿಡಿಯೋನ ಸಮಯ್ ಅವರು ತೆಗೆದು ಹಾಕಿದ್ದಾರೆ. ಈಗ ಮತ್ತೆ ಶೋ ಯಾವಾಗ ಬರುತ್ತದೆ ಅನ್ನೋದು ಸದ್ಯದ ಪ್ರಶ್ನೆ.
ಸಮಯ್ ರೈನಾ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಆಗ ಅವರಿಗೆ, ‘ಶೋ ವಾಪಾಸ್ ಯಾವಾಗ ಬರುತ್ತದೆ’ ಎಂದು ಕೇಳಲಾಯಿತು. ಅವರು ನಕ್ಕಿ ಸುಮ್ಮನೆ ಹೋಗಿದ್ದಾರೆ. ಅವರು ಈ ಪ್ರಶ್ನೆಗೆ ಉತ್ತರ ನೀಡಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಅವರು ಈ ಬಗ್ಗೆ ಯೋಚಿಸಿದ್ದಾರೋ ಅಥವಾ ಇಲ್ಲವೋ ಎಂಬುದು ಕೂಡ ಇನ್ನೂ ತಿಳಿದು ಬಂದಿಲ್ಲ.
ಇದನ್ನೂ ಓದಿ:ಕಾಮಿಡಿಯನ್ ಸಮಯ್ ರೈನಾ ಬಳಿ ಆಟೋಗ್ರಾಫ್ ಕೇಳಿದ ಅಮಿತಾಭ್; ಇದರ ಹಿಂದಿನ ಕಥೆ ಏನು?
ಶೋನಲ್ಲಿ ಮಾತನಾಡಿದ್ದ ರಣವೀರ್, ‘ನಿಮ್ಮ ಪಾಲಕರು ಲೈಂಗಿಕ ಕ್ರಿಯೆ ನಡೆಸುವುದನ್ನು ನಿತ್ಯವೂ ನೋಡುತ್ತಾ ಇರುತ್ತೀರಾ ಅಥವಾ ಅವರ ಜೊತೆ ಸೇರಿ ಅದನ್ನು ನಿಲ್ಲಿಸುತ್ತೀರಾ’ ಎಂದು ಕೇಳಿದ್ದರು. ಇದು ಗಂಭೀರ ರೂಪ ಪಡೆದು ಅವರ ವಿರುದ್ಧ ಎಫ್ಐಆರ್ ಕೂಡ ದಾಖಲು ಆಯಿತು.
ಸಮಯ್ ಕಂಬ್ಯಾಕ್ಗೆ ರೆಡಿ ಆಗಿದ್ದಾರೆ. ಹೊಸ ಅಂತಾರಾಷ್ಟ್ರೀಯ ಟೂರ ಆಯೋಜನೆ ಮಾಡುತ್ತಿದ್ದಾರೆ. ಯುರೋಪ್, ಯುಕೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ಗೆ ಅವರು ತೆರಳುತ್ತಿದ್ದಾರೆ. ಜೂನ್ 5ರಿಂದ ಆರಂಭ ಆಗಿ ಜುಲೈ 20ರವರೆಗೆ ಶೋ ಇರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ