‘ಧುರಂಧರ್ 2’ ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ

Aditya Dhar movie: ‘ಧುರಂದರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಆದಿತ್ಯ ಧರ್, ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಸೇರಿಬಿಟ್ಟಿದ್ದಾರೆ. ಇದೀಗ ಆದಿತ್ಯ ಧರ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಿನಿಮಾ ಪ್ರೇಕ್ಷಕರಿಗೆ ಮೂಡಿದೆ. ಆದಿತ್ಯ ಧರ್ ಅವರ ಮುಂದೆ ಸದ್ಯಕ್ಕೆ ಮೂರು ಹಾದಿ ಇದೆ. ಅವರು ಯಾವುದು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

‘ಧುರಂಧರ್ 2’ ಬಳಿಕ ಆದಿತ್ಯ ಧರ್ ಮುಂದೆ ಮೂರು ದಾರಿ
Aditya Dhar

Updated on: Apr 04, 2026 | 3:16 PM

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಸಿನಿಮಾ, ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿದೆ. ‘ಧುರಂದರ್’ ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಆದಿತ್ಯ ಧರ್, ಭಾರತದ ಟಾಪ್ ನಿರ್ದೇಶಕರ ಸಾಲಿಗೆ ಸೇರಿಬಿಟ್ಟಿದ್ದಾರೆ. ಇದೀಗ ಆದಿತ್ಯ ಧರ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಿನಿಮಾ ಪ್ರೇಕ್ಷಕರಿಗೆ ಮೂಡಿದೆ. ಆದಿತ್ಯ ಧರ್ ಅವರ ಮುಂದೆ ಸದ್ಯಕ್ಕೆ ಮೂರು ಹಾದಿ ಇದೆ. ಅವರು ಯಾವುದು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಆದಿತ್ಯ ಧರ್, ಅವರು ಐತಿಹಾಸಿಕ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೌರ್ಯ ಸಾಮ್ರಾಜ್ಯದ ದೊರೆ ಚಂದ್ರಗುಪ್ತ ಮೌರ್ಯನ ಕತೆಯನ್ನು ಸಿನಿಮಾ ಮಾಡುವ ಯೋಜನೆ ಅವರ ಮುಂದಿದೆ. ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯರ ಕತೆಯನ್ನು ಆದಿತ್ಯ ಧರ್ ತೆರೆ ಮೇಲೆ ತರಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾನಲ್ಲಿ ಚಂದ್ರಗುಪ್ತ ಮೌರ್ಯನಾಗಿ ರಣ್ವೀರ್ ಸಿಂಗ್ ಮತ್ತು ಚಾಣಕ್ಯನಾಗಿ ಆದಿತ್ಯ ಅವರ ನೆಚ್ಚಿನ ನಟ ಅಕ್ಷಯ್ ಖನ್ನಾ ನಟಿಸಲಿದ್ದಾರಂತೆ.

ಆದಿತ್ಯ ಧರ್ ಅವರಿಗೆ ಅಶ್ವತ್ಥಾಮನ ಕುರಿತು ಸಿನಿಮಾ ಮಾಡುವ ಕನಸು ಹಲವು ವರ್ಷಗಳಿಂದಲೂ ಇದೆ. ಈ ವಿಷಯವನ್ನು ಈ ಹಿಂದೆಯೂ ಸಹ ಅವರು ಹೇಳಿಕೊಂಡಿದ್ದರು. ಆದರೆ ಅದಕ್ಕೆ ಅತಿಯಾದ ವಿಎಫ್​​ಎಕ್ಸ್, ಸೆಟ್​ಗಳ ಅವಶ್ಯಕತೆ ಇದೆ, ಅದಕ್ಕೆ ಭಾರಿ ಬಂಡವಾಳ ಬೇಕಾಗುತ್ತದೆ ಎಂದು ಆದಿತ್ಯ ಹೇಳಿದ್ದರು. ಇದೀಗ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿದ್ದು, ಎರಡೂ ಸಿನಿಮಾಗಳಿಗೆ ಆದಿತ್ಯ ಧರ್ ಸಹ ನಿರ್ಮಾಪಕರೂ ಸಹ ಆಗಿರುವ ಕಾರಣ, ಇದೀಗ ‘ಅಶ್ವತ್ಥಾಮ’ ಸಿನಿಮಾ ಮಾಡುವಷ್ಟು ಬಂಡವಾಳ ಒಟ್ಟುಗೂಡಿರುವ ಕಾರಣ ಹಾಗೂ ಆದಿತ್ಯ ಮೇಲೆ ಬಂಡವಾಳ ಹೂಡಲು ದೊಡ್ಡ ನಿರ್ಮಾಣ ಸಂಸ್ಥೆಗಳು ರೆಡಿಯಾಗಿವೆ ಹಾಗಾಗಿ ಇದೀಗ ಅವರು ‘ಅಶ್ವತ್ಥಾಮ’ ಸಿನಿಮಾಕ್ಕೆ ಕೈ ಹಾಕುವ ಸಾಧ್ಯತೆಯೂ ಇದೆ.

ಇದನ್ನೂ ಓದಿ:‘ಧುರಂಧರ್ 2’ ಕಥೆ ನಂದು ಎಂದ ವ್ಯಕ್ತಿಯ ಮೈಚಳಿ ಬಿಡಿಸಲು ಮುಂದಾದ ಆದಿತ್ಯ ಧಾರ್

ಇನ್ನು ಕೆಲ ಸುದ್ದಿಗಳ ಪ್ರಕಾರ, ಆದಿತ್ಯ ಧರ್ ಅವರ ಮೊದಲ ಸಿನಿಮಾ ಮಾದರಿಯಲ್ಲೇ ಭಾರತೀಯ ಸೇನೆಯ ಆಪರೇಷನ್ ಒಂದರ ಕತೆಯನ್ನು ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದಿತ್ಯ ಧರ್ ನಿರ್ದೇಶನ ಮಾಡಿದ್ದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಭಾರತೀಯ ಸೇನೆಯ ಕುರಿತಾಗಿಯೇ ಮತ್ತೊಂದು ಸಿನಿಮಾವನ್ನು ಆದಿತ್ಯ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮೂರು ಸಿನಿಮಾಗಳಲ್ಲಿ ಆದಿತ್ಯ ಅವರು ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us