ಸಿಖ್ ವೇಷ ಧರಿಸಿ ಸಿಗರೇಟು ಸೇದಿದರೇ ರಣ್ವೀರ್ ಸಿಂಗ್: ಸ್ಪಷ್ಟನೆ ಕೊಟ್ಟ ನಿರ್ದೇಶಕ
Dhurandhar 2 movie: ‘ಧುರಂಧರ್ 2’ ಸಿನಿಮಾದ ಪರವಾಗಿ ಕೆಲವರು ಮತ್ತು ಸಿನಿಮಾನಲ್ಲಿ ತೋರಿಸಲಾಗಿರುವ ರಾಜಕೀಯದ ಇನ್ನು ಕೆಲವರು ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ರಣ್ವೀರ್ ಸಿಂಗ್ ಅವರ ಚಿತ್ರವೊಂದು ವೈರಲ್ ಆಗಿತ್ತು, ಸಿಖ್ ವೇಷದಲ್ಲಿರುವ ರಣ್ವೀರ್ ಸಿಂಗ್ ಸಿಗರೇಟು ಸೇದುತ್ತಿರುವ ಫೋಟೊ ಅದಾಗಿತ್ತು. ಇದರ ವಿರುದ್ಧ ಸಿಖ್ ಧರ್ಮೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ನಿರ್ದೇಶದ ಆದಿತ್ಯ ಧರ್ ಸ್ಪಷ್ಟನೆ ನೀಡಿದ್ದಾರೆ.

‘ಧುರಂಧರ್ 2’ (Dhurandhar 2) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾದ ಸಾಮಾಜಿಕ ಜಾಲತಾಣದಲ್ಲಿ ಸಹ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಿನಿಮಾದ ಪರವಾಗಿ ಕೆಲವರು ಮತ್ತು ಸಿನಿಮಾನಲ್ಲಿ ತೋರಿಸಲಾಗಿರುವ ರಾಜಕೀಯದ ಇನ್ನು ಕೆಲವರು ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ರಣ್ವೀರ್ ಸಿಂಗ್ ಅವರ ಚಿತ್ರವೊಂದು ವೈರಲ್ ಆಗಿತ್ತು, ಸಿಖ್ ವೇಷದಲ್ಲಿರುವ ರಣ್ವೀರ್ ಸಿಂಗ್ ಸಿಗರೇಟು ಸೇದುತ್ತಿರುವ ಫೋಟೊ ಅದಾಗಿತ್ತು. ಇದರ ವಿರುದ್ಧ ಸಿಖ್ ಧರ್ಮೀಯರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಬಗ್ಗೆ ನಿರ್ದೇಶದ ಆದಿತ್ಯ ಧರ್ ಸ್ಪಷ್ಟನೆ ನೀಡಿದ್ದಾರೆ.
ರಣ್ವೀರ್ ಸಿಂಗ್, ಸಿಖ್ ಪೇಟ ಧರಿಸಿ ಧೂಮಪಾನ ಮಾಡುತ್ತಿರುವಂತೆ ಸೃಷ್ಟಿಸಲಾದ ಚಿತ್ರವು ಸಂಪೂರ್ಣವಾಗಿ ಸುಳ್ಳು ಮತ್ತು ಕಪೋಲಕಲ್ಪಿತ ಎಂದು ಆದಿತ್ಯ ಧರ್ ಹೇಳಿದ್ದಾರೆ. ಎಐ ತಂತ್ರಜ್ಞಾನ ಬಳಸಿ ಸಿನಿಮಾದ ದೃಶ್ಯಗಳನ್ನು, ಚಿತ್ರಗಳನ್ನು ತಿರುಚಲಾಗುತ್ತಿದೆ ಎಂದು ಆದಿತ್ಯ ಧರ್ ಹೇಳಿದ್ದಾರೆ. ತಮಗೆ ಸಿಖ್ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ತಮಗೆ ಅಪಾರ ಗೌರವವಿದ್ದು, ಚಿತ್ರದಲ್ಲಿ ಯಾವುದೇ ಪಾತ್ರವನ್ನು ಅತೀ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ಚಿತ್ರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ
ಇಂತಹ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಜನರಲ್ಲಿ ಗೊಂದಲ ಮೂಡಿಸಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಇದು ದುರುದ್ದೇಶದಿಂದ ಕೂಡಿದ ಕೃತ್ಯವಾಗಿದೆ. ಪ್ರೇಕ್ಷಕರು ಕೇವಲ ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ನಂಬಬೇಕು ಮತ್ತು ಇಂತಹ ಸುಳ್ಳು ಸುದ್ದಿಗಳ ವಿರುದ್ಧ ಜಾಗೃತರಾಗಿರಬೇಕು ಎಂದು ಅವರು ವಿನಂತಿಸಿದ್ದಾರೆ. ಈಗ ಹರಿದಾಡುತ್ತಿರುವ ಫೋಟೊ, ಸಿನಿಮಾದ ಭಾಗವಲ್ಲ ಅಥವಾ ಸಿನಿಮಾದ ಪ್ರಚಾರದ ಭಾಗವೂ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಇಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ ಮತ್ತು ಇದನ್ನು ಕಾನೂನುಬದ್ಧವಾಗಿ ಕಟ್ಟುನಿಟ್ಟಾಗಿ ಎದುರಿಸಲಾಗುವುದು ಎಂದು ಆದಿತ್ಯ ಧರ್ ಹೇಳಿದ್ದಾರೆ.
🙏@RanveerOfficial @rampalarjun @duttsanjay @ActorMadhavan #AkshayeKhanna #SaraArjun @bolbedibol @AdityaDharFilms #JyotiDeshpande @LokeshDharB62 @jiostudios @B62Studios @TSeries @JioHotstar @StarGoldIndia pic.twitter.com/VMCS4ImdG4
— Aditya Dhar (@AdityaDharFilms) March 26, 2026
‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸು ಗಳಿಸಿದ್ದು, ಅದರ ಬೆನ್ನಲ್ಲೆ ಸಿನಿಮಾಕ್ಕೆ ಕೆಲ ವಿರೋಧಿಗಳು ಸಹ ಹುಟ್ಟುಕೊಂಡಿದ್ದಾರೆ. ಸಿನಿಮಾದ ಬಗ್ಗೆ ಹಲವು ರೀತಿಯ ಟ್ರೋಲ್ ವಿಡಿಯೋಗಳೂ, ಟ್ರೋಲ್ ಇಮೇಜುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಕೆಲವರು ಸಿನಿಮಾದ ಚಿತ್ರಗಳನ್ನು ರಸ್ತೆ ಸುರಕ್ಷತೆ ಇನ್ನಿತರೆ ಜಾಗೃತಿ ಕಾರ್ಯಕ್ರಮಗಳಿಗೂ ಸಹ ಬಳಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




