136 ಕೋಟಿ ರೂ. ಆಸ್ತಿ ಇದ್ದರೂ ಬಾಡಿಗೆ ಮನೆಯಲ್ಲಿದ್ದಾರೆ ನಟಿ ವಿದ್ಯಾ ಬಾಲನ್; ಇದಕ್ಕಿದೆ ಅಚ್ಚರಿಯ ಕಾರಣ

Vidya Balan: ಸುಮಾರು 136 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸೂಕ್ತ ಮನೆ ಸಿಗುವುದು ಅದೃಷ್ಟದ ವಿಚಾರ ಎಂದಿರುವ ಅವರು, ಮುಂಬೈನಲ್ಲಿ ಸಮುದ್ರ ಹಾಗೂ ಸುಂದರ ತೋಟ ಕಾಣುವ ಮನೆ ಸಿಕ್ಕಿದ್ದರಿಂದ ಅದೇ ಬಾಡಿಗೆ ಮನೆಯಲ್ಲಿಯೇ ವಾಸಿಸಲು ನಿರ್ಧರಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

136 ಕೋಟಿ ರೂ. ಆಸ್ತಿ ಇದ್ದರೂ ಬಾಡಿಗೆ ಮನೆಯಲ್ಲಿದ್ದಾರೆ ನಟಿ ವಿದ್ಯಾ ಬಾಲನ್; ಇದಕ್ಕಿದೆ ಅಚ್ಚರಿಯ ಕಾರಣ
ವಿದ್ಯಾ ಬಾಲನ್
Edited By:

Updated on: Sep 28, 2026 | 3:12 PM

ಮುಖ್ಯಾಂಶಗಳು

  • ಕೋಟಿ ಕೋಟಿ ಆಸ್ತಿ ಇದ್ದರೂ ಸ್ವಂತ ಮನೆಯಿಲ್ಲ
  • ವಿದ್ಯಾ ಬಾಲನ್ ಶಾಕಿಂಗ್ ನಿರ್ಧಾರದ ಹಿಂದಿದೆ ರಹಸ್ಯ
  • 25 ಮನೆ ನೋಡಿದರೂ ಇಷ್ಟವಾಗಲಿಲ್ಲ

ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ವಿದ್ಯಾ ಬಾಲನ್ ಕೂಡ ಒಬ್ಬರು. ‘ಕಹಾನಿ’ಯಂತಹ ಹಿಟ್ ಸಿನಿಮಾಗಳ ಮೂಲಕ ಗಮನ ಸೆಳೆದಿರುವ ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 136 ಕೋಟಿ ರೂಪಾಯಿ ಎಂದು ವರದಿ ಆಗಿದೆ. ಆದಾಗ್ಯೂ ಇಂದಿಗೂ ಅವರು ಸ್ವಂತ ಮನೆಯ ಬದಲಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ನಿರ್ಧಾರದ ಹಿಂದಿರುವ ನೈಜ ಕಾರಣವನ್ನು ಅವರು ಈ ಮೊದಲು ಬಹಿರಂಗಪಡಿಸಿದ್ದರು.

ಸಿಡ್ನಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ವಿದ್ಯಾ ಬಾಲನ್, 1100ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಉದ್ಯಮಿಗಳ ಮುಂದೆ ಅವರು ಮಾತನಾಡಿದರು. ‘ಕನಸಿನ ಮನೆ ಖರೀದಿಸುವುದು ಸಂಪೂರ್ಣವಾಗಿ ಅದೃಷ್ಟದ ವಿಚಾರ’ ಎಂದು ಅವರು ಪ್ರತಿಪಾದಿಸಿದರು. ಅಷ್ಟು ಆಸ್ತಿ ಇದ್ದರೂ ಬಾಡಿಗೆ ಮನೆಯಲ್ಲಿ ಇರಲು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬುದನ್ನು ಅವರು ವಿವರವಾಗಿ ಹಂಚಿಕೊಂಡರು.

‘ಸೂಕ್ತವಾದ ಮನೆಯನ್ನು ಹುಡುಕುವುದು ವಿಧಿಯ ಆಟ. ಸುಮಾರು 15 ವರ್ಷಗಳ ಹಿಂದೆ ನನ್ನ ತಾಯಿಯೊಂದಿಗೆ ಮನೆ ಹುಡುಕಾಟ ನಡೆಸಿದ್ದೆ. ಚೆಂಬೂರಿನಿಂದ ಶೂಟಿಂಗ್ ಜಾಗಕ್ಕೆ ಪ್ರಯಾಣಿಸುವುದನ್ನು ತಪ್ಪಿಸಲು ಬಾಂದ್ರಾ ಅಥವಾ ಜುಹು ಬಳಿ ಮನೆ ಹುಡುಕುತ್ತಿದ್ದೆ. ಆಗ ಬಜೆಟ್ ಮೀರಿ ಸಿಕ್ಕ ಮನೆಯನ್ನು ತಾಯಿಯ ಪ್ರೋತ್ಸಾಹದಿಂದ ಇಎಮ್‌ಐ ಆಧಾರದಲ್ಲಿ ಖರೀದಿಸಿದ್ದಾಗಿ’ ವಿದ್ಯಾ ಹೇಳಿದ್ದಾರೆ.

ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಮದುವೆಯಾದ ನಂತರ ವಿದ್ಯಾ ಮತ್ತೆ ಹೊಸ ಮನೆಗಾಗಿ ಹುಡುಕಾಟ ಆರಂಭಿಸಿದರು. ಸುಮಾರು 25 ಮನೆಗಳನ್ನು ನೋಡಿದರೂ ಇಬ್ಬರಿಗೂ ಒಂದೂ ಇಷ್ಟವಾಗಲಿಲ್ಲ. ಕೊನೆಗೆ ಅವರಿಗೆ ಇಷ್ಟವಾದ ಒಂದು ಮನೆ ಸಿಕ್ಕಿತು. ಆದರೆ ಅದು ಬಾಡಿಗೆಗೆ ಮಾತ್ರ ಲಭ್ಯವಿತ್ತು. ಆರಂಭದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ವಿದ್ಯಾ ಅವರಿಗೆ ಸಣ್ಣ ಪ್ರಮಾಣದ ಹಿಂಜರಿಕೆ ಇತ್ತು.

ಇದನ್ನೂ ಓದಿ: ‘ಜೈಲರ್ 2’ ಚಿತ್ರತಂಡಕ್ಕೆ ವಿದ್ಯಾ ಬಾಲನ್ ಎಂಟ್ರಿ; ಕಾಂತಾ ಪಾತ್ರದಲ್ಲಿ ನಟಿ

‘ಜನನಿಬಿಡ ಮುಂಬೈ ನಗರದಲ್ಲಿ ಸುಂದರ ತೋಟ ಹಾಗೂ ಸಮುದ್ರದ ಸೌಂದರ್ಯ ಕಾಣಿಸುವ ಮನೆ ಸಿಗುವುದು ಅತ್ಯಂತ ಅಪರೂಪ. ಹೀಗಾಗಿ ಇಬ್ಬರೂ ಮಾತುಕತೆ ನಡೆಸಿ ಕೊನೆಗೆ ಅದೇ ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧರಿಸಿದೆವು. ಪ್ರತಿ ತಿಂಗಳು ದೊಡ್ಡ ಮೊತ್ತದ ಬಾಡಿಗೆ ಸಿಗುತ್ತಿರುವುದರಿಂದ ಮಾಲೀಕರು ಸಂತೋಷವಾಗಿದ್ದಾರೆ. ಈ ಮನೆ ನಮಗೆ ಸೂಟ್ ಆಗಿದೆ’ ಎಂದಿರುವ ವಿದ್ಯಾ ಬಾಲನ್, ಖುಷಿಯಲ್ಲಿದ್ದಾರೆ. ವಿದ್ಯಾ ಬಾಲನ್ ಅವರು ‘ಜೈಲರ್ 2’ ಚಿತ್ರದಲ್ಲಿ ಕಾಂತಾ ಹೆಸರಿನ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 2:43 pm, Mon, 28 September 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us