AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀದೇವಿ ಮಗಳು ಜಾನ್ವಿ ಕಪೂರ್​​ಗೆ ಒರಿ ಜೊತೆ ಮದುವೆ ಆಗಿದೆಯಾ?

ಬಾಲಿವುಡ್ ನಟಿ ಜಾನ್ವಿ ಕಪೂರ್ ಮತ್ತು ಶಿಖರ್ ಪಹರಿಯಾ ಪ್ರೀತಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಜೊತೆ ತಮಗೆ ಮದುವೆ ಆಗಿದೆ ಎಂದು ಜಾನ್ವಿ ಒಮ್ಮೆ ಹೇಳಿದ್ದರು. ಅಷ್ಟಕ್ಕೂ ಅವರು ಈ ರೀತಿ ಹೇಳಿದ್ದು ಯಾಕೆ? ಆ ಘಟನೆ ನಡೆದಿದ್ದು ಎಲ್ಲಿ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಶ್ರೀದೇವಿ ಮಗಳು ಜಾನ್ವಿ ಕಪೂರ್​​ಗೆ ಒರಿ ಜೊತೆ ಮದುವೆ ಆಗಿದೆಯಾ?
Orry, Janhvi Kapoor
ಮದನ್​ ಕುಮಾರ್​
|

Updated on: Aug 31, 2025 | 10:01 AM

Share

ಲೆಜೆಂಡರಿ ನಟಿ ಶ್ರೀದೇವಿ ಅವರ ಮಕ್ಕಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮೊದಲ ಪುತ್ರಿ ಜಾನ್ವಿ ಕಪೂರ್ (Janhvi Kapoor) ಹೆಚ್ಚು ಫೇಮಸ್ ಆಗಿದ್ದಾರೆ. ಅವರಿಗೆ ಹಲವು ಅವಕಾಶಗಳು ಸಿಗುತ್ತಿವೆ. ಈಗ ಅವರು ನಟಿಸಿರುವ ‘ಪರಮ್ ಸುಂದರಿ’ (Param Sundari) ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅವರು ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಅಭಿನಯಿಸಿದ್ದಾರೆ. ಮೊದಲ ದಿನ ಈ ಸಿನಿಮಾಗೆ 7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ನಡುವೆ ಜಾನ್ವಿ ಕಪೂರ್ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಷಯ ಕೇಳಿಬಂದಿದೆ. ‘ಒರಿ (Orry) ನನ್ನ ಗಂಡ’ ಎಂದು ಜಾನ್ವಿ ಕಪೂರ್ ಹೇಳಿಕೊಂಡಿದ್ದರು ಎಂಬುದು ಈಗ ಗೊತ್ತಾಗಿದೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾನ್ವಿ ಕಪೂರ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಒರಿ ಅಲಿಯಾಸ್ ಒರ್ಹಾನ್ ಅವತ್ರಮಣಿ ಜೊತೆ ಬಾಲಿವುಡ್ ಸೆಲೆಬ್ರಿಟಿಗಳು ತುಂಬಾ ಕ್ಲೋಸ್ ಆಗಿದ್ದಾರೆ. ಜಾನ್ವಿ ಕಪೂರ್ ಕೂಡ ಒರಿ ಜೊತೆ ಆಪ್ತತೆ ಹೊಂದಿದ್ದಾರೆ. ಅದಕ್ಕೆ ಹಲವು ಫೋಟೋಗಳು ಸಾಕ್ಷಿ ಆಗಿವೆ. ಅಲ್ಲದೇ, ಅನೇಕ ಸ್ಥಳಗಳಿಗೆ ಅವರಿಬ್ಬರು ಒಟ್ಟಿಗೆ ತೆರಳಿದ್ದಾರೆ.

ಅಷ್ಟಕ್ಕೂ ಜಾನ್ವಿ ಕಪೂರ್ ಅವರು ‘ಒರಿ ನನ್ನ ಗಂಡ’ ಎಂದು ಹೇಳಲು ಕಾರಣ ಏನು? ಅಸಲಿಗೆ ಜಾನ್ವಿ ಕಪೂರ್ ಅವರು ಇನ್ನೂ ಮದುವೆ ಆಗಿಲ್ಲ. ಭಾರತದಲ್ಲಿ ಇದು ಎಲ್ಲರಿಗೂ ಗೊತ್ತು. ಆದರೆ ವಿದೇಶಗಳಿಗೆ ತೆರಳಿದಾಗ ಅನೇಕರು ಬಂದು ಜಾನ್ವಿ ಕಪೂರ್​​ಗೆ ಪ್ರಪೋಸ್ ಮಾಡುತ್ತಾರೆ. ಅಂಥವರಿಂದ ತಪ್ಪಿಸಿಕೊಳ್ಳಲು ತಮಗೆ ಮದುವೆ ಆಗಿದೆ ಎಂದು ಜಾನ್ವಿ ಕಪೂರ್ ಸುಳ್ಳು ಹೇಳುತ್ತಾರೆ!

ಒಮ್ಮೆ ಜಾನ್ವಿ ಕಪೂರ್ ಅವರು ಒರಿ ಜೊತೆ ವಿದೇಶದ ಒಂದು ರೆಸ್ಟೋರೆಂಟ್​​​ನಲ್ಲಿ ಕುಳಿತಿದ್ದಾಗ ಓರ್ವ ವ್ಯಕ್ತಿ ಬಂದು ಪ್ರಪೋಸ್ ಮಾಡಿದ. ‘ಇವನು ನನ್ನ ಗಂಡ’ ಎಂದು ಒರಿ ಕಡೆಗೆ ಜಾನ್ವಿ ಕಪೂರ್ ಕೈ ತೋರಿಸಿದ್ದಂತೆ. ಆ ಘಟನೆಯನ್ನು ಅವರು ಈಗ ಸಂದರ್ಶನದಲ್ಲಿ ಹೇಳಿಕೊಂಡು ನಕ್ಕಿದ್ದಾರೆ. ಒರಿ ಮತ್ತು ಜಾನ್ವಿ ಕಪೂರ್ ಕೇವಲ ಸ್ನೇಹಿತರು.

ಇದನ್ನೂ ಓದಿ: ರೀಲ್ಸ್ ಮಾಡಲು ಹೇಗಿರುತ್ತೆ ನೋಡಿ ಜಾನ್ವಿ ಕಪೂರ್ ತಯಾರಿ

ಶಿಖರ್ ಪಹರಿಯಾ ಜೊತೆ ಜಾನ್ವಿ ಕಪೂರ್ ಅವರು ಪ್ರೀತಿಯಲ್ಲಿ ಮುಳುಗಿದ್ದಾರೆ. ಅನೇಕ ಸ್ಥಳಗಳಲ್ಲಿ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಫ್ಯಾಮಿಲಿ ಜೊತೆಗೂ ಶಿಖರ್ ಪಹರಿಯಾ ಕ್ಲೋಸ್ ಆಗಿದ್ದಾರೆ. ತಮ್ಮಿಬ್ಬರ ರಿಲೇಷನ್​​ಶಿಪ್ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಅವರ ವರ್ತನೆಯಿಂದ ಎಲ್ಲವೂ ಜಗಜ್ಜಾಹೀರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ