ಬಾಕ್ಸರ್ ‘ನಿಖತ್ ಜರೀನ್’ ಅವರು ಸಲ್ಮಾನ್ ಖಾನ್(salman khan) ಅವರೊಂದಿಗೆ ಅವರ ‘ಲವ್’ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನ ಬಾಕ್ಸರ್ ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದ್ದು ‘ ಡ್ರೀಮ್ ಕಮ್ ಟ್ರೂ’ (dream come true) ಹೀಗೆಂದು ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಸಲ್ಮಾನ್ ಖಾನ್ ಕಪ್ಪು ಪ್ಯಾಂಟ್ನೊಂದಿಗೆ ಬಿಳಿ ಶರ್ಟ್ನಲ್ಲಿ ಕಾಣಿಸಿಕೊಂಡರೆ, ನಿಖತ್ ನೀಲಿ ಅಥ್ಲೀಸರ್ನಲ್ಲಿ ಕಾಣುತ್ತಾರೆ. ಈ ವಿಡಿಯೋದ ಜೊತೆಗೆ ‘ಫೈನಲಿ ಇಂತೇಜರ್ ಖತಮ್ ಹುವಾ'(finally intezar khatam hua) ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕಾಮೆಂಟ್ಗ್ಗಳು ಹರಿದು ಬರುತ್ತಿದೆ. ಅಭಿಮಾನಿಯೊಬ್ಬರು ‘ನನಗೆ ಗೊತ್ತಿಲ್ಲ, ಈ ಹಾಡಿನಲ್ಲಿ ಭಾಯ್ ನೃತ್ಯವನ್ನ ನೋಡಿ ಭಾವುಕನಾದೆ ಲವ್ ಯು ಭಾಯ್ ಹಾಗೂ ನಿಖತ್ ನಿಮಗೆ ಧನ್ಯವಾದಗಳು’ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ‘ನಿಮಗೆ ಅಭಿನಂದನೆಗಳು ಅಂತಿಮವಾಗಿ ನೀವು ಅವರನ್ನು ಭೇಟಿಯಾಗಿದ್ದೀರಿ, ದೇವರು ನಿಮಗೆ ಆಶೀರ್ವದಿಸಲಿ’ ಎಂದಿದ್ದಾರೆ.
ನಿಖತ್ ಜರೀನ್ ಅವರು ಮೇ ತಿಂಗಳಿನಲ್ಲಿ ನಡೆದಿದ್ದ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನ ಗೆದ್ದುಕೊಟ್ಟಿದ್ದಾರೆ. ನಿಖತ್ ಪದಕ ಗೆದ್ದ ನಂತರ ಸಲ್ಮಾನ್ ಖಾನ್ ಟ್ವಿಟ್ಟರ್ನಲ್ಲಿ ವಿಶ್ ಮಾಡಿದ್ದಾರೆ,‘ಚಿನ್ನದ ನಿಖತ್ಗೆ ಅಭಿನಂದನೆಗಳು’ ಎಂದು ಬರೆದಿದ್ದರು, ಇದನ್ನು ನೋಡಿದ ನಿಖತ್ ತುಂಬಾ ಖುಷಿಯಾಗಿ ನನ್ನ ಖುಷಿಯನ್ನು ದುಪ್ಪಟ್ಟುಗೊಳಿಸಿದ್ದಕ್ಕಾಗಿ ಧನ್ಯವಾದಗಳು, ಈ ಕ್ಷಣ ಶಾಶ್ವತವಾಗಿ ನನ್ನ ಹೃದಯಲ್ಲಿ ಇರುತ್ತದೆ ಎಂದಿದ್ದರು.
ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಶೆಹನಾಜ್ ಗಿಲ್ ಮತ್ತು ರಾಘವ್ ಜುಯಲ್ ನಟಿಸಿದ್ದಾರೆ, ‘ಟೈಗರ್-3′ ಸಿನಿಮಾದಲ್ಲಿ ಕತ್ರಿನಾ ಕೈಫ್ ಜೋಡಿಯಾಗಲಿದ್ದಾರೆ.
Finallyyyyy intezar khatam hua❤️@BeingSalmanKhan #fanmoment#dreamcometrue#salmankhan pic.twitter.com/pMTLDqoOno
— Nikhat Zareen (@nikhat_zareen) November 8, 2022
ಇನ್ನಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Wed, 9 November 22