ಬೋಲ್ಡ್ ದೃಶ್ಯ ಮಾಡಿ ಗಮನ ಸೆಳೆದ ಬಿಪಾಶಾಗೆ ಆಗಿತ್ತು ಕಾಸ್ಟಿಂಗ್ ಕೌಚ್ ಅನುಭವ
ಬಿಪಾಶಾ ಬಸು ಅವರು 20 ವರ್ಷಗಳಿಗೂ ಹೆಚ್ಚು ಕಾಲ ಸಿನಿಮಾ ರಂಗದಲ್ಲಿ ಇದ್ದರು. ಅವರು ತಮ್ಮ ಬೋಲ್ಡ್ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ, ಕೆಲವು ನಿರ್ಮಾಪಕರಿಂದ ಕಿರುಕುಳವನ್ನು ಅನುಭವಿಸಿದ್ದಾರೆ. ಒಬ್ಬ ಖ್ಯಾತ ನಿರ್ಮಾಪಕ ಅವರಿಗೆ ಅನುಚಿತ ಸಂದೇಶಗಳನ್ನು ಕಳುಹಿಸಿದ್ದರು ಎಂದು ಬಿಪಾಶಾ ಹೇಳಿದ್ದಾರೆ. ಈ ಘಟನೆಯ ನಂತರ ಅವರು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ದರು.
ಬಿಪಾಶಾ ಬಸು ಅವರು ಸಿನಿಮಾ ರಂಗದಲ್ಲಿದ್ದು 20 ವರ್ಷಗಳ ಮೇಲಾಗಿದೆ. ಇತ್ತೀಚೆಗೆ ಅವರು ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಮಾಡೆಲ್, ನಟಿ. ಅವರು ನಾನ್ಸೆನ್ಸ್ ಟಾಕ್ ಆಡಿದ್ದು ಕಡಿಮೆ. ಅವರು ಬೋಲ್ಡ್ ಪಾತ್ರಗಳ ಮೂಲಕ ಸಾಕಷ್ಟು ಬಾರಿ ಸುದ್ದಿ ಆಗಿದ್ದು ಇದೆ. ಅವರು ಕೂಡ ಈ ಮೊದಲು ಕಾಸ್ಟಿಂಗ್ ಕೌಚ್ ಅನುಭವ ಎದುರಿಸಿದ್ದರು.
ಬಿಪಾಶಾ ಬಸು ಹಲವು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಟ್ ದೃಶ್ಯಗಳನ್ನು ಮಾಡಲು ಅವರು ಎಂದಿಗೂ ಹಿಂದೇಟು ಹಾಕಲ್ಲ. ಇದು ಬಣ್ಣ ಹಚ್ಚಿದಾಗ ಮಾತ್ರ. ಆದರೆ, ಕೆಲವರು ಬಿಪಾಶಾ ಅವರನ್ನು ನೋಡುವ ದೃಷ್ಟಿ ಬೇರೆಯದೇ ಇತ್ತು. ಈ ಕಾರಣಕ್ಕೆ ಅವರು ಕೆಟ್ಟ ಅನುಭವ ಪಡೆಯಬೇಕಾಗಿತು. ಖ್ಯಾತ ನಿರ್ಮಾಪಕರೊಬ್ಬರು ಅವರಿಗೆ ಕಿರುಕುಳ ನೀಡಿದ್ದರು.
‘ನಾನು ಆಗಿನ್ನೂ ಯುವತಿ ಆಗಿದ್ದೆ. ನಾನು ಒಬ್ಬಳೇ ಉಳಿದುಕೊಳ್ಳುತ್ತಿದ್ದೆ. ನಾನು ಖ್ಯಾತ ನಿರ್ಮಾಪಕರ ಜೊತೆ ಸಿನಿಮಾ ಸಹಿ ಮಾಡಿದೆ. ‘ನಿಮ್ಮ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ನಿರ್ಮಾಪಕರು ಪದೇ ಪದೇ ನನಗೆ ಮೆಸೇಜ್ ಮಾಡುತ್ತಿದ್ದರು. ನನಗೆ ಇದು ವಿಚಿತ್ರ ಎನಿಸಿತು. ನಾನು ಅದನ್ನು ನಿರ್ಲಕ್ಷಿಸಿದೆ. ಕೆಲವು ದಿನಗಳ ಬಳಿಕ ನಿರ್ಮಾಪಕರು ಮತ್ತದೇ ಸಂದೇಶ ಕಳುಹಿಸಿದರು’ ಎಂದಿದ್ದಾರೆ ಬಿಪಾಶಾ
‘ನಾನು ನನ್ನ ಸೆಕ್ರೆಟರಿಗೆ ಕರೆ ಮಾಡಿ ಕೇಳಿದೆ. ಯಾಕೆ ಈ ನಿರ್ಮಾಪಕರು ನನ್ನ ನಗುವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಗೊತ್ತೇ ಎಂದು ಕೇಳಿದೆ. ಇದೇ ಸಂದೇಶವನ್ನು ನಿರ್ಮಾಪಕರಿಗೆ ಕಳುಹಿಸಿದೆ. ತಪ್ಪಾಗಿ ಈ ಸಂದೇಶವನ್ನು ನಿಮಗೆ ಕಳುಹಿಸಿದೆ ಎಂದು ಅವರಿಗೆ ಹೇಳಿದೆ. ಆದರೆ, ಅದು ಕೆಲಸ ಮಾಡಿತು. ಆ ಬಳಿಕ ಯಾವುದೇ ಸಂದೇಶ ಬರಲಿಲ್ಲ. ಆ ಬಳಿಕ ಸಿನಿಮಾನ ಬಿಟ್ಟೆ. ನಾನು ಅಡ್ವಾನ್ಸ್ ಹಣ ಹಿಂದಿರುಗಿಸಲು ಹೋದಾಗ ಅವರು ತೆಗೆದುಕೊಳ್ಳಲಿಲ್ಲ’ ಎಂದಿದ್ದರು ಬಿಪಾಶಾ.
ಇದನ್ನೂ ಓದಿ: ಬಿಪಾಶಾ ಬಸು ಮಗಳ ಹೃದಯದಲ್ಲಿ ದೊಡ್ಡ ರಂಧ್ರ; ಲೈವ್ನಲ್ಲೇ ಕಣ್ಣೀರಿಟ್ಟ ನಟಿ
‘ಬಿಪಾಶಾ’ ಬಣ್ಣದ ಲೋಕಕ್ಕೆ ಬಂದಿದ್ದು 2001ರಲ್ಲಿ. ‘ಅಜ್ನಬೀ’ ಅವರ ಮೊದಲ ಸಿನಿಮಾ. ‘ರಾಜ್’, ‘ಜಿಸ್ಮ್’ ರೀತಿಯ ಸಿನಿಮಾಗಳನ್ನು ಅವರು ಮಾಡಿದರು. ಇತ್ತೀಚೆಗೆ ಅವರು ನಟನೆಯಿಂದ ದೂರವೇ ಇದ್ದಾರೆ. ಅವರಯ 2016ರಲ್ಲಿ ಕರಣ್ ಸಿಂಗ್ ಗ್ರೋವರ್ನ ಮದುವೆ ಆದರು. ಈ ದಂಪತಿಗೆ ಒಂದು ಮಗು ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.