ಈ ವರ್ಷ ಚಿತ್ರರಂಗದಲ್ಲಿ ನಡೆದ ಪ್ರಮುಖ ವಿಚ್ಛೇದನಗಳು ಇವು..

Celebrity Divorce: ಈ ವರ್ಷ ಹಲವು ಸಿನಿಮಾ ತಾರೆಯರು ಪರಸ್ಪರ ವಿಚ್ಛೇದನ ಪಡೆದುಕೊಂಡರು. ದಶಕಗಳ ದಾಂಪತ್ಯವನ್ನು ಸಹ ಕೆಲವು ಸೆಲೆಬ್ರಿಟಿಗಳು ಅಂತ್ಯಗೊಳಿಸಿದರು ಇಲ್ಲಿದೆ ನೋಡಿ ಪಟ್ಟಿ.

ಈ ವರ್ಷ ಚಿತ್ರರಂಗದಲ್ಲಿ ನಡೆದ ಪ್ರಮುಖ ವಿಚ್ಛೇದನಗಳು ಇವು..
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Nov 28, 2024 | 2:13 PM

ಈ ವರ್ಷ ಚಿತ್ರರಂಗದಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಆ ಪೈಕಿ ಸೆಲೆಬ್ರಿಟಿಗಳ ವಿಚ್ಛೇದನ ಕೂಡ ಹೈಲೈಟ್ ಆಗಿದೆ. ಅನೇಕ ಸೆಲೆಬ್ರಿಟಿಗಳು ಈ ವರ್ಷ ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಕೆಲವು ಸೆಲೆಬ್ರಿಟಿಗಳು ವಿಚ್ಛೇದನದ ಹಾದಿ ಹಿಡಿದಿದ್ದಾರೆ. ಕೆಲವು ವಿಚ್ಛೇದನಗಳು ಶಾಕಿಂಗ್ ಎನಿಸಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಎಆರ್ ರೆಹಮಾನ್ ಹಾಗೂ ಸೈರಾ ಬಾನು

ಎಆರ್ ರೆಹಮಾನ್ ಹಾಗೂ ಸೈರಾ ಬಾನು ಇತ್ತೀಚೆಗೆ ವಿಚ್ಛೇದನ ಘೋಷಣೆ ಮಾಡಿದರು. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ದಂಪತಿಗೆ ಮೂವರು ಮಕ್ಕಳು. 1995ರಲ್ಲಿ ಈ ದಂಪತಿ ವಿವಾಹ ಆಗಿದ್ದರು. ಈಗ ಏಕಾ ಏಕಿ ಬೇರೆ ಆಗುವ ಬಗ್ಗೆ ಘೋಷಣೆ ಮಾಡಿದ್ದಾರೆ. ವಕೀಲೆ ವಂದನಾ ಶಾ ಅವರು ದಂಪತಿಯ ವಿಚ್ಛೇದನ ವಿಚಾರ ತಿಳಿಸಿದ್ದಾರೆ.

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ

ಕನ್ನಡದ ಸೆಲೆಬ್ರಿಟಿ ಜೋಡಿಯಾದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ವಿಚ್ಛೇದನ ಪಡೆಯೋ ಘೋಣೆ ಮಾಡಿದರು. ಬಿಗ್ ಬಾಸ್ನಲ್ಲಿ ಪರಸ್ಪರ ಪರಿಚಯ ಆದ ಇವರು ಆ ಬಳಿಕ ಪ್ರೀತಿಸಿ ಮದುವೆ ಆದರು. ಆದರೆ, ಈಗ ಇವರ ಪ್ರೀತಿ ಕೊನೆ ಆಗಿದೆ.

ಧನುಶ್-ಐಶ್ವರ್ಯಾ ರಜನೀಕಾಂತ್

ತಮಿಳಿನ ಖ್ಯಾತ ನಟ ಧನುಶ್ ಮತ್ತು ರಜನೀಕಾಂತ್ ಪುತ್ರಿ ಐಶ್ವರ್ಯಾ ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ. 2004 ರಲ್ಲಿ ವಿವಾಹವಾಗಿದ್ದ ಈ ಜೋಡಿ ತಮ್ಮ 20 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ.

ದಿಲ್ಜೀತ್ ಹಾಗೂ ನಿಖಿಲ್ ಪಟೇಲ್

ಹಿಂದಿ ಕಿರುತೆರೆ ನಟಿ ದಿಲ್ಜೀತ್ ಕೌರ್ ಹಾಗೂ ನಿಖಿಲ್ ಪಟೇಲ್ ಅವರು 2024ರಲ್ಲಿ ಬೇರೆ ಆಗುವ ನಿರ್ಧಾರ ಮಾಡಿದರು. ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಹಾಗೂ ಪ್ರತ್ಯಾರೋಪ ಮಾಡುತ್ತಿದ್ದಾರೆ.

ಸಾನಿಯಾ ಮಿರ್ಜಾ ಹಾಗೂ ಶೋಯಭ್ ಮಲಿಕ್

ಸಾನಿಯಾ ಮಿರ್ಜಾ ಹಾಗೂ ಶೋಯಭ್ ಮಲ್ಲಿಕ್ 2010ರಲ್ಲಿ ವಿವಾಹ ಆದರು. ಹೈದರಾಬಾದ್ನಲ್ಲಿ ಇವರ ಮದುವೆ ನೆರವೇರಿತ್ತು. ಸಾನಿಯಾನ ತೊರೆದ ಶೋಯಭ್ ಪಾಕ್ ನಟಿಯನ್ನು ಮದುವೆ ಆಗಿದ್ದಾರೆ.

ಹಾರ್ದಿಕ್ ಹಾಗೂ ನತಾಶಾ

ಹಾರ್ದಿಕ್ ಪಾಂಡ್ಯ ಹಾಗೂ ಮಾಡೆಲ್ ನಟಾಶಾ ಅವರು ಬೇರೆ ಆಗುವ ನಿರ್ಧಾರ ಆಡಿದರು. ಇವರು ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಬಳಿಕ ದೊಡ್ಡದಾದ ಪಾರ್ಟಿ ಕೂಡ ಅರೆಂಜ್ ಮಾಡಿದ್ದರು. ಈ ದಂಪತಿಗೆ ಅಗಸ್ತ್ಯ ಹೆಸರಿನ ಮಗ ಇದ್ದಾನೆ.

ಅರ್ಜುನ್ ಕಪೂರ್ ಹಾಗೂ ಮಲೈಕಾ

ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ವಿವಾಹ ಆಗಿಲ್ಲ. ಆದರೆ, ಇಬ್ಬರೂ ಲಿವ್ ಇನ್ ರಿಲೇಶನ್ಶಿಪ್ನಲ್ಲಿ ಇದ್ದರು. ಇವರು ಪತಿ-ಪತ್ನಿಗಿಂತ ಆಪ್ತವಾಗಿದ್ದರು. ಇವರು ಬೇರೆ ಆಗುವ ನಿರ್ಧಾರ ಮಾಡಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ಇಶಾ ಡಿಯೋಲ್

ಇಶಾ ಡಿಯೋಲ್ ಅವರು ಉದ್ಯಮಿ ಭರತ್ ಅವರನ್ನು ವಿವಾಹ ಆಗಿದ್ದರು. ಆದರೆ, ಇವರು ಬೇರೆ ಆಗುವ ನಿರ್ಧಾರಕ್ಕೆ ಬಂದರು.

ಜಯಂ ರವಿ

ತಮಿಳಿನ ಖ್ಯಾತ ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಇತ್ತೀಚೆಗೆ ಬೇರೆ ಆದರು. ಇವರ ವಿಚ್ಛೇದನ ಅನೇಕರಿಗೆ ಶಾಕಿಂಗ್ ಎನಿಸಿದೆ. ತಮ್ಮ ಕೇಳದೇ ಈ ನಿರ್ಧಾರ ಘೋಷಣೆ ಮಾಡಿದ್ದಾರೆ ಎಂದು ಆರತಿ ಆರೋಪ ಮಾಡುತ್ತಾ ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್
ಟೀಂ ಇಂಡಿಯಾವನ್ನು ಅವರ ನೆಲದಲ್ಲೇ ಸೋಲಿಸಬೇಕು; ಶೋಯೆಬ್ ಅಖ್ತರ್