
Celebrity Moms
ನಟಿ ದೀಪಿಕಾ ಪಡುಕೋಣೆಯ ಎರಡನೇ ಪುತ್ರಿ ದೇವಿ ಇದೇ ವರ್ಷ ಜನ್ಮಿಸಿದ್ದಾರೆ. ಸೆಪ್ಟೆಂಬರ್ 19ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅವರ ಮೊದಲನೇ ಮಗುವಿಗೆ ದುವಾ ಎಂದು ಹೆಸರಿಟ್ಟರೆ, ಎರಡನೇ ಮಗುವಿಗೆ ದೇವಿ ಎಂದು ಹೆಸರಿಟ್ಟಿದ್ದಾರೆ.
ನಟಿ ಸಮಂತಾ ಋತ್ ಪ್ರಭು ಈ ವರ್ಷ ತಾಯಿ ಆಗಿದ್ದಾರೆ. ಮೊದಲ ಮದುವೆ ಮುರಿದು ಬಿದ್ದ ಬಳಿಕ ಕಳೆದ ವರ್ಷ ರಾಜ್ ನಿಧಿಮೋರು ಜೊತೆ ವಿವಾಹವಾದರು. ನಿನ್ನೆ ಸಮಂತಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಖ್ಯಾತ ನಟ ಅನಿಲ್ ಕಪೂರ್ ಪುತ್ರಿ ಮತ್ತು ನಟಿ ಸೋನಂ ಕಪೂರ್ ಸಹ ಈ ವರ್ಷ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. 2022 ರಲ್ಲಿ ಮೊದಲ ಮಗ ಜನಿಸಿದ್ದ, ಬಳಿಕ ಈಗ ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಅವರಿಗೆ ಎರಡನೇ ಪುತ್ರ ಜನಿಸಿದ್ದಾನೆ.
ತೆಲುಗು, ಬೆಂಗಾಲಿ, ಹಿಂದಿ ಸಿನಿಮಾಗಳಲ್ಲಿ ನಾಯಕಿಯಾಗಿ ನಟನೆ ಮಾಡಿರುವ ನಟಿ ಪೂಜಾ ಬ್ಯಾನರ್ಜಿ ಇದೇ ವರ್ಷ ತಾಯಿ ಆಗಿದ್ದಾರೆ. ಇದೇ ವರ್ಷ ಆಗಸ್ಟ್ನಲ್ಲಿ ಎರಡನೇ ಮಗುವಿಗೆ ಪೂಜಾ ಜನ್ಮ ನೀಡಿದ್ದಾರೆ.
ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಇದೇ ವರ್ಷ ತಂದೆ ಆಗಿದ್ದಾರೆ. ಅವರ ಪತ್ನಿ, ವೈದ್ಯೆ ಧನ್ಯತಾ ಅವರು ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿಗೆ ‘ಎರೆಯ’ ಎಂದು ಹೆಸರಿಡಲಾಗಿದೆ.