
ಚೈತ್ರಾ ಕುಂದಾಪುರ ಹಾಗೂ ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟೂ ದಿನ ಕಿರಿಕ್ಗಳನ್ನು ಮಾಡಿಕೊಂಡಿದ್ದರು. ಇವರ ಕಿರಿಕ್ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಕೊನೆಯ ದಿನಗಳಲ್ಲಿ ಇದು ಸಹಜ ಸ್ಥಿತಿಗೆ ಬಂದಿತ್ತು. ಇಬ್ಬರೂ ಈಗ ‘ಬಾಯ್ಸ್ vs ಗರ್ಲ್ಸ್’ ವೇದಿಕೆ ಏರಿದ್ದಾರೆ. ಈ ವೇದಿಕೆ ಮೇಲೆ ಚೈತ್ರಾ ಕುಂದಾಪುರ ಹಾಗೂ ರಜತ್ ಕಿರಿಕ್ ಮಾಡಿಕೊಂಡಿದ್ದಾರೆ. ಹಾಗಂತ ಇದು ಗಂಭೀರ ಕಿರಿಕ್ ಆಗಿರಲಿಲ್ಲ.
ಚೈತ್ರಾ ಕುಂದಾಪುರ ಅವರಿಗೆ ಹೊರಗೆ ಬೇರೆಯದೇ ರೀತಿಯ ಇಮೇಜ್ ಇತ್ತು. ಆದರೆ, ಬಿಗ್ ಬಾಸ್ಗೆ ಹೋಗಿ ಬಂದ ಬಳಿಕ ಅವರನ್ನು ನೋಡುವ ದೃಷ್ಟಿ ಬದಲಾಗಿದೆ. ಅವರಿಗೆ ಪಾಸಿಟಿವ್ ಇಮೇಜ್ ಸಿಕ್ಕಿದೆ. ಅವರು ದೊಡ್ಮನೆಯಲ್ಲಿ ಇರುವಷ್ಟು ದಿನ್ ರಜತ್ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಈಗ ಅದು ಫನ್ ಆಗಿ ಬದಲಾಗಿದೆ. ಇಬ್ಬರೂ ಕೋಳಿ ಜಗಳ ಮಾಡಿಕೊಳ್ಳುತ್ತಿದ್ದಾರೆ.
‘ಬಾಯ್ಸ್ vs ಗರ್ಲ್ಸ್’ ವೇದಿಕೆ ಮೇಲೆ ರಜತ್ ಹಾಗೂ ಚೈತ್ರಾ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ. ಆ ಬಳಿಕ ವೇದಿಕೆ ಮೇಲೆ ಚರ್ಚೆ ನಡೆಯಿತು. ‘ರಜತ್ ಅವರಿಗೆ ತುಂಬಾ ಹಿಂದೆಯೇ ಮದುವೆ ಆಗಿದೆ. ಇಲ್ಲದಿದ್ದರೆ ನೀವೇನಾದರೂ ಜೋಡಿ ಆಗಿದ್ದರೆ ತುಂಬಾನೇ ಸಮಸ್ಯೆ ಆಗುತ್ತಿತ್ತು’ ಎಂದರು ಅನುಪಮಾ ಗೌಡ. ‘ಇದು ಸಾಧ್ಯವೇ ಇಲ್ಲ. ನಾನು ಅಷ್ಟೆಲ್ಲ ಗತಿ ಗೆಟ್ಟಿರಲಿಲ್ಲ’ ಎಂದರು ಚೈತ್ರಾ.
ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಸದ್ಯ ಇಬ್ಬರ ಕೋಳಿ ಜಗಳ ನೋಡಿ ಎಲ್ಲರೂ ನಕ್ಕಿದ್ದಾರೆ. ಚೈತ್ರಾ ಕುಂದಾಪುರ ಅವರು ಈ ವಿಶೇಷ ಎಪಿಸೋಡ್ಗಾಗಿ ಡ್ಯಾನ್ಸ್ ಕಲಿತು ಮಾಡಿದ್ದಾರೆ. ಅವರ ಡ್ಯಾನ್ಸ್ ಅನೇಕರಿಗೆ ಇಷ್ಟ ಆಗಿದೆ.
ಇದನ್ನೂ ಓದಿ: ‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್ ಬಗ್ಗೆ ರಜತ್ ಸ್ಪಷ್ಟನೆ
ಬಿಗ್ ಬಾಸ್ನಲ್ಲಿ ರಜತ್ ಹಾಗೂ ಚೈತ್ರಾ ಗಮನ ಸೆಳೆದರು. ಈಗ ಹೊಸ ರಿಯಾಲಿಟಿ ಶೋ ಮೂಲಕ ಇವರ ಧೂಳೆಬ್ಬಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.