‘ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ’; ಐಶ್ವರ್ಯಾ ವಿರುದ್ಧ ರೌದ್ರಾವತಾರ ತಾಳಿದ ಚೈತ್ರಾ ಕುಂದಾಪುರ

ಕ್ಯಾಪ್ಟನ್​ ರೂಮಿಗೆ ಬೇರೆಯವರನ್ನು ಕರೆದುಕೊಂಡು ಹೋಗುವಂತಿಲ್ಲ. ಆದರೆ ಗೇಮ್​ ಬಗ್ಗೆ ತಂತ್ರಗಾರಿಕೆ ಮಾಡಲು ಚೈತ್ರಾ ಅವರನ್ನು ಕ್ಯಾಪ್ಟನ್ ರೂಮಿಗೆ ತ್ರಿವಿಕ್ರಮ್ ಕರೆದುಕೊಂಡು ಹೋಗಿದ್ದಾರೆ. ಇದರಿಂ ಐಶ್ವರ್ಯಾ ಹಾಗೂ ಚೈತ್ರಾ ಮಧ್ಯೆ ಕಿರಿಕ್ ಆಗಿದೆ.

‘ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ’; ಐಶ್ವರ್ಯಾ ವಿರುದ್ಧ ರೌದ್ರಾವತಾರ ತಾಳಿದ ಚೈತ್ರಾ ಕುಂದಾಪುರ
ಬಿಗ್ ಬಾಸ್
Follow us
|

Updated on: Oct 25, 2024 | 7:02 AM

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಜೋರು ಧ್ವನಿಯಲ್ಲಿ ಮಾತನಾಡುತ್ತಾರೆ. ಕೂಗಾಟ, ಕಿರುಚಾಟ ಮಾಡುತ್ತಾ ಸುದ್ದಿ ಆಗುತ್ತಾರೆ. ಇದು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಅವರ ಕೋಪವನ್ನು ಅನೇಕರು ಸಹಿಸಿಕೊಂಡಿದ್ದಾರೆ. ಅವರ ಅರಚಾಟಕ್ಕೆ ಕೆಲವರು ಬೆಚ್ಚಿ ಬಿದ್ದಿದ್ದೂ ಇದೆ. ಈಗ ದೊಡ್ಮನೆಯಲ್ಲಿ ಚೈತ್ರಾ ಹಾಗೂ ಐಶ್ವರ್ಯಾ ಮಧ್ಯೆ ಕಿತ್ತಾ ನಡೆದಿದೆ.

ಈ ಬಾರಿ ತ್ರಿವಿಕ್ರಂ ಹಾಗೂ ಐಶ್ವರ್ಯಾ ಕ್ಯಾಪ್ಟನ್ ಆಗಿದ್ದಾರೆ. ಈ ರೀತಿ ಜೋಡಿಯೊಂದು ಒಟ್ಟಿಗೆ ಕ್ಯಾಪ್ಟನ್ ಆಗಿರೋದು ಇದೇ ಮೊದಲು. ಇಬ್ಬರಿಗೂ ಕ್ಯಾಪ್ಟನ್ ರೂಂ ಬಳಕೆ ಮಾಡುವ ಅಧಿಕಾರ ಇದೆ. ಕ್ಯಾಪ್ಟನ್ ರೂಂನಲ್ಲಿ ವಿಶೇಷ ಸವಲತ್ತುಗಳು ಇರುತ್ತವೆ. ನಿಯಮಗಳ ಪ್ರಕಾರ ಕ್ಯಾಪ್ಟನ್ ಹೊರತು ಯಾರೂ ಕೂಡ ಈ ರೂಂನ ಬಳಕೆ ಮಾಡಬಾರದು. ಆದರೆ, ಈ ನಿಯಮವನ್ನು ತ್ರಿವಿಕ್ರಂ ಮುರಿದಿದ್ದಾರೆ.

ಚೈತ್ರಾ ಅವರನ್ನು ಕ್ಯಾಪ್ಟನ್​ ರೂಂಗೆ ಕರೆದುಕೊಂಡು ಹೋಗಿದ್ದಾರೆ ತ್ರಿವಿಕ್ರಂ. ಇದನ್ನು ಗಮನಿಸಿದ ಐಶ್ವರ್ಯಾ ಅವರು ಚೈತ್ರಾ ಅವರನ್ನು ಕರೆದುಕೊಂಡು ಬರಲು ಪ್ರಯತ್ನಿಸಿದರು. ‘ಕ್ಯಾಪ್ಟನ್ ಹೊರತುಪಡಿಸಿ ಮತ್ಯಾರೂ ಆ ರೂಂನ ಬಳಕೆ ಮಾಡುವಂತಿಲ್ಲ’ ಎಂದು ಐಶ್ವರ್ಯಾ ಹೇಳಿದರು. ಆದರೆ, ಇದನ್ನು ತ್ರಿವಿಕ್ರಂ ಒಪ್ಪಲಿಲ್ಲ.

ಆ ಬಳಿಕ ಐಶ್ವರ್ಯಾ ಅವರು, ಚೈತ್ರಾನ ಕೈ ಹಿಡಿದು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಚೈತ್ರಾ ಸಿಟ್ಟಾದರು. ‘ಕೈ ಮುಟ್ಟಿ ಮಾತನಾಡಬೇಡಿ. ನನ್ನ ಕಾಲು ಮುಟ್ಟಬೇಡಿ’ ಎಂದು ಕೂಗಾಡಿದರು ಚೈತ್ರಾ. ಆ ಬಳಿಕ ಸುಮ್ಮನಾದರು ಐಶ್ವರ್ಯಾ. ನಂತರ ತ್ರಿವಿಕ್ರಂ ಜೊತೆ ಸಿಟ್ಟು ಮಾಡಿಕೊಂಡರು. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ಬಿಗ್ ಬಾಸ್​ನಲ್ಲಿ ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ

‘ಬಿಗ್ ಬಾಸ್​’ನಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಕಿರಿಕ್​ಗಳು ಆಗುತ್ತಿವೆ. ಈ ಘಟನೆಗಳು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕುತ್ತಿದೆ. ಸ್ವಲ್ಪ ಹಾಸ್ಯದ ಅಂಶವೂ ಇರಬೇಕು ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಈ ವಾರ ಕಿಚ್ಚ ಸುದೀಪ್ ಅವರು ನಿರೂಪಣೆಗೆ ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಮೂಡಿದೆ. ಇತ್ತೀಚೆಗೆ ಅವರ ತಾಯಿ ನಿಧನ ಹೊಂದಿರುವುದರಿಂದ ಈ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ಬೆಂಗಳೂರು, ಒಂದಾದಮೇಲೊಂದು ಕಟ್ಟಡ ಕುಸಿಯುವ ಭೀತಿ: ಮತ್ತೊಂದು ಕಟ್ಟಡ ಬಿರುಕು
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ದಿವ್ಯ ನಿರ್ಲಕ್ಷ್ಯ ತೊರಿ ರನೌಟ್​ಗೆ ಬಲಿಯಾದ ಕಿವೀಸ್ ನಾಯಕಿ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಚನ್ನಪಟ್ಟಣದಲ್ಲಿ ನಮ್ಮ ಎದುರಾಳಿ ಯಾರೇ ಆದರೂ ಯೋಗೇಶ್ವರ್ ಗೆಲ್ತಾರೆ: ಸಿಎಂ
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಯೋಗೇಶ್ವರ್​ರನ್ನು ಬಿಜೆಪಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ: ಸೋಮಶೇಖರ್
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪಕ್ಷಾಂತರಿ ಯೋಗೇಶ್ವರ್ ಬಿಜೆಪಿಯಲ್ಲಿ ಒಬ್ಬ ನೆಂಟನಂತಿದ್ದರು: ಆರ್ ಅಶೋಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಚಾರ ಮಾಡುವ ಅವಕಾಶ ಎಲ್ಲರಿಗೂ ಇದೆ: ಶಾಸಕ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಕುಸಿದು ಬಿದ್ದ ಹನುಮಂತ; ಟಾಸ್ಕ್​ ವೇಳೆ ನಡೆಯಿತು ಅವಘಡ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಅಪ್ಪನನ್ನು ಕೂರಿಸಿಕೊಂಡು ಸ್ಕೂಟಿ ಓಡಿಸಿದ ಬಾಲಕಿ; ವಿಡಿಯೋಗೆ ಭಾರೀ ವಿರೋಧ
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಚನ್ನಪಟ್ಟಣಕ್ಕೆ 2 ಬಾರಿ ಶಾಸಕನಾಗಿದ್ದ ಕುಮಾರಸ್ವಾಮಿ ಕೊಡುಗೆ ಏನು?ಶಿವಕುಮಾರ್
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ವೋಟು ಕೇಳುತ್ತೇನೆ: ಅನ್ನಪೂರ್ಣ