ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಪ್ರಶಾಂತ್​ ತಮಗೆ ಮೋಸವಾಗಿದೆ ಎಂದು ಆರೋಪಿಸಿದ್ದರು. ಪ್ರತಿಭಟನೆಯ ರೂಪದಲ್ಲಿ ಅವರು ಊಟ ಬಿಟ್ಟಿದ್ದರು 36 ಗಂಟೆ ಮನೆಯಲ್ಲಿ ಊಟ ಮಾಡುವುದಿಲ್ಲ ಎಂದು ಶಪಥ ಮಾಡಿದ್ದರು.

ಇದಿನ್ನೂ ಕೆಟ್ಟದಾಗಿ ಕಾಣಿಸುತ್ತಿದೆ; ಪ್ರಶಾಂತ್​ ಸಂಬರಗಿ ಗುಣಗಳು ಚಕ್ರವರ್ತಿಗೆ ಅಸಹ್ಯ ಮೂಡಿಸುತ್ತಿವೆ
ಪ್ರಶಾಂತ್ ಸಂಬರಗಿ
Updated By: ಮದನ್​ ಕುಮಾರ್​

Updated on: May 01, 2021 | 8:53 AM

ಪ್ರಶಾಂತ್​ ಸಂಬರಗಿ ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತಾರೆ. ಇದನ್ನು ನೋಡಿ ಮನೆಯವರು ಬೇಸತ್ತು ಹೋಗಿದ್ದಾರೆ. ಒಮ್ಮೆ ಜಗಳ ಆಡುವ ಅವರು ಐದು ನಿಮಿಷ ಬಿಟ್ಟು ನಗು ನಗುತ್ತಾ ಮಾತನಾಡುತ್ತಾರೆ. ನಗುತ್ತಿರುವ ಮರುಕ್ಷಣವೇ ಅವರು ಜಗಳಕ್ಕೆ ನಿಂತು ಬಿಡುತ್ತಾರೆ. ಕೆಲವರನ್ನು ಬೈದು ನಂತರ ಮತ್ತೆ ಮತ್ತೆ ಅವರ ಹಿಂದೇ ಹೋಗುತ್ತಿದ್ದಾರೆ. ಇದು ಚಕ್ರವರ್ತಿ ಚಂದ್ರಚೂಡ್​ಗೆ ಅಸಹ್ಯವಾಗಿ ಕಾಣಿಸಿದೆ. ಇದನ್ನು ಅವರು ನೇರವಾಗಿಯೇ ಹೇಳಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಪ್ರಶಾಂತ್​ ತಮಗೆ ಮೋಸವಾಗಿದೆ ಎಂದು ಆರೋಪಿಸಿದ್ದರು. ಪ್ರತಿಭಟನೆಯ ರೂಪದಲ್ಲಿ ಅವರು ಊಟ ಬಿಟ್ಟಿದ್ದರು. 36 ಗಂಟೆ ಮನೆಯಲ್ಲಿ ಊಟ ಮಾಡುವುದಿಲ್ಲ ಎಂದು ಶಪಥ ಮಾಡಿದ್ದರು. ಬಿಗ್​ ಬಾಸ್​ ಆದೇಶ ಬಂದ ನಂತರದಲ್ಲಿ ಅವರು ಊಟ ಮಾಡಿದ್ದಾರೆ. ಅರವಿಂದ್ ಬಗ್ಗೆ ನೇರವಾಗಿ ಅಸಮಾಧಾನ ಹೊರ ಹಾಕಿದ ನಂತರ ದಿವ್ಯಾ ಉರುಡುಗ ಜತೆ ಮಾತನಾಡಲು ಮುಂದಾಗಿದ್ದರು ಪ್ರಶಾಂತ್​. ಈ ವೇಳೆ ಪ್ರಶಾಂತ್​ಗೆ ದಿವ್ಯಾ ಉಲ್ಟಾ ಮಾತನಾಡಿ ಕಳುಹಿಸಿದ್ದಾರೆ.

ಇದನ್ನು ಪ್ರಶಾಂತ್​ ನೇರವಾಗಿ ಬಂದು ಚಕ್ರವರ್ತಿ ಚಂದ್ರಚೂಡ್​ ಬಳಿ ವರದಿ ಮಾಡಿದ್ದಾರೆ. ಆಗ ಪ್ರಶಾಂತ್​ಗೆ ಚಂದ್ರಚೂಡ್​ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ. ಅರವಿಂದ್​ ಬಗ್ಗೆ ಉಲ್ಟಾ ಮಾತನಾಡಿದರೆ ದಿವ್ಯಾ ಉರುಡುಗ ಬಾಯಿಗೆ ಬಂದಂತೆ ಮಾತನಾಡುತ್ತಾಳೆ ಎಂಬುದು ಗೊತ್ತಿರುವ ವಿಚಾರವೇ. ಮಂಜು ಬಗ್ಗೆ ಮಾತನಾಡಿದರೆ ದಿವ್ಯಾ ಸುರೇಶ್​ ತಿರುಗಿ ಬೀಳ್ತಾರೆ. ನಿಂಗೆ​ ಎಷ್ಟು ಸಲ ಇದೇ ರೀತಿ ಆಗೇಬೇಕು? ನೀನು ನಡೆದುಕೊಳ್ಳುತ್ತಿರುವುದು ಅರ್ಥವೇ ಆಗುತ್ತಿಲ್ಲ’ ಎಂದು ಚಕ್ರವರ್ತಿ ಹೇಳಿದ್ದಾರೆ.

‘ನಿನಗೆ ಸಂಬಂಧ ಇಲ್ಲದವರಿಗೆ ಯಾಕಿಷ್ಟು ಪ್ಯಾಂಪರಿಂಗ್​ ಮಾಡ್ತೀಯಾ? ಕೆಟ್ಟದಾಗಿ ನಡೆದುಕೊಂಡು ನಂತರ ಒಳ್ಳೆಯ ರೀತಿ ಕಾಣಿಸಲು ಪ್ರಯತ್ನ ಮಾಡುತ್ತೀಯಲ್ಲ. ಅದು ಮತ್ತೂ ಕೆಟ್ಟದಾಗಿರುತ್ತದೆ. ನಾನು ಕೆಟ್ಟ ಹೆಣ್ಣುಮಕ್ಕಳನ್ನು ಯಾವಾಗಲೂ ಗೌರವಿಸಲ್ಲ. ಯಾರಾದರೂ ನಿನ್ನ ಸೈಡ್​ಲೈನ್​ ಮಾಡಿದರೆ ಬಿಟ್ಟುಬಿಡು. ಒಂದು ಗುಡ್​ ಮಾರ್ನಿಂಗ್​-ಗುಡ್​ ನೈಟ್​ ಹೇಳು ಸಾಕಷ್ಟೇ. ನನ್ನ ಜತೆ ಮನೆಯವರು ಮಾತನಾಡದೇ ಇರುವುದಕ್ಕೇ ಇದುವೇ ಕಾರಣ’ ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಆಪ್ತ ಚಂದ್ರಚೂಡ್​ ವಿರುದ್ಧವೇ ತಿರುಗಿಬಿದ್ದ ಪ್ರಶಾಂತ್​ ಸಂಬರಗಿ; ಬಿಗ್​ ಬಾಸ್​ ಮನೆಯಲ್ಲಿ 36 ಗಂಟೆಗಳ ಉಪವಾಸ

ಅಭಿಮಾನಿಗಳಿಗೆ ಇದು ಗುಡ್​ನ್ಯೂಸ್​; ಈ ವಾರ ಮತ್ತೆ ಬಿಗ್​ ಬಾಸ್​ ವೇದಿಕೆ ಏರಲಿದ್ದಾರೆ ರಾಜೀವ್?