AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳಿಗೆ ಇದು ಗುಡ್​ನ್ಯೂಸ್​; ಈ ವಾರ ಮತ್ತೆ ಬಿಗ್​ ಬಾಸ್​ ವೇದಿಕೆ ಏರಲಿದ್ದಾರೆ ರಾಜೀವ್?

ಅನಾರೋಗ್ಯ ಕಾರಣದಿಂದ ಕಿಚ್ಚ ಸುದೀಪ್​ ಕಳೆದ ಎರಡು ವಾರ ಬಿಗ್​ ಬಾಸ್​ ನಡೆಸಿಕೊಟ್ಟಿರಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

ಅಭಿಮಾನಿಗಳಿಗೆ ಇದು ಗುಡ್​ನ್ಯೂಸ್​; ಈ ವಾರ ಮತ್ತೆ ಬಿಗ್​ ಬಾಸ್​ ವೇದಿಕೆ ಏರಲಿದ್ದಾರೆ ರಾಜೀವ್?
ಬಿಗ್​ ಬಾಸ್​ ಮನೆಯಲ್ಲಿ ರಾಜೀವ್​
ರಾಜೇಶ್ ದುಗ್ಗುಮನೆ
|

Updated on: Apr 30, 2021 | 4:22 PM

Share

ಎಂಟನೇ ವಾರ ಬಿಗ್​ ಬಾಸ್​ ಮನೆಯಿಂದ ರಾಜೀವ್​ ಹೊರ ಹೋಗಿದ್ದಾರೆ. ನಟನೆ ಹಾಗೂ ಕ್ರಿಕೆಟ್​ ಎರಡಲ್ಲೂ ಗುರುತಿಸಿಕೊಂಡಿದ್ದ ರಾಜೀವ್​ ಮನೆಯಲ್ಲಿ 50ಕ್ಕೂ ಹೆಚ್ಚು ದಿನ ಕಳೆದಿದ್ದಾರೆ. ಇದರಿಂದ ಅವರ ಕೆರಿಯರ್​ಗೆ ಒಳ್ಳೆಯ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಇನ್ನು, ಅವರು ಬಿಗ್​ ಬಾಸ್​ ಮನೆಯಿಂದ ಹೊರ ಬಂದಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಈಗ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಅನಾರೋಗ್ಯ ಕಾರಣದಿಂದ ಕಿಚ್ಚ ಸುದೀಪ್​ ಕಳೆದ ಎರಡು ವಾರ ಬಿಗ್​ ಬಾಸ್​ ನಡೆಸಿಕೊಟ್ಟಿರಲಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಎಂಟನೇ ವಾರ ಬಿಗ್​ ಬಾಸ್​ ಮನೆಯಿಂದ ರಾಜೀವ್​ ಹೊರ ನಡೆದಿದ್ದರು. ಸುದೀಪ್​ ಅವರನ್ನು ಭೇಟಿ ಮಾಡದೆ ಅವರು ಹೊರ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.

ರಾಜೀವ್​ ಹಾಗೂ ಸುದೀಪ್​ ಆಪ್ತರು. ಸುದೀಪ್​ ಅವರನ್ನು ರಾಜೀವ್​ ಅಣ್ಣ ಎಂದೇ ಸಂಬೋಧಿಸುತ್ತಾರೆ. ಎಲಿಮಿನೇಟ್​ ಆದಾಗ ಸುದೀಪ್​ ಅವರನ್ನು ನೋಡಿಲ್ಲವಲ್ಲ ಎನ್ನುವ ಬೇಸರ ರಾಜೀವ್​ಗೆ ಇದೆ. ಹೀಗಾಗಿ, ರಾಜೀವ್​ ಈ ಬಾರಿ ಮತ್ತೆ ಬಿಗ್​ ಬಾಸ್​ ವೇದಿಕೆ ಏರಲಿದ್ದಾರೆ. ಹಾಗಂತ ಅವರು ಮನೆ ಒಳಗೆ ಮತ್ತೆ ಹೋಗುತ್ತಿಲ್ಲ. ಸುದೀಪ್​ ಜತೆ ಮಾತುಕತೆ ಆಡಿ ನಂತರ ವೇದಿಕೆಯಿಂದ ಕೆಳಗಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಬಿಗ್​ ಬಾಸ್ 8ನೇ ವಾರದ ಎಲಿಮಿನೇಷನ್​ನಲ್ಲಿ ರಾಜೀವ್​ ಎಲಿಮಿನೇಟ್​​ ಆಗಿದ್ದರು. ರಾಜೀವ್ ತಮ್ಮ ಬಳಿ ಇರುವ ಗೋಲ್ಡನ್​ ಪಾಸ್​ ಬಳಸದೆ ಇದ್ದಿದ್ದು ಮನೆಯಿಂದ ಹೊರ ಹೋಗಲು ಪ್ರಮುಖ ಕಾರಣವಾಗಿತ್ತು. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ರಾಜೀವ್​​ ಹೊರ ಹೋದ ಬಗ್ಗೆ ಚರ್ಚೆ ಜೋರಾಗಿತ್ತು. ಮನೆಯಲ್ಲಿ ಇನ್ನೂ ತುಂಬಾನೇ ವೀಕ್​ ಕ್ಯಾಂಡಿಡೇಟ್​ ಇದ್ದಾರೆ. ಹೀಗಿರುವಾಗ ರಾಜೀವ್ ಮನೆಯಿಂದ ಹೊರ ಹೋಗಿದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ವೀಕ್ಷಕರು ಸೋಶಿಯಲ್​ ಮೀಡಿಯಾದಲ್ಲಿ ಎತ್ತಿದ್ದರು.

ಇದನ್ನೂ ಒದಿ: Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​

Bigg Boss Kannada: ಬಿಗ್​​ಬಾಸ್ ಮನೆಯಿಂದ ರಾಜೀವ್​ ಹೊರ ಹೋಗಿದ್ದು ಎಷ್ಟು ಸರಿ? ಸಾಮಾಜಿಕ ಜಾಲತಾಣದಲ್ಲಿ ಜೋರಾಯ್ತು ಚರ್ಚೆ

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More